ಕೇರಳದ ಪಾಲಕ್ಕಾಡ್ ಮೂಲದ ನಿಮಿಷಾ ಪ್ರಿಯಾ ಎಂಬ ಮಹಿಳೆಯ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜೂಳಪಾಳ್ಯ ಗ್ರಾಮದ ವಕೀಲ ಡಾ. ಸಿ ಕೆ ಮೌಲಾ ಶರೀಫ್ ಅವರು ತಲಾಲ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿ, ಕುಟುಂಬದವರ ಮನ ಗೆದ್ದು ಬಂದಿದ್ದಾರೆ.
2008ರಲ್ಲಿ ಯೆಮೆನ್‌ಗೆ ತೆರಳಿ ನರ್ಸ್ ಕೆಲಸಕ್ಕೆ ಸೇರಿದ್ದ ಕೇರಳದ ಪಾಲಕ್ಕಾಡ್ ಮೂಲದ ನಿಮಿಷಾ ಪ್ರಿಯಾ ಎಂಬ ಮಹಿಳೆ ಯೆಮೆನ್ ನಿವಾಸಿ ತಲಾಲ್ ಹತ್ಯೆಯ ಆರೋಪಿಯಾಗುತ್ತಾಳೆ. 2017ರಲ್ಲಿ ಆರೋಪ ಸಾಬೀತಾಗಿ 2018ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಈ ನಡುವೆ ನಿಮಿಷ ಪ್ರಿಯಾ ಕುಟುಂಬ ಗ್ರಾಂಡ್ ಮುಫ್ತಿ ಶೇಕ್ ಅಬುಬಕರ್ ಮುಸ್ಲಿಯರ್ ಅವರ ಮಧ್ಯಸ್ಥಿಕೆ ಬಯಸಿತ್ತು. ಅಬುಬಕರ್ ಅವರ ಭಾಗಿದಾರಿಕೆ ತಲಾಲ್ ಕುಟುಂಬದೊಂದಿಗೆ ಮಧ್ಯಸ್ಥಿಕೆಗೆ ಅನುಕೂಲದ ವಾತಾವರಣ ನಿರ್ಮಿಸಿ, ಇದೀಗ ದೇಶವೇ ಅತ್ಯಂತ ಕುತೂಹಲದಿಂದ ನೋಡುತ್ತಿದ್ದ ಫಲಿತಾಂಶ ನಮ್ಮ ಕಣ್ಣಮುಂದೆ ಬಂದುನಿಂತಿದೆ.
ನಿಮಿಷಾ ಪ್ರಿಯಾಳ ಗಲ್ಲು ಶಿಕ್ಷೆ ರದ್ದುಗೊಂಡಿದೆ. ಬ್ಲಡ್ ಮನಿ ಮಾತುಕತೆ ನಡೆದು ಕ್ಷಮಾಪಣೆಗೆ ಕುಟುಂಬ ಸಜ್ಜಾಗಿದೆ ಎಂಬ ವರದಿಗಳು ಕೇಳಿಬಂದಿವೆ.
ಬಾಗೇಪಲ್ಲಿ ತಾಲೂಕಿನ ಜೂಳಪಾಳ್ಯ ಗ್ರಾಮದ ವಕೀಲ ಡಾ. ಸಿ ಕೆ ಮೌಲಾ ಶರೀಫ್ ಅವರೂ ಕೂಡ ಯೆಮನ್ ದೇಶಕ್ಕೆ ಭೇಟಿ ನೀಡಿ ತಲಾಲ್ ಕುಟುಂಬದೊಂದಿಗೆ ಸುದೀರ್ಘಕಾಲ ಚರ್ಚೆ ನಡೆಸಿ ಅವರ ಮನ ಗೆದ್ದು ವಾಪಸ್ ಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸಾಲದ ಆಮಿಷವೊಡ್ಡಿ 200 ಕೋಟಿ ರೂ. ವಂಚನೆ ಆರೋಪ: ರೋಹನ್ ಸಲ್ಡಾನಾ ಬಂಧನ
ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಸಿ ಕೆ ಮೌಲಾ ಶರೀಫ್, “ಭಾರತ ದೇಶದ ಮೂಲೆ ಮೂಲೆಯಿಂದ ಹಲವಾರು ಭಾರತೀಯರು ನರ್ಸ್ ಕೆಲಸ ಸೇರಿದಂತೆ ವಿವಿಧ ರೀತಿಯ ಕೆಲಸಗಳಿಗಾಗಿ ಹೊರದೇಶಗಳಿಗೆ ಹೋಗುತ್ತಾರೆ. ಆದರೆ ಭಾರತೀಯರು ಎಲ್ಲರೊಂದಿಗೆ ಶಾಂತಿ ಸೌಹಾರ್ದತೆಯಿಂದ ಬಾಳುವವರು. ಭಾರತೀಯರು ಒಂದು ಇರುವೆಗೂ ನೋವುಂಟು ಮಾಡುವವರಲ್ಲ. ಅಂತಹವರು ಒಬ್ಬ ಮನುಷ್ಯನನ್ನು ಹೇಗೆ ಕೊಲೆ ಮಾಡುತ್ತಾರೆಂದು ಹೇಳಿದ, ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರೊಂದಿಗೂ ದೂರವಾಣಿ ಮುಖಾಂತರ ಮಾತುಕತೆ ನಡೆಸಿ, ತಲಾಲ್ ಅವರ ಕುಟುಂಬದವರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಇಡೀ ವಿಶ್ವದ ಫೇಮಸ್ 10 ಕುಟುಂಬಗಳ ನೇತೃತ್ದಲ್ಲಿ ತಲಾಲ್ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಾಗಿದೆ” ಎಂದು ವಿವರಿಸಿದರು.