ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಕಳ್ಳತನದ ಪ್ರಕರಣಗಳು ಮೇಲಿಂದ ಮೇಲೆ ನೆಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುಪತಿಗೆ ಹೋಗಿದ್ದ ಕುಟುಂಬವೊಂದು ಮಾರ್ಚ್ ಎರಡರಂದು ವಾಪಸ್ ಬಂದಾಗ ಬಾಗಿಲು ಮುರಿದು ಕಳ್ಳತನವಾಗಿರುವುದು ಗೊತ್ತಾಗಿದ್ದು, ಈ ಕುಟುಂಬ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವುದಾಗಿ ಮಾಹಿತಿ ಬಂದಿದೆ. ಕೆಲ ದಿನಗಳ ಹಿಂದೆ ತಿರುಪತಿಯ ದರ್ಶನಕ್ಕೆಂದು ತೆರಳಿದ್ದ ಚಳ್ಳಕೆರೆ ನಗರದ ಜಯಲಕ್ಷ್ಮಿ ಲೇಔಟ್ ನ ‘ಹನುಮ ಮಿಲ್ ರವಿ’ ಅವರ ಮನೆಯಲ್ಲಿ
ಕಳ್ಳತನವಾಗಿರುವುದು ಅವರಿಗೆ ವಾಪಸ್ ಬಂದಾಗ ಗೊತ್ತಾಗಿದೆ.
‘ಬಾಗಿಲನ್ನು ಮುರಿದು ಒಳ ಪ್ರವೇಶಿಸಿರುವ ಕಳ್ಳರು ಮನೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ತಡಕಾಡಿದ್ದಾರೆ’ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಮನೆಯವರು ಹಣ, ಒಡವೆ ವಸ್ತುಗಳನ್ನು ಬ್ಯಾಂಕ್ ನಲ್ಲಿ ಭದ್ರವಾಗಿರಿಸಿ ಪ್ರವಾಸಕ್ಕೆ ತೆರಳಿದ್ದ ಕಾರಣ ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳರಿಗೆ ದೊರಕಿಲ್ಲ ಎಂದು ಮನೆಯವರು ತಿಳಿಸಿರುವದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಡಿಸೆಂಬರ್ ನೊಳಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷವೇ ದೊಡ್ಡದು: ಶಾಸಕ ಬಸವರಾಜ್
ಈಗೊಂದು ತಿಂಗಳಿನಿಂದ ಚಳ್ಳಕೆರೆ ನಗರದಲ್ಲಿ ಆಗಾಗ್ಗೇ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ವಾರವಷ್ಟೇ ವಿಠಲ್ ನಗರದಲ್ಲಿ ಕಳ್ಳತನ ಪ್ರಕರಣ ವರದಿಯಾಗಿತ್ತು. ಶಿವರಾತ್ರಿಯ ದಿನದಂದು ಕೂಡ ಚಳ್ಳಕೆರೆಯಲ್ಲಿ ಕಳ್ಳತನವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು, ಇತರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಸರಿಯಾದ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಮನೆಯಿಂದ ಹೊರಗೆ ಹೋಗುವುದು ಕಷ್ಟವಾಗಿದ್ದು, ಆತಂಕ ಮನೆ ಮಾಡಿದೆ ಎಂದು ಸ್ಥಳೀಯರು ದೂರಿದ್ದಾರೆ.