ನಮ್ಮ ಭಾರತದ ಕಾನೂನಿನ ಅಡಿಯಲ್ಲಿ ಬಾಲ್ಯವಿವಾಹ ಕಾಯ್ದೆ ಪ್ರಕಾರ 18 ವರ್ಷದೊಳಗಿನವರಿಗೆ ಮದುವೆ ಮಾಡಬಾರದು ಅಥವಾ ಅವರು ಮಾಡಿಕೊಳ್ಳಬಾರದು. ಮಕ್ಕಳಿಗೆ ವಿದ್ಯೆಯನ್ನು ಕೊಡಿಸಿ ಛಲ ತುಂಬಬೇಕು. ವಿದ್ಯಾರ್ಜನೆ ಬಾಲ್ಯವಿವಾಹ ತಡೆಗೆ ದಾರಿಯಾಗಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕಾಂಗ್ರೆಸ್ ಮುಖಂಡ ಆರ್ ಕೆ ಸರ್ದಾರ್ ಕರೆ ನೀಡಿದರು.
ಚಿತ್ರದುರ್ಗದಲ್ಲಿ ಸೆಪ್ಟಂಬರ್ 10ರಂದು ಟಿಪ್ಪು ಸ್ಪೋರ್ಟ್ಸ್ ಕ್ಲಬ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕಾಯಿದೆ ಹಾಗೂ ಮಹಿಳೆಯರು, ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಕ್ಕಳಿಗೆ ಮದುವೆ ಮುಖ್ಯವಲ್ಲ. ವಿದ್ಯಾಭ್ಯಾಸ ಮುಖ್ಯವಾಗಿರುತ್ತದೆ. ಉತ್ತಮ ವಿದ್ಯಾಭ್ಯಾಸದ ನಂತರ ವಯಸ್ಕರಾದ ಮೇಲೆ ಮದುವೆ ಮಾಡಬೇಕು” ಎಂದು ಕರೆ ನೀಡಿದರು.
“ನಮ್ಮ ರಾಷ್ಟ್ರ ಭಾರತ, ಬೇರೆ ಯಾವುದೋ ದೇಶವಲ್ಲ. ನಮ್ಮ ಭಾರತದ ಕಾನೂನಿಗೆ ವಿರುದ್ಧವಾಗಿ ನೆಡೆದರೆ, ಬಾಲ್ಯವಿವಾಹ, ಅನೈತಿಕ ಚಟುವಟಿಕೆಗಳಾದರೆ ಕಾನೂನಿನ ನಿಟ್ಟಿನಲ್ಲಿ ಕ್ರಮ ಜರುಗಿಸುವುದು ಖಚಿತ. ಧರ್ಮ ಜೀವನದ ಒಂದು ಭಾಗವಷ್ಟೆ. ಹಿಂದಿನ ಕಾಲದ ಜನರು ವಿದ್ಯೆ ಇಲ್ಲದಂತೆ ಮಕ್ಕಳನ್ನು ಬೆಳೆಸುವ ಅನಿವಾರ್ಯತೆ, ಸಂದರ್ಭ ಇತ್ತು. ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲರಿಗೂ ಶಿಕ್ಷಣ ದೊರೆಯುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ-ಪೂನಾ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ; ಸೆ.15ರಂದು ಚಾಲನೆ
ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಮ್ಜದ್, ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್ ಪೀರ್, ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ, ಮಹಾಬೂಬ ಖಾನ್, ರಹಮತುಲ್ಲಾ, ನಗರ ಸಭೆ ಸದಸ್ಯ ನಸ್ರು, ಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.