ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಆರ್ಬಿಟ್ ಸಂಸ್ಥೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.
ಚಿಟಗುಪ್ಪ ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ʼಮಾನಸಿಕ ಅಸ್ವಸ್ಥ ಎಂಬ ರೋಗಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿದೆ. ಮಾನಸಿಕ ರೋಗಿಗಳು ಯಾವುದೇ ಮೌಢ್ಯಾಚರಣೆಗಳಿಗೆ ಬಲಿಯಾಗದೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದುʼ ಎಂದು ಸಲಹೆ ನೀಡಿದರು.
ಆರ್ಬಿಟ್ ಸಂಸ್ಥೆಯ ನವಜೀವನ ಕಾರ್ಯಕ್ರಮ ಸಂಯೋಜಕ ಪ್ರವೀಣ ಪ್ರಾಸ್ತಾವಿಕವಾಗಿ ಮಾತನಾಡಿ, ʼಆರ್ಬಿಟ್ ಸಂಸ್ಥೆಯು ಸುಮಾರು 30 ವರ್ಷಗಳಿಂದ ಜಿಲ್ಲೆಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಸಮಾಜ ಸೇವೆಗೈಯುತ್ತಿದೆ. 2018 ರಿಂದ ಅಜೀಂ ಪ್ರೇಮ್‌ಜಿ ಹಾಗೂ 2023ರಲ್ಲಿ ಎಲ್ಎಲ್ಎಫ್ ಫೌಂಡೇಶನ್ ಸಹಯೋಗದಿಂದ ಜಿಲ್ಲೆಯ ಮಾನಸಿಕ ಅಸ್ವಸ್ಥರಿಗಾಗಿ ಕಾರ್ಯನಿರ್ವಹಿಸುತ್ತಿದೆ. ಮಾನಸಿಕ ರೋಗದಿಂದ ಗುಣಮುಖ ಹೊಂದಿದ ಫಲಾನುಭವಿಗಳು ಉಪಜೀವನ ನಡೆಸಲು ವಿವಿಧ ತರಬೇತಿ ಒದಗಿಸಿ ಸಹಕಾರ ನೀಡುತ್ತಿದೆʼ ಎಂದರು.
ಆರ್ಬಿಟ್ ಸಂಸ್ಥೆಯ ಸಹ ನಿರ್ದೇಶಕ ಫಾದರ್ ವಿಜಯಕುಮಾರ್ ಹಾಗೂ ತಾಳಮಡಗಿ ಕೇಂದ್ರದ ನಿರ್ದೇಶಕ ಫಾದರ್ ಜಾರ್ಜ್ ಮಾತನಾಡಿ, ʼದೈಹಿಕ, ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರವಹಿಸಿ ಬದುಕು ನಡೆಸಬೇಕುʼ ಎಂದರು.
ಈ ಸುದ್ದಿ ಓದಿದ್ದೀರಾ? ರೇಣುಕಸ್ವಾಮಿ ಹತ್ಯೆ ಪ್ರಕರಣ: ನಾಳೆ ದರ್ಶನ್ ಜಾಮೀನು ತೀರ್ಪು ಪ್ರಕಟ
ಕಾರ್ಯಕ್ರಮದಲ್ಲಿ ಆರ್ಬಿಟ್ ಸಂಸ್ಥೆಯ ಸಿಬ್ಬಂದಿಗಳಾದ ರೀಟಾ, ಪ್ರೀತಿ, ಹನುಮಂತ್ ,ಅರುಣ್ ಕುಮಾರ್ ಹಾಗೂ ಆಪ್ತಸಮಲೋಚಕ ಅರುಣ್ ಕೋಟೆ ಹಾಗೂ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಹಿರಿಯ ಅಧಿಕಾರಿ ದೇವೇಂದ್ರ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.