ಚಿತ್ರದುರ್ಗ | ಸಂವಿಧಾನ ಪ್ರತಿಜ್ಞಾ ವಿಧಿ ಬೋಧನೆ

Date:

Advertisements

ದೇಶದಲ್ಲಿ ನಾವು ಆಯ್ಕೆ ಮಾಡುವ ವ್ಯಕ್ತಿ ಸದ್ಗುಣ ಹಾಗೂ ಎಲ್ಲರನ್ನೂ ಒಳಗೊಳ್ಳುವ ಗುಣಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ಸಂವಿಧಾನವೂ ಈ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ ಪಿ ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ “ಕೋಟೆ ನಾಡು ಬೌದ್ಧ ವಿಹಾರ”ದಲ್ಲಿ ಭಾರತೀಯ ಬೌದ್ಧ ಮಹಾಸಭಾ ನೇತೃತ್ವದಲ್ಲಿ ಆಯೋಜಿಸಿದ್ದ ಭಾರತ ಸಂವಿಧಾನ ದಿನದ ಪ್ರಯುಕ್ತ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

“ಬುದ್ದ, ಬಸವ, ಅಂಬೇಡ್ಕರ್ ಮುಂತಾದ ಮಹಾನ್ ನಾಯಕರ ಆಶಯಗಳು ಉಳಿಯಬೇಕಾದರೆ, ಸರ್ವರಿಗೂ ಸಮಾನತೆ ಸಾರಿದ ಸಂವಿಧಾನ ಆಶಯಗಳನ್ನು ಈಡೇರಿಸುವ ಅವಶ್ಯಕತೆ ಇದೆ. ಅಸಮಾನತೆಯನ್ನೇ ಹಾಸಿಕೊಂಡು ಬೆಳೆದಂತಹ ಭಾರತದ ಚರಿತ್ರೆಯಲ್ಲಿ ಸರ್ವರಿಗೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಮಾನ ಅವಕಾಶಗಳನ್ನು ಖಾತ್ರಿ ಪಡಿಸಿರುವುದರಿಂದಲೇ ಭಾರತ ಸಂವಿಧಾನ ವಿಶ್ವ ಶ್ರೇಷ್ಠವಾಗಿದೆ” ಎಂದರು.

Advertisements

ನಿವೃತ್ತ ಉಪನಿರ್ದೇಶಕ ಶಿವಕುಮಾರ್ ಮಾತನಾಡಿ, “ರೂಢಿ, ಸಂಪ್ರದಾಯ, ನಂಬಿಕೆ, ಕಂದಾಚಾರ ಮೌಲ್ಯಗಳಿಂದ ದೂರವಾಗಬೇಕು. ಸರ್ವರನ್ನು ಸಮಾನವಾಗಿ ಕಾಣಬೇಕು ಮುಂತಾದ ಸಂವಿಧಾನ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಈ ಸಂವಿಧಾನಕ್ಕೆ ಮೌಲ್ಯ ಬರುತ್ತದೆ. ಸಂವಿಧಾನ ಉಳಿಸುವ ಮೂಲಕ ಭಾರತ ದೇಶವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಕಟ್ಟಲು ಶ್ರಮಿಸೋಣ” ಎಂದರು.

ನಿವೃತ್ತ ಪ್ರಾಂಶುಪಾಲ ಜೆ ಯಾದವ ರೆಡ್ಡಿ ಮಾತನಾಡಿ, “ವಿಶ್ವದ ಅತ್ಯಂತ ದೊಡ್ಡ ಹಾಗೂ ಮಹತ್ವ ಪೂರ್ಣ ಸಂವಿಧಾನವನ್ನು ರಕ್ಷಿಸುವುದರ ಜೊತೆಗೆ ಅವುಗಳ ಪಾಲನೆಯೂ ಅಷ್ಟೇ ಅವಶ್ಯಕ. ಆದರೆ ಇಂದು ಸಂವಿಧಾನ ಮೂಲ ಆಶಯಗಳೇ ಈಡೇರುತ್ತಿಲ್ಲ. ಇಂದು ದೇಶದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ಸರ್ವಾಧಿಕಾರತ್ವ ಹೆಚ್ಚಾಗುತ್ತಿದೆ. ವಿಚಾರವಾದಿಗಳು ಮುಕ್ತವಾಗಿ ಮಾತನಾಡಲು ಆಗುತ್ತಿಲ್ಲ. ಯುವಜನರಿಗೆ ಉದ್ಯೋಗಗಳು ಸಿಗುತ್ತಿಲ್ಲ” ಎಂದರು.

“ಮೀಸಲಾತಿ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ. ಮೀಸಲಾತಿ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಸಾರ್ವಜನಿಕ ವಲಯದ ಕಂಪನಿಗಳನ್ನೆಲ್ಲ ಖಾಸಗೀಕರಣ ಮಾಡಲಾಗುತ್ತಿದೆ. ಈ ದೇಶದಲ್ಲಿ ಶಾಲೆಗಳಿಗಿಂತ ದೇವಾಲಯಗಳೇ ಹೆಚ್ಚಾಗಿವೆ. ಅಂಬೇಡ್ಕರ್ ಕಂಡಂತಹ ಕನಸು ನನಸಾಗಬೇಕಾದರೆ ಇಂದಿನ ಯುವಜನರು ಶಿಕ್ಷಣದ ಮಹತ್ವ ಅರಿತು ವೈಚಾರಿಕತೆಗೆ ಕೈಜೋಡಿಸಬೇಕು” ಎಂದರು.

ಹಿರಿಯ ಸಾಹಿತಿ ಎಚ್ ಲಿಂಗಪ್ಪ ಮಾತನಾಡಿ, “ಸಂವಿಧಾನ ರಚಿಸಿದ ಅಂಬೇಡ್ಕರ್ ಈ ಜಗತ್ತು ಕಂಡ ಮಹಾನ್ ಜ್ಞಾನಿ. ಅಂಬೇಡ್ಕರ್ ಅವರ ಮೇಲೆ ಪ್ರಭಾವ ಬೀರಿದ ನಾಲ್ಕು ಅಂಶಗಳಾದ ಕಬೀರರ ದೋಹೆಗಳು, ಸಾವಿತ್ರಿ ಬಾಯಿ ಹಾಗೂ ಜ್ಯೋತಿ ಬಾ ಫುಲೆ ಅವರ ಶಿಕ್ಷಣ ಸುಧಾರಣೆಗಳು ಹಾಗೂ ತಂದೆತಾಯಿ ಮತ್ತು ಅತ್ತೆಯವರ ಆದರ್ಶಗಳು ಜ್ಞಾನದ ಪರ್ವತವಾಗಿ ಬೆಳೆದು, ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡುವುದರ ಮೂಲಕ ಶೋಷಿತ ಸಮುದಾಯಗಳ ರಕ್ಷಣೆ ಮತ್ತು ದೇಶದ ಅಭಿವೃದ್ಧಿಗೆ ಕಾರಣವಾಗಿದೆ” ಎಂದರು.

“ಅಂಬೇಡ್ಕರ್ ಸಂವಿಧಾನ ರಚಿಸುವಂತಾಗಿದ್ದು, ಕಾಲ ಚಕ್ರದ ಮಹಿಮೆ. ಸ್ವದೇಶಿ ಹೋರಾಟದ ಅಸ್ತ್ರದಿಂದಲೇ ಸ್ವಾತಂತ್ರ್ಯ ಗಳಿಸಿದ ಭಾರತಕ್ಕೆ ವಿದೇಶದ ಸಂವಿಧಾನ ತಜ್ಞ ಸರ್ ಐಫರ್ ಜಫರ್ಸನ್ ನಿಂದ ಭಾರತದ ಸಂವಿಧಾನ ಬರೆಸುವುದು, ಭಾರತ ಸ್ವಾತಂತ್ರ್ಯ ಚಳುವಳಿಯ ಸ್ವದೇಶಿ ಅಸ್ತ್ರಕ್ಕೆ ಕಪ್ಪು ಚುಕ್ಕೆಯಾಗುತ್ತದೆ ಎಂದು ಮಹಾತ್ಮ ಗಾಂಧಿ, ದೇಶೀಯವಾಗಿ ಪ್ರಬುದ್ಧ ಪಾಂಡಿತ್ಯ ಹೊಂದಿದ್ದ ಬಾಬಾ ಸಾಹೇಬರಿಂದ ಸಂವಿಧಾನ ಬರೆಸುವ ತೀರ್ಮಾನ ಮಾಡಿದ್ದು ಸ್ಮರಣೀಯ” ಎಂದು ಸಭೆ ಅಭಿಪ್ರಾಯಪಟ್ಟಿತು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸಂವಿಧಾನ ಕೇವಲ ಪುಸ್ತಕವಲ್ಲ, ಬದುಕಿನ ಭಾಗವಾಗಿದೆ: ಸತ್ರ ನ್ಯಾಯಾಧೀಶ ಮಾರುತಿ ಬಾಗಡೆ

ಈ ಸಂದರ್ಭದಲ್ಲಿ ಪ್ರೊಫೆಸರ್ ಕರಿಬಸಪ್ಪ, ನಿವೃತ್ತ ಪ್ರೊಫೆಸರ್ ಪರಮೇಶ್ವರಪ್ಪ, ತುರುವನೂರು ಜಗನ್ನಾಥ್, ಹುಚ್ಚವನಳ್ಳಿ ವೆಂಕಟೇಶ್, ವಕೀಲ ಚಂದ್ರಪ್ಪ, ಜಂಬೂ ದ್ವೀಪ ಅಧ್ಯಕ್ಷ ರಾಮಣ್ಣ, ಬಿಎಸ್‌ಐನ ನೀತಿಗೆರೆ ಮಂಜಪ್ಪ, ನನ್ನಿವಾಳ ರವಿ, ಜಗಳೂರು ಡಿ ತಿಮ್ಮಕ್ಕ, ವಾಮದೇವ, ಪ್ರಾಂಶುಪಾಲ ಕೆ ರಂಗಪ್ಪ, ಉಪನ್ಯಾಸಕರುಗಳಾದ ಈ ನಾಗೇಂದ್ರಪ್ಪ, ಎಲ್ ಶಾಂತಕುಮಾರ್, ಎಚ್ ಆರ್ ಲೋಕೇಶ್, ಮಂಜು, ಶಾಂತಮ್ಮ, ಬಿಎಸ್‌ಐ ಮಹಿಳಾ ಜಿಲ್ಲಾಧ್ಯಕ್ಷೆ ಸಾಧಿಕ್ ನಗರ ಶಂಕುತಲಮ್ಮ, ತಿಪ್ಪಮ್ಮ, ಭೀಮ್ ಆರ್ಮಿ ಅಧ್ಯಕ್ಷ ಅವಿನಾಶ್‌ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X