ಪರಿಸರ, ಡೆಂಗ್ಯೂ ರೋಗ ತಡೆ ಹಾಗೂ ಶುದ್ಧ ಕುಡಿಯುವ ನೀರಿನ ಕುರಿತು ಚಿತ್ರದುರ್ಗದ ರಾಮದಾಸ್ ಕಾಂಪೌಂಡ್ ಪ್ರದೇಶದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜಾಗೃತಿ ಕಾರ್ಯಕ್ರಮ ನಡೆಸಿದ್ದಾರೆ. ಸ್ವಚ್ಛತೆ ಮತ್ತು ನೈರ್ಮಲ್ಯ ಸಂಬಂಧಿತ ಕರಪತ್ರಗಳನ್ನು ಹಂಚಿ, ಗುಂಪು ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಎನ್.ಎಸ್. ಮಂಜುನಾಥ್, “ಮನೆಗಳ ಸುತ್ತ-ಮುತ್ತ ನೀರು ನಿಲ್ಲದಂತೆ, ನೀರಿನಲ್ಲಿ ಲಾರ್ವ, ಹುಳಗಳು ಬೆಳೆಯದಂತೆ ಎಚ್ಚರವಹಿಸಬೇಕು. ಸ್ವಚ್ಛತೆ ಕಾಪಾಡುವುದರಿಂದ ಡೆಂಗ್ಯೂ ಜ್ವರದಿಂದ ಪಾರಾಗಬೇಕು. ಕೀಟ ಜನ್ಯ ರೋಗಗಳು ನಮ್ಮನ್ನು ಆಳುವ ಮುನ್ನ, ಸಾರ್ವಜನಿಕರು ಎಚ್ಚರವಹಿಸಿ ಜಾಗೃತರಾಬೇಕು. ಪರಿಸರ ಸ್ವಚ್ಛತೆ, ಘನ ತ್ಯಾಜ್ಯ ವಸ್ತುಗಳ ಸರಿಯಾದ ವಿಲೇವಾರಿ, ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು” ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ ಮಾತನಾಡಿ, “ಕಲುಷಿತ ನೀರು ಮತ್ತು ಆಹಾರದಿಂದ ಹರಡಬಹುದಾದ ಕರುಳು ಬೇನೆ, ಕಾಮಾಲೆ, ವಿಷಮಶೀತ ಜ್ವರ, ಇತ್ಯಾದಿಗಳು ನಮ್ಮನ್ನು ಬಾಧಿಸುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ನಾವು ಪಾಲಿಸಬೇಕು” ಎಂದರು. ಶುದ್ಧ ನೀರು ಆಹಾರ ಸೇವನೆ, ಸಾಬೂನು ಬಳಸಿ ಕೈತೊಳೆದುಕೊಳ್ಳುವುದು, ನೊಣಗಳಿಂದ ಆಹಾರ ಸಂರಕ್ಷಣೆ, ಕೈ ತೊಳೆಯೋ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿ, “ಸಮರ್ಪಕ ಘನತ್ಯಾಜ್ಯ ಸಮರ್ಪಕ ಘನತ್ಯಾಜ್ಯ ವಸ್ತುಗಳ ವಿಲೇವಾರಿ ನೀರು ಪೂರೈಕೆ ಸುರಕ್ಷಿತ ನೀರು ಶೇಖರಣೆ ಆರೋಗ್ಯಕರ ಪರಿಸರವನ್ನು ನಿರ್ಮಾಣ ಸಂಸ್ಥೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಫಾರೂಕ್, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ರಂಗಾರೆಡ್ಡಿ, ಸುಪ್ರೀತಾ, ರೂಪಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಬಡಾವಣೆಯ ಸಾರ್ವಜನಿಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಡಾವಣೆಯ 300 ಮನೆಗಳ ಲಾರ್ವ ಸಮೀಕ್ಷೆ ಕೈಗೊಂಡು ಕಲುಷಿತಗೊಂಡಿರುವ ನೀರಿನ ಮೂಲಗಳನ್ನು ಪತ್ತೆ ಹಚ್ಚಿ, ಖಾಲಿ ನಿವೇಶನಗಳಲ್ಲಿ ಕಳೆ ಮತ್ತು ಸ್ವಚ್ಛತೆ ಇಲ್ಲದಿರುವ ಅಂಶವನ್ನು ನಗರಸಭೆಗೆ ಸರಿಪಡಿಸಲು ತಿಳಿಸಲಾಯಿತು.