ಚಿತ್ರದುರ್ಗ | ದಾರಿ ತಪ್ಪುತ್ತಿರುವ ಸಮಾಜಕ್ಕೆ ವಚನಗಳ ಅಗತ್ಯವಿದೆ: ಹಂಪಿ ಕುಲಪತಿ ಪರಮಶಿವಮೂರ್ತಿ

Date:

Advertisements

ಮೌಲ್ಯ ಮರೆತು ದಾರಿ ತಪ್ಪುತ್ತಿರುವ ಸಮಾಜಕ್ಕೆ ಮತ್ತೆ ವಚನ ಹಾಗೂ ವಚನಕಾರರ ಅಗತ್ಯವಿದೆ. ಹಾಗಾಗಿ 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಪ್ರಯತ್ನಿಸಿದ ವಚನಕಾರರ ಪರಂಪರೆ ಮುಂದುವರಿಕೆಗೆ ʼಸತ್ಯವ್ರತಿಯ ಸ್ಪಷ್ಟಪದಿʼ ಕೃತಿ ಸಾಕ್ಷಿಯಾಗಿದೆ ಎಂದು ಹಂಪಿ ಕುಲಪತಿ ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಚಿತ್ರದುರ್ಗದಲ್ಲಿ ಶರಣ ಸಾಹಿತ್ಯ ಪರಿಷತ್, ರೋಟರಿ ಪೋರ್ಟ್ ಮತ್ತು ಮುಕ್ತ ವೇದಿಕೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಡಾ.ಜಿಎನ್ ಮಲ್ಲಿಕಾರ್ಜುನಪ್ಪ ಇವರ “ಸತ್ಯವ್ರತಿಯ ಸ್ಪಷ್ಟಪದಿ”ಗಳು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

“ವಚನಕಾರರು ಅರಿವು ಮನುಷ್ಯತ್ವ ವಿಸ್ತರಣೆಯ ಗುರಿಯತ್ತ ಪ್ರಯತ್ನ ಪಟ್ಟರು. ಅದೇ ಪರಂಪರೆ ಇಂತಹ ಕೃತಿಗಳ ಮೂಲಕ ಮುಂದುವರೆದಿದೆ. ಅವರು, ದಾರಿ ತಪ್ಪುತ್ತಿರುವ ಪ್ರಸ್ತುತ ಸಂದರ್ಭದ ಆತಂಕದ ಕಾಲದಲ್ಲಿ ವಚನಕಾರರು ಮತ್ತೆ ಬೇಕಾಗಿದ್ದಾರೆ. ಇವತ್ತು ಜಗತ್ತು ಕ್ರೂರತೆಯತ್ತ ಸಾಗುತ್ತಿದೆ. ನಮ್ಮ ಕ್ರೂರತೆ, ಕ್ರೌರ್ಯ ಅಹಂಕಾರಗಳನ್ನು ಸರಿದಾರಿಗೆ ತರಲು ವಚನಕಾರರಂತಹ ಪ್ರಾಮಾಣಿಕ ಪ್ರಯತ್ನ ಮೌಲ್ಯಗಳು ಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

Advertisements

ಕಾವ್ಯದ ಪ್ರಯೋಜನ ಮತ್ತು ಉಪಯೋಗಗಳು ಕಾಲಕಾಲಕ್ಕೆ ಚರ್ಚೆಯಾಗುತ್ತದೆ. ಆದರೆ ಎಂದಿಗಿಂತ ಇಂದು ಕಾವ್ಯದ ಅಗತ್ಯ ಹೆಚ್ಚಾಗಿದೆ. ಸಮಾಜದ ಕಣ್ಣು ತೆರೆಸುವ ಪ್ರಯತ್ನ ಹೆಚ್ಚಾಗಬೇಕು. ಹಾಗಿದ್ದಲ್ಲಿ ಮಾತ್ರ ಸಮಾಜ ಕ್ರೌರ್ಯ ಅಹಂಕಾರ ತೊರೆದು ಸ್ವಸ್ತವಾಗಿರಲು ಸಾಧ್ಯ.‌ ಅಹಂಕಾರ ಕ್ರೌರ್ಯವನ್ನು ನಾಶ ಮಾಡುವ ಕಾವ್ಯ ಬೇಕಾಗಿದೆ. ಸಜ್ಜನರ ಮನಸ್ಸು ಹೇಗೆ ಮೌನಕ್ರಾಂತಿಯನ್ನು ಬಯಸುತ್ತದೆಯೋ, ಹಾಗೆ ಈ ಸ್ಪಷ್ಟಪದಿ ಮೌನವಾಗಿ ಕ್ರಾಂತಿಗೆ ತೆರೆದಿಡುತ್ತದೆ. ಇದು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವಾಗಿದೆ ಎಂದು ಪ್ರಶಂಶಿಸಿದರು.

ಸಂಶೋಧಕ, ಪ್ರೊ. ರಾಜಶೇಖರಪ್ಪ ಮಾತನಾಡಿ, “ನಮ್ಮ ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ತ್ರಿಪದಿಗಳು ಸೋಮೇಶ್ವರ ಶತಕ ವಚನಗಳಿಂದ ಹಿಡಿದು ಇತ್ತೀಚಿನವರೆಗೆ ಅಂದರೆ ಡಿವಿಜಿಯವರ ಕಗ್ಗಗಳು ಇವೆ. ಅವುಗಳನ್ನು ಕನ್ನಡ ಸಾಹಿತ್ಯದ ಮುತ್ತುಗಳಿದ್ದ ಹಾಗೆ. ಅದೇ ರೀತಿ ಸತ್ಯವ್ರತಿಯ ಸ್ಪಷ್ಟಪದಿ ಕೃತಿ ಅದೇ ದಾರಿಯಲ್ಲಿದೆ. ಯಾರು ಸತ್ಯಕ್ಕಾಗಿ ಹಂಬಲಿಸುವರು ಮತ್ತು ಅದನ್ನು ಅನುಸರಿಸುವರು ಅವರನ್ನೇ ಸತ್ಯವ್ರತಿ ಎನ್ನುತ್ತಾರೆ. ಇಲ್ಲಿಯ ಸಾಹಿತ್ಯ ವಚನಗಳನ್ನು ಹೋಲುತ್ತದೆ. ಈ ಭೂಮಿಯ ಮೇಲಿನ ವ್ಯಕ್ತಿಯ ಜೀವನದ ಸಂಸಾರಿಕ, ರಾಜಕೀಯ, ಶೋಷಣೆ ಎಲ್ಲವನ್ನೂ ಈ ಸ್ಪಷ್ಟಪದಿ ಸಾಹಿತ್ಯಿಕವಾಗಿ ಒಳಗೊಂಡಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ವಕ್ಫ್‌ ಮಸೂದೆ ಮೂಲಕ ಮುಸ್ಲಿಮರ ಆಸ್ತಿ ಕಸಿಯಲು ಬಿಜೆಪಿ ಹುನ್ನಾರ: ಅಪ್ಸರ್ ಕೊಡ್ಲಿಪೇಟೆ

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಪ್ಪನವರ ಧರ್ಮ ಪತ್ನಿ ಶರಣೆ ಸುಲೋಚನಮ್ಮ ಅವರಿಗೆ ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ವೀರೇಶ್, ಕೃತಿ ಕರ್ತೃ ಡಾಕ್ಟರ್ ಜಿ ಎನ್ ಮಲ್ಲಿಕಾರ್ಜುನಪ್ಪ, ವ್ಯಂಗ್ಯ ಚಿತ್ರಕಾರ ಜಬಿವುಲ್ಲಾ ಆಸಾದ್, ರಂಗಕರ್ಮಿ ಗಣೇಶಯ್ಯ, ಉಪನ್ಯಾಸಕರಾದ ಬಸವರಾಜ, ಶಿವಲಿಂಗಯ್ಯ, ಪ್ರೊ.ರಂಗಸ್ವಾಮಿ, ನಾಗರಾಜ್, ಶರಣಪ್ಪ ಸೇರಿದಂತೆ ಇತರ ಕವಿಗಳು, ಕಾವ್ಯಾಭಿಮಾನಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X