ಚಿತ್ರದುರ್ಗ | ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಅಂಬೇಡ್ಕರ್ ಜಯಂತಿ ಹಾಗೂ ಗ್ರಾಮ ಶಾಖೆ ಉದ್ಘಾಟನೆ.

Date:

Advertisements

ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಚಿತ್ರದುರ್ಗ ಜಿಲ್ಲಾ ಸಮಿತಿ ಹಿರಿಯೂರು ತಾಲ್ಲೂಕು ಹುಲಗಲಕುಂಟೆ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಇದೇ ವೇಳೆ ಹುಲಗಲಕುಂಟೆಯಲ್ಲಿ ನೂತನ ಗ್ರಾಮ ಶಾಖೆಯನ್ನು ಹಾಗೂ ನಾಮಫಲಕ ಉದ್ಘಾಟನೆ ಮಾಡಲಾಯಿತು.

1001872491

ಕಾರ್ಯಕ್ರಮ ಉದ್ಘಾಟಿಸಿ ಮತ್ತು ಅಧ್ಯಕ್ಷತೆ ವಹಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೆ ಮಾತನಾಡಿ, “ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಪಡೆದು ಕೊಳ್ಳಲು ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾಪುಲೆ ಕೊಡುಗೆ ಅಪಾರವಾಗಿದೆ. ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಪಾಲು ಸಿಗುವಂತೆ ಮತ್ತು ಮತದಾನದಲ್ಲಿ ಹಕ್ಕು ಸಿಗುವಂತೆ ಕಾನೂನು ರೂಪಿಸಿದರು. ಮತದಾನ ಶ್ರೇಷ್ಠ ದಾನ ಎಂದು ತಿಳಿಸಿದರು. ಅವರ ಬಗ್ಗೆ ತಿಳಿದುಕೊಳ್ಳಬೇಕು” ಎಂದು ಹೇಳಿದರು.

1001872500

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಮಾತನಾಡಿ, “ಸಮಾಜದವರು ಶಿಕ್ಷಣವಂತರಾಗಿ ಒಳ್ಳೆ ಜೀವನ ರೂಪಿಸಿಕೊಂಡು ಬಾಳಬೇಕು ಹಾಗೂ ದುಶ್ಚಟಗಳಿಂದ ದೂರವಿದ್ದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಬೇಕು” ಎಂದು ತಿಳಿಸಿದರು.

Advertisements
1001872498

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಪ್ರಿಲ್ 26ಕ್ಕೆ ಸಂವಿಧಾನ ಸಂರಕ್ಷಣಾ ಸಮಾವೇಶ, ಚನ್ನಗಿರಿಯಲ್ಲಿ ಕರಪತ್ರ ಬಿಡುಗಡೆ.

ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಲ್ಪಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷ ಸಾಧಿಕ್, ತಾಲ್ಲೂಕು ಗೌರವಾಧ್ಯಕ್ಷಗೋವಿಂದಪ್ಪ, ತಾಲ್ಲೂಕು ಅಧ್ಯಕ್ಷ ಶಿವರಾಜ್ ಕುಮಾರ್, ತಾಲ್ಲೂಕು ಉಪಾಧ್ಯಕ್ಷ ಹನಮಂತು, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ (ಆಟೋ), ತಾಲ್ಲೂಕು ಕಾರ್ಯದರ್ಶಿ ಕೆಂಚಪ್ಪ (ಆಟೋ), ತಿಪ್ಪೇಶ್ (ಸೂರಗೊಂಡನಹಳ್ಳಿ) ಗ್ರಾಮಶಾಖೆಯ ಪದಾಧಿಕಾರಿಗಳಾದ ಗೌರವ ಅಧ್ಯಕ್ಷ ಓಂಕಾರ್ ಎಚ್, ಟಿ, ಅಧ್ಯಕ್ಷ ನಾಗರಾಜ್ ಎಂ, ಉಪಾಧ್ಯಕ್ಷ ವಿಜಯ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಎಲ್, ಕಾರ್ಯದರ್ಶಿ ಪ್ರಸನ್ನ ಎಂ, ಪ್ರಸನ್ನ ಕೆ, ಖಜಾಂಚಿ ಜ್ಯೋತಿ ಸ್ವಾಮಿ ಆರ್, ಸಂಘಟನಾ ಕಾರ್ಯದರ್ಶಿ ಮಧು, ಪ್ರವೀಣ, ಸದಸ್ಯರಾದ ಲೋಕೇಶ್, ರಾಘು ಮಧು ಎಂ, ರವಿತೇಜ ಎಚ್, ರಾಘವೇಂದ್ರ, ಗ್ರಾಮದ ಹಿರಿಯ ಮುಖಂಡರುಗಳಾದ ರೇವಣ್ಣ, ತಿಪ್ಪೇಸ್ವಾಮಿ, ಬಾಲಣ್ಣ, ಕೇಶವಣ್ಣ, ನಾಗರಾಜು, ರಂಗನಾಥ, ಪುರುಷೋತ್ತಮ, ಹನುಮಂತಪ್ಪ ಹಾಗೂ ಗ್ರಾಮದ ಹಿರಿಯ ಹಾಗೂ ಕಿರಿಯ ಮುಖಂಡರು ಹಾಜರಿದ್ದರು.‌

1001872492
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನರೇಗಾ ಕೆಲಸ, ಕೂಲಿ ವಿಳಂಬ ವಿರೋಧಿಸಿ ಗ್ರಾಕೂಸ್ ಕಾರ್ಯಕರ್ತರ ಪತ್ರ ಚಳವಳಿ

ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಸಿದ್ಧೇಶ್ವರನ ದುರ್ಗಾ ಗ್ರಾಮ ಪಂಚಾಯಿತಿಯಲ್ಲಿ ನರೇಗಾ-ಉದ್ಯೋಗ...

ಚಿತ್ರದುರ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಯೂರಿಯಾ ಕೊರತೆ; ರೈತರ ಆತಂಕ

ಚಳ್ಳಕೆರೆಯಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವ ಸ್ಥಿತಿ ಎದುರಾಗಿದ್ದು, ಇತಿಹಾಸದಲ್ಲಿ...

ಚಿತ್ರದುರ್ಗ | ಬಾಲಕಾರ್ಮಿಕ ಪದ್ಧತಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಕುರಿತು ಶಿಬಿರ

ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತು ಅರಿವು ಮೂಡಿಸುವ ಶಿಬಿರವನ್ನು ಚಿತ್ರದುರ್ಗ...

Download Eedina App Android / iOS

X