ಚಿತ್ರದುರ್ಗ | ಮುಗ್ಧರನ್ನು ಪ್ರಬುದ್ಧರನ್ನಾಗಿಸಲು ಶಿಕ್ಷಣ ಕ್ರಾಂತಿ ಮಾಡಿದವರು ಮಂಜರಿ ಹನುಮಂತಪ್ಪ: ಭೋವಿ ಗುರುಪೀಠ ಶ್ರೀ

Date:

Advertisements

ಮುಗ್ಧರನ್ನು ಪ್ರಭುದ್ಧರನ್ನಾಗಿಸಲು ಶಿಕ್ಷಣಕ್ರಾಂತಿ ಮಾಡಿದವರು ಭೋವಿ ಕುಲತಿಲಕ ದಿ. ಮಂಜರಿ ಹನುಮಂತಪ್ಪ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನುಡಿದರು.

ಚಿತ್ರದುರ್ಗ ನಗರದ ತ ರಾ ಸು ರಂಗಮಂದಿರದಲ್ಲಿ ಜರುಗಿದ ಮಂಜರಿ ಹನುಮಂತಪ್ಪರವರ ಸ್ಮರಣೋತ್ಸವ ಹಾಗೂ ಎಸ್ ಜೆ ಎಸ್ ಜ್ಞಾನ ಸಂಭ್ರಮದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, “ಮಂಜರಿ ಹನುಮಂತಪ್ಪ ಅವರು ಶಿಕ್ಷಣ ಹಾಗೂ ಸಂಘಟನೆ ಮಹತ್ವದ ಅರಿತು, ಅಂದು ನೆಟ್ಟಿದ್ದ ಸಸಿಯ ಫಲವನ್ನು ಇಂದು ಸದೃಢ ಸಂಘಟನೆ, ನೌಕರರು ಮತ್ತು ಮೀಸಲಾತಿಯ ಫಲಾನುಭವಿಗಳಾಗಿ ಇಂದಿನ ಪೀಳಿಗೆ ಅನುಭವಿಸುತ್ತಿದೆ” ಎಂದರು.

“ಗೌರವಯುತ, ಸ್ವಾವಲಂಬಿ ಬದುಕು ಹಾಗೂ ಆಧುನಿಕ ಯುಗದಲ್ಲಿ ಕುಲವೃತ್ತಿಗಳಿಂದ ಸ್ಪರ್ಧಾತ್ಮಕ ವೃತ್ತಿ ಬದುಕಿಗೆ ಶಿಕ್ಷಣವೆಂಬುದು ಭದ್ರ ಅಡಿಪಾಯವಾಗಿದೆ ಎಂಬುದನರಿತು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ನೂರಾರು ಮಕ್ಕಳಿಗೆ ಜ್ಞಾನಜ್ಯೋತಿ ಬೆಳಗಿ, ಆ ಮನೆಗಳ ನಂದಾದೀಪಾ ಹಚ್ಚಿದವರು ಶಿಕ್ಷಣ ಪ್ರೇಮಿ ಹನುಮಂತಪ್ಪರವರು. ಅಸಂಘಟಿತ ಅರೆ ಅಲೆಮಾರಿ ಸಮಾಜವಾದ ಭೋವಿ ಸಮಾಜಕ್ಕೆ ಪ್ರಪ್ರಥಮ ಸಂಘಟಿತ ರಾಜ್ಯಸಂಘವನ್ನು ಕಟ್ಟಿ, ಸಾಂಘಿಕ ಶಕ್ತಿಯನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತದ ಪ್ರಥಮ ಪ್ರಧಾನ ಮಂತ್ರಿಗಳ ಮುಂದೆ ಪ್ರಕಾಶಿಸಿದವರು ಮಂಜರಿ ಹನುಮಂತಪ್ಪ ಹಾಗೂ ತಂಡದವರು. ಮಂಜರಿ ಹನುಮಂತಪ್ಪ ಅಖಂಡ ಕರ್ನಾಟಕದ ಭೋವಿ ಸಮಾಜಕ್ಕೆ ಏಕರೂಪದ ಮೀಸಲಾತಿಗಾಗಿ ಹೋರಾಡಿ ಪ್ರಾದೇಶಿಕ ನ್ಯಾಯ ನೀಡಿ, ಸ್ತ್ರೀಕುಲಕ್ಕೆ ಶಿಕ್ಷಣದ ಅವಕಾಶ ನೀಡಿದವರು”ಎಂದು ಶ್ಲಾಘಿಸಿದರು.

Advertisements

ಕೊಡಗಿನ ಮಹಾಂತ ಶ್ರೀಗಳು ಮಾತನಾಡಿ “ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಅವರು ಭವಿಷ್ಯದ ಸತ್ಪ್ರಜೆಗಳಾಗಲು ಮಾರ್ಗದರ್ಶನ ನೀಡಬೇಕು. ಶಿಕ್ಷಣ ಕೇವಲ ಸರ್ಟಿಫಿಕೇಟ್ ತೆಗೆದುಕೊಳ್ಳಲು, ಕೆಲಸ ಪಡೆಯಲು ಸೀಮಿತವಾಗಬಾರದು. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ಶಿಕ್ಷಣದ ಅವಶ್ಯಕತೆ ಇಂದಿನ ಸಮಾಜಕ್ಕೆ ತುರ್ತು ಅಗತ್ಯವಿದೆ. ವ್ಯಕ್ತಿ ಮತ್ತು ಸಮಾಜದ ಅಂಧಕಾರವನ್ನು ತೊಲಗಿಸುವ ಬೆಳಕಾದ ಜ್ಞಾನದ ಜೊತೆಯಲ್ಲಿ ಸಂಸ್ಕಾರ ಅಳವಡಿಸಿಕೊಂಡಾಗ ನಮ್ಮ ಸಂಸ್ಕೃತಿ ಭವ್ಯ ಹಾಗೂ ದಿವ್ಯತೆಯಿಂದ ಕೂಡಿರುತ್ತದೆ” ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗಭೂಷಣ್ ಮಾತನಾಡಿ, “ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು. ಇವರನ್ನು ಉತ್ತಮವಾದ ಸಂಸ್ಕಾರಯುತವಾದ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಜೀವನವನ್ನು ಸುಗಮವಾಗಿಸಬೇಕಿದೆ. ಶ್ರೀಗಳು ತಮ್ಮ ಸಮಾಜದ ಕಾರ್ಯದ ಜೊತೆಗೆ ಶಿಕ್ಷಣದಲ್ಲಿಯೂ ಸಹಾ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಮೂಲಕ ಎಲ್ಲರನ್ನು ಜ್ಞಾನವಂತರನ್ನಾಗಿ ಮಾಡುತ್ತಿದ್ದಾರೆ” ಎಂದರು.

ಕರ್ನಾಟಕ ಸರ್ಕಾರದ 2023ನೇ ಸಾಲಿನ ಶಿಲ್ಪಕಲಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಿ ಶಿವಶಂಕರ ಅವರಿಗೆ ಹಾಗೂ 2024 ಶಿಲ್ಪಕಲಾ ಅಕಾಡಮಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶ್ರೀನಿವಾಸ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ

ಕಾರ್ಯಕ್ರಮದಲ್ಲಿ ಯಾದವ ಗುರುಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಕಾರ್ಯನಿರ್ವಾಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ, ಜಗಳೂರಿನ ಅರ್ಜುನಪ್ಪ, ಉಡುಪಿಯ ರಾಜು, ಕಂಪ್ಲಿಯ ಮೌನೇಶ, ವಿಧ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X