ಶೈಕ್ಷಣಿಕ ಶುಲ್ಕವನ್ನು ಭರಿಸಲಾಗದೆ ವಿದ್ಯಾಭ್ಯಾಸ ಮುಂದುವರೆಸಲು ಕಂಗಾಲಾಗಿದ್ದ ವಿದ್ಯಾರ್ಥಿನಿಯರು ಮತ್ತವರ ಪೋಷಕರಿಗೆ ನೆರವು ನೀಡಿ, ಮಠದಿಂದ ಶುಲ್ಕವನ್ನು ಚಿತ್ರದುರ್ಗದ ಭೋವಿ ಗುರುಪೀಠದ ಸಿದ್ದರಾಮೇಶ್ವರ ಶ್ರೀಗಳು ಶಿಕ್ಷಣಕ್ಕೆ ನೆರವಾಗಿದ್ದಾರೆ.
ತನ್ನ ಕಷ್ಟ ಕಾಲದಲ್ಲಿಯೂ ಮಗಳ ಸುಂದರ ಭವಿಷ್ಯಕ್ಕಾಗಿ ಹಗಲಿರುಳು ಬೀದಿಬದಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ತುಮಕೂರು ಜಿಲ್ಲೆಯ ಶಿರಾ ತಾಲೂಕು ಗಿಣ್ಣಪ್ಪನಹಟ್ಟಿ ಗ್ರಾಮದ ಭೂತೇಶ ಹಾಗೂ ಭಾಗ್ಯ ದಂಪತಿಯ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಕಂಡಿದ್ದರು.
ಈ ದಿಸೆಯಲ್ಲಿ ಇವರ ಪುತ್ರಿ ಬಿ ಪ್ರಿಯಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದು ಎಂಜಿನಿಯರ್ ಪದವಿಗೆ ನೋಂದಣಿಯಾಗಿದ್ದಾರೆ. ಸರ್ಕಾರ ಸ್ಕಾಲರ್ಶಿಪ್ ನೀಡುವ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಶೈಕ್ಷಣಿಕ ಶುಲ್ಕವನ್ನು ಕಟ್ಟಲು ಒತ್ತಡ ಹೇರುತ್ತಿದ್ದು, ಇವರ ವಿದ್ಯಾಭ್ಯಾಸಕ್ಕೆ ತಡೆಯೊಡ್ಡುತ್ತಿದೆ.
ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ ಎಸ್ ದ್ವಾರಕನಾಥ್ ನಾಮನಿರ್ದೇಶಕ್ಕೆ ಆಗ್ರಹ
ಇದರಿಂದ ಕಂಗಾಲಾದ ಪೋಷಕರು ದಾರಿ ಕಾಣದೆ ಚಿತ್ರದುರ್ಗದ ಭೋವಿ ಗುರುಪೀಠದ ಮೊರೆ ಹೋಗಿದ್ದರು. ಆರ್ಥಿಕ ಸಂಕಷ್ಟದ ಸಂದರ್ಭವನ್ನು ಕುಟುಂಬವು ನಿವೇದಿಸಿಕೊಂಡಾಗ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರು ಕಾಲೇಜಿಗೆ ₹1,10,000(ಒಂದು ಲಕ್ಷದ ಹತ್ತು ಸಾವಿರ) ನೀಡುವುದರ ಮೂಲಕ ಬಡಕುಟುಂಬದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.