ಕೇವಲ ಒಂದು ಬಿರಿಯಾನಿಗಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಮತಾಂತರಗಳು ನಡೆಯುತ್ತವೆ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ, ಜಿಲ್ಲೆಯ ಜನರಲ್ಲಿ ಅಸಮಾಧಾನ ಹುಟ್ಟುಹಾಕಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮತಾಂತರಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದರು. ಇದೀಗ, ಅವರ ಆರೋಪವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ, ಜಿಲ್ಲೆಯ ಜನರು ಬಿರಿಯಾನಿಗಾಗಿ ಮತಾಂತರವಾಗುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
“ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶೇ.30ರಷ್ಟು ಮತಾಂತರ ಪ್ರಕ್ರಿಯೆ ನಡೆದಿದೆ. ಕರ್ನಾಟಕದ ಜಿತ್ರದುರ್ಗ ಜಿಲ್ಲೆಯಲ್ಲಿಯೂ ಮತಾಂತರ ನಡೆಯುತ್ತಿದ್ದು, ನಮ್ಮ ಮಾದಿಗ ಸಮುದಾಯದ ಜನರನ್ನು ಮತಾಂತರಗೊಳಿಸಲಾಗುತ್ತಿದೆ. ಅವರು ಆರ್ಥಿಕವಾಗಿ ಹಿಂದುಳಿದಿರುವುದನ್ನೇ ದುರ್ಲಾಭ ಮಾಡಿಕೊಳ್ಳಲಾಗುತ್ತಿದೆ. ಅದು ಯಾವ ಮಟ್ಟಕ್ಕಿದೆ ಎಂದರೆ, ಒಂದು ಬಿರಿಯಾನಿ ಕೊಟ್ಟರೂ ಸಾಕು ಜನರು ಮತಾಂತರವಾಗುತ್ತಾರೆ” ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
“ಮತಾಂತರದಿಂದ ಯಾರೂ ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯವಿಲ್ಲ. ಅದನ್ನು ಅರಿತೇ ರಾಜ್ಯ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈಗ, ಆ ಕಾಯ್ದೆಯನ್ನು ಕಾಂಗ್ರೆಸ್ ಕಿತ್ತಾಕಲು ಮುಂದಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮಂತ ಲೀಡರಗಳು ಸಮಾಜದ ಹೆಸರು ಹೇಳಿಕೊಂಡು ದೊಡ್ಡ ದೊಡ್ಡ ಹುದ್ದೆಗೆ ಹೋದಮೇಲೆ ಹಿಂದಕ್ಕೆ ತಿರುಗಿ ನೋಡದಿರುವುದರಿಂದ ಹಾಗೂ ದಲಿತರಿಗೆ ಎಷ್ಟೋ ಗ್ರಾಮಗಳಲ್ಲಿ ಮಂದಿರ ಪ್ರವೇಶವಿಲ್ಲಾ ಅದಕ್ಕೆ ನಿವೇನು ಮಾಡಿದ್ದೀರಿ ಸಾಹೇಬ್ರೆ ನಿಮಗೆ ಮಂದಿರ ಪ್ರವೇಶ ಮಾಡಲು ಬಿಟ್ಟಿಲ್ಲಾ .
ಇಷ್ಟಾದರೂ ನಿಮಗೆ ತಿಳಿಯೋದಿಲ್ಲ ಅಂದರೆ ದುರಂತವೇ ಸರಿ.
thank u