ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ʼಶ್ರೀ ಮುಕ್ತರಂಗ ಕಲಾ ವೇದಿಕೆ ಸಮಿತಿ ಟ್ರಸ್ಟ್ ಕಲಮರಹಳ್ಳಿʼಯಿಂದ ಆಯೋಜಿಸಿದ್ದ ‘ಮೋಳಿಗೆ ಮಾರಯ್ಯ’ ಎಂಬ ಕಿರುನಾಟಕ ಜನವರಿ 11ರಂದು ಯಶಸ್ವಿ ಪ್ರದರ್ಶನ ಕಂಡಿತು.
ಈ ನಾಟಕವನ್ನು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿ, ಜಗದೀಶ ಆರ್ ಜಾಣೆ ನಿರ್ದೇಶಿಸಿದ್ದರು.

ಕಲ್ಯಾಣದ ಬಸವ ತತ್ವಕ್ಕೆ ಆಕರ್ಷಿತನಾಗಿ ರಾಜಪದವಿಯನ್ನೇ ತ್ಯಜಿಸಿ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ಸಾಮಾನ್ಯರೊಳಗೆ ಸಾಮಾನ್ಯನಾಗಿ ಬದುಕಿದ ಒಬ್ಬ ಶರಣನ ಕಥಾ ಹಂದರವುಳ್ಳ ಈ ನಾಟಕವನ್ನು ʼಧಾತ್ರಿ ರಂಗ ಸಂಸ್ಥೆ ಸಿರಿಗೆರೆʼಯ ನುರಿತ ಕಲಾವಿದರು ಅಭಿನಯಿಸುವ ಮೂಲಕ ಪ್ರೇಕ್ಷಕರನ್ನು ಮನಸೂರೆಗೊಂಡರು.
ಈ ಸುದ್ದಿ ಓದಿದ್ದೀರಾ?: ಚಿತ್ರದುರ್ಗ | ಶಿಕ್ಷಕರಿಗೆ ʼಗುರುವಂದನೆʼ, ‘ಉಚಿತ ಆರೋಗ್ಯ ತಪಾಸಣಾ ಶಿಬಿರ’
ಪ್ರದರ್ಶನಕ್ಕೂ ಮುನ್ನ ಕಲಮರಹಳ್ಳಿ ಮುಜುರೆ ಗ್ರಾಮದ ಹಿರಿಯ ಮುಖಂಡರುಗಳು, ಗ್ರಾಮ ಪಂಚಾಯಿತಿ ಸದಸ್ಯರು, ಕಲಾ ಟ್ರಸ್ಟ್ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಎಸ್ ಪಿ ತಿಪ್ಪೇಸ್ವಾಮಿ, ಎಂಜೇರು ರಂಗಸ್ವಾಮಿ, ಬಲರಾಮೇಗೌಡರು, ಕಲಾ ವೇದಿಕೆ ಸಂಚಾಲಕರಾದ ರವಿಶಂಕರ್, ಕಾಂತರಾಜು, ಮಧು ಲಿಂಗೇಗೌಡ, ಹಿರಿಯ ಮುಖಂಡರಾದ ಶಿವಣ್ಣ, ಪಾಂಡಪ್ಪ, ರಂಗಸ್ವಾಮಿ ಜಾಲಿಹಟ್ಟಿ, ಕಲಾಭಿಮಾನಿಗಳು ಮತ್ತು ಗ್ರಾಮಸ್ಥರು ಇದ್ದರು.
