ಚಿಂತಾಮಣಿ ನಗರದ ಸಾರ್ವಜನಿಕ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಸಂತೋಷ್ ಕುಮಾರ್ ಅವರ ಉತ್ತಮ ಸೇವೆಯನ್ನು ಗುರುತಿಸಿದ ಬೋವಿ ಸಮಾಜದ ಜಿಲ್ಲಾಧ್ಯಕ್ಷ ಎಂ ಗುರ್ರಪ್ಪ ಅವರ ತಂಡದಿಂದ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಎಂ ಗುರ್ರಪ್ಪ ಮಾತನಾಡಿ, “ಸರ್ಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಜತೆಗೆ ಉತ್ತಮವಾದ ಸಂಪರ್ಕ ಇಟ್ಟುಕೊಂಡು ಅವರಿಗೆ ಉತ್ತಮ ಸೇವೆಯನ್ನು ನೀಡುತ್ತ ಬರುತ್ತಿರುವ ಡಾ. ಸಂತೋಷ್ ಕುಮಾರ್ ಅವರ ಸೇವೆ ಶ್ಲಾಘನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಯೋಜನೆಗಳ ಲಾಭ ಅರ್ಹರಿಗೆ ತಲುಪುವಂತೆ ಕಾರ್ಯ ನಿರ್ವಹಿಸಬೇಕು: ಅಪರ ಜಿಲ್ಲಾಧಿಕಾರಿ
ಬೋವಿ ಸಮಾಜದ ಮುಖಂಡರಾದ ಕೃಷ್ಣಪ್ಪ, ಶ್ರೀನಿವಾಸ್, ಮುನಿಶಾಮಪ್ಪ, ಶ್ರೀನಾಥ್, ವೇಣು ಸೇರಿದಂತೆ ಇತರರು ಇದ್ದರು.