ಚಿತ್ರದುರ್ಗ | ಎತ್ತಿನ ಗಾಡಿಗೆ ಬಸ್ ಡಿಕ್ಕಿ: ಸ್ಥಳದಲ್ಲೇ ಅಸುನೀಗಿದ ಎತ್ತು, ಪ್ರಯಾಣಿಕರು ಪಾರು

Date:

Advertisements

ಪ್ರಯಾಣಿಕರನ್ನು ಕರೆದುಕೊಂಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಿಂದ ಹಿರಿಯೂರಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಚಳ್ಳಕೆರೆ ಹೊರವಲಯದ ನಗರಂಗೆರೆ ಗೇಟ್ ಬಳಿ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ್ದು ಕೆಲ ಪ್ರಯಾಣಿಕರು ಗಾಯಗೊಂಡಿದ್ದು, ಎತ್ತೊಂದು ಸ್ಥಳದಲ್ಲೇ ಅಸುನೀಗಿದ್ದು, ಇನ್ನೊಂದು ಎತ್ತು ಮತ್ತು ಗಾಡಿಯ ಮಾಲೀಕ ತೀವ್ರ ಗಾಯಗೊಂಡಿದ್ದಾರೆ.

1002677754

ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಅದೃಷ್ಟವಶಾತ್ ಪಾರಾಗಿದ್ದು, ಎತ್ತಿನ ಬಂಡಿಯ ಮಾಲೀಕ ರಾಜಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ‘ಎತ್ತಿನ ಬಂಡಿಯಲ್ಲಿ ರಾಜಣ್ಣ ಶೇಂಗಾ ಮೂಟೆಗಳನ್ನು ಸಾಗಿಸುತ್ತಿದ್ದು ಅಪಘಾತದ ತೀವ್ರತೆಗೆ ಶೇಂಗಾ ಚೀಲಗಳು ಬಸ್ಸಿನ ಮುಂಭಾಗ ತೂರಿಕೊಂಡು, ರಸ್ತೆಯಲ್ಲೇಲ್ಲಾ ಚಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

1002677753

ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಚಾಲಕನಿಗೆ ಇದ್ದಕ್ಕಿದ್ದಂತೆ ಪಿಡ್ಸ್ ಕಾಣಿಸಿಕೊಂಡಿದ್ದು, ಬಸ್ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಎತ್ತಿನ ಗಾಡಿಗೆ ಡಿಕ್ಕಿಯಾದ ಬಳಿಕ ಮುಂದೆ ಇದ್ದ ಹಳ್ಳಕ್ಕೆ ಬಿದ್ದಿದೆ ಎನ್ನುವ ಮಾಹಿತಿ ಬಂದಿದೆ.

ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ

ತೀವ್ರವಾಗಿ ಗಾಯಗೊಂಡ ಎತ್ತಿನ ಬಂಡಿಯ ಮಾಲೀಕ ರಾಜಣ್ಣ ಸೇರಿದಂತೆ ಬಸ್ಸಿನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.‌ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ದೇಶದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಮತ ಚಲಾವಣೆ ಕಳವಳಕಾರಿ: ಎಸ್ಪಿ ರಂಜಿತ್ ಕುಮಾರ್

"ದೇಶದಲ್ಲಿ ಮೊದಲು ರಾಜರ ಆಡಳಿತ ಇತ್ತು. ಬಲಿಷ್ಟರು, ಪರಾಕ್ರಮಿಗಳು ಪ್ರಜೆಗಳನ್ನು ಆಳುತ್ತಿದ್ದರು....

ಚಿತ್ರದುರ್ಗ | ಯುವಪೀಳಿಗೆಗೆ ಪ್ರಜಾಪ್ರಭುತ್ವದ ಅರಿವು ಮುಖ್ಯ: ಸಿಇಓ ಡಾ ಆಕಾಶ್

ದೇಶದ ಯುವಪೀಳಿಗೆಯು ಸಂವಿಧಾನದ ಅರಿವು ಹಾಗೂ ಪ್ರಜಾಪ್ರಭುತ್ವದ ಮಹತ್ವ ಹಾಗೂ ನಮ್ಮ...

ಚಿತ್ರದುರ್ಗ | ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವಿಸಿ: ಜಿಲ್ಲಾಧಿಕಾರಿ ವೆಂಕಟೇಶ್, ಅಧಿಕಾರಿಗಳು ಭಾಗಿ

ಭಾರತ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮತದಾರರ...

‌ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ

ಬಹುತೇಕ ಕಡೆ ಗುಂಪು ಗುಂಪಾಗಿ ಓಡಾಡುವ, ಮಲಗಿರುವ, ಕಚ್ಚಾಡುವ ಬೀದಿನಾಯಿಗಳು ಸರ್ವೇಸಾಮಾನ್ಯವಾಗಿ...

Download Eedina App Android / iOS

X