ಶಿವಮೂರ್ತಿ ಶರಣರ ವಿರುದ್ದ ನಡೆಯುತ್ತಿರುವ ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿ ಶರಣರು ಜುಲೈ 3ರಂದು ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ಆದೇಶಿಸಿದ್ದಾರೆ.
2 ಪೋಕ್ಸೊ ಪ್ರಕರಣಗಳ ಸಂಬಂಧ ಷರತ್ತುಬದ್ಧ ಜಾಮೀನು ನೀಡುವಾಗ ಶರಣರು ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲವೆಂದು ಹೈಕೋರ್ಟ್ ಆದೇಶಿಸಿತ್ತು. ಹೀಗಾಗಿ ಅವರು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಗೆ ವಿಡಿಯೊ ಸಂವಾದದ ಮೂಲಕ ಪಾಲ್ಗೊಳ್ಳುತ್ತಿದ್ದರು. ಅವರು ಸದ್ಯ ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಕೋಮುಲ್ ಸರ್ಕಾರಿ ನಾಮನಿರ್ದೇಶಕರಾಗಿ ಯೂನಸ್ ಷರೀಫ್ ನೇಮಕ
“ವಿಚಾರಣಾ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಖುದ್ದು ಹೇಳಿಕೆ ದಾಖಲು ಮಾಡುವುದು ಅವಶ್ಯವಾಗಿದೆ. ಹೇಳಿಕೆ ನೀಡಿದ ನಂತರ ಅವರು ಜಿಲ್ಲೆಯನ್ನು ತೊರೆಯಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ” ಎಂದು ವಕೀಲರು ತಿಳಿಸಿದ್ದಾರೆ.