ಕುರಿಗಳನ್ನು ಕಳುವು ಮಾಡಿಕೊಂಡು ಪರಾರಿಯಾಗಿದ್ದ ಕುರಿಗಳ್ಳರನ್ನು ರಾಂಪುರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆ ಎಂಬುವವರು ವಾಹನ ಸಮೇತವಾಗಿ ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ರಾಮಸಾಗರ ಗ್ರಾಮದ ಸಣ್ಣ ಗಂಗಪ್ಪನವರು ಸೆಪ್ಟೆಂಬರ್ 25ರಂದು ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಅನ್ವಯ ಚಿತ್ರದುರ್ಗ ಜಿಲ್ಲೆಯ ಪೋಲಿಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕುಮಾರಸ್ವಾಮಿ, ಪೊಲೀಸ್ ಉಪಾಧೀಕ್ಷಕ ಟಿ ಬಿ ರಾಜಣ್ಣ ಹಾಗೂ ಮೊಳಕಾಲ್ಮೂರು ವೃತ ನಿರೀಕ್ಷಕ ವಸಂತ ವಿ ಅಸೋದೆ ಅವರ ಮಾರ್ಗದರ್ಶನದಲ್ಲಿ ಶೀಘ್ರವಾಗಿ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲು ರಾಂಪುರ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ, ಎಎಸ್‌ಐ ಎಸ್ ಲೋಕೇಶ್, ಹೆಚ್ ಸಿ ಇಮಾಮ್ ಹುಸೇನ್-1317, ಶಶಿಕುಮಾರ್ ಪಿಸಿ-2320, ಕುಬೇರ್ ಪಿಸಿ-2638, ದಾವಲ ಮಾಲಿಕ್ ಪಿಸಿ-2252, ತಿಮ್ಮಾರೆಡ್ಡಿ ಪಿಸಿ-2712 ಸೇರಿದಂತೆ ಒಟ್ಟು 7 ಜನರನ್ನು ಒಳಗೊಂಡ ತಂಡವನ್ನು ರಚಿಸಿದ್ದರು.
ರಾಂಪುರ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅವರು ರೌಂಡ್ಸ್‌ಗೆಂದು ತೆರಳಿದಾಗ ಸದರಿ ತಂಡದವರು ಭಾತ್ಮಿದಾರರ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ದೇವಸಮುದ್ರ ಕ್ರಾಸ್ ಬಳಿ ಓಮಿನಿ ವಾಹನದಲ್ಲಿ12 ಕುರಿಗಳ ಸಾಗಾಣಿಕೆ ಕಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪದ ಕೃತ್ಯ ಬಯಲಾಗಿದೆ. ಈ ವೇಳೆ ದಾವಣಗೆರೆ ಮೂಲದ ಮೂರು ಆರೋಪಿಗಳು ಸ್ವತಃ ತಾವೇ ಕುರಿಗಳನ್ನು ಕದ್ದಿರುವುದು ಎಂದು ಒಪ್ಪಿಕೊಂಡಿದ್ದಾರೆ.
ಸಣ್ಣಗಂಗಪ್ಪ ಅವರ ಬಾಬ್ತು ಅಂದಾಜು ₹ 80,000 ಬೆಲೆ ಬಾಳುವ 12 ಕುರಿಗಳನ್ನು ಕಳ್ಳತನ ಮಾಡಿಕೊಂಡು ಕೆಎ-22 Z-5173 ನಂಬರ್‌ನ ಓಮಿನಿ ವಾಹನದಲ್ಲಿ ಕುರಿಗಳನ್ನು ಸಾಗಿಸುತ್ತಿದ್ದುದ್ದನ್ನು ಕಂಡು ರಾಂಪುರ ಠಾಣೆಯ ಮೊಕದ್ದಮೆ ನಂಬರ್ 118/2024 ಕಲಂ:303(2)BNS -2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಮಲಾಪುರ | ಬೌದ್ಧರ ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹500 ಕೋಟಿ ನೀಡಲು ಒತ್ತಾಯಿಸಿ ಮನವಿ
ರಾಂಪುರ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಇವರ ಕಾರ್ಯ ವೈಖರಿಗೆ ರಾಂಪುರ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದು, “ಈ ಪಿಎಸ್‌ಐ ಬಂದಾಗಿನಿಂದ ರಾಂಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಂತಿ ಸೌಹಾರ್ದತೆ ಹೆಚ್ಚಾಗುತ್ತಿದೆ” ಎಂದು ತಿಳಿಸಿದರು.
ವರದಿ: ಸಿದ್ದೇಶ ಜಿ ವೆಂಕಟಪುರ ಮೊಳಕಾಲ್ಮೂರು