ಕೃಷಿ ಹೊಂಡದಲ್ಲಿ ಈಜಲು ಹೋದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ಮುಂತಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿಯ ಕೃಷಿ ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ಯುವಕರು ಶ್ರೀಕಾಂತ್(28), ರಮೇಶ್(24), ಲೋಕೇಶ್(32) ಮೃತ ದುರ್ದೈವಿಗಳು.
ಶುಕ್ರವಾರ ಮದ್ಯಾಹ್ನ ತಮ್ಮ ಗ್ರಾಮದ ಬಳಿಯ ಅಬ್ಬಗುಂಡು ಪ್ರಸಾದ್ ಅವರಿಗೆ ಸೇರಿದ ಕೃಷಿಹೊಂಡದಲ್ಲಿ ಶುಕ್ರವಾರ ಮಧ್ಯಾಹ್ನ ಈಜಲು ಹೋಗಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿ ಐ ಶಿವರಾಜ್, ಪಿಎಸ್ಐ ಮಮತಾ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಆಗ್ನಿಶಾಮಕ ದಳದ ಸಿಬ್ಬಂದಿಯಾದ ಲೋಕೆಶ್, ಶಿವಾರೆಡ್ಡಿ, ಶಿವಶಂಕರ್, ಚೆನ್ನಪ್ಪ, ವಿಷ್ಣು, ವಿವೇಕ್ ಸೇರಿದಂತೆ ಇತರರು ಭೇಟಿ ನೀಡಿ ಕೃಷಿ ಹೊಂಡದಲ್ಲಿ ಬಿದಿದ್ದ ಯುವಕರ ಶವಗಳನ್ನು ಹೊರತೆಗೆಯವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಮೃತ ಯುವಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಸೌಜನ್ಯ ಪ್ರಕರಣದ ಪುನರ್ ತನಿಖೆಗೆ ಡಿವೈಎಫ್‌ಐ ಆಗ್ರಹ
ಕೃಷಿ ಹೊಂಡದಲ್ಲಿ ವಿದ್ಯುತ್ ಶಾಕ್ ಸ್ಪರ್ಷದಿಂದಾಆಗಿ ಯುವಕರು ಮೃತಪಟ್ಟಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.