ಚಿತ್ರದುರ್ಗ ತಾಲೂಕಿನ ಜೋಗಿಮಟ್ಟಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚುವ ಕೃತ್ಯ ಎಸಗುತ್ತಿದ್ದ ಕಿಡಿಗೇಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಿನ್ನೆ (ಫೆ.28) ಬಂಧಿಸಿದ್ದಾರೆ.
ಅನ್ನೇಹಳು ಜಂಪಯ್ಯನಹಟ್ಟಿ ಗ್ರಾಮದ ಸಂಗಪ್ಪ (33) ಬಂಧಿತ ಆರೋಪಿ. ಈತ ಆಗಾಗ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚುತ್ತಿದ್ದ. ವಲಯ ಅರಣ್ಯಾಧಿಕಾರಿ ಆರ್. ವಸಂತ್ ಕುಮಾರ್ ಅವರ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸದ್ಯ ಸಂಗಪ್ಪನನ್ನು ನ್ಯಾಯಾಲಯ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ | ಗೋಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ; ರೈತ ಸಂಘ ಆಕ್ರೋಶ.
