ಪ್ರಧಾನಿ ಮೋದಿ ಕಳೆದ 2 ವರ್ಷಗಳ ಹಿಂದೆ ಚುನಾವಣೆಯಲ್ಲಿ ಚಿತ್ರದುರ್ಗಕ್ಕೆ ಬಂದಾಗಜಿಲ್ಲೆಯ ಜನರ, ರೈತರ ಕನಸಾದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ, ರಾಷ್ಟ್ರೀಯ ಯೋಜನೆಯೆಂದು ಘೋಷಿಸುತ್ತೇವೆಂದು ಜಿಲ್ಲೆಯ ಜನರಿಗೆ ವಾಗ್ದಾನ ನೀಡಿದ್ದರು. ಇದುವರೆಗೂ ಈಡೇರದ ಕಾರಣ ಸಂಸದ ಗೋವಿಂದ ಕಾರಜೋಳಗೆ ಹಣ ಬಿಡುಗಡೆ ಮಾಡಿಸಿ ಕಾರ್ಯಕ್ರಮಗಳಿಗೆ ಹಾಜರಾಗಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಸಂಸದರ ಕಾರ್ಯಕ್ರಮಗಳಲ್ವಿ ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಲು ರೈತ ಸಂಘ, ದಸಂಸ ಮುಖಂಡರು ಸಭೆ ಸೇರಿ ಮೊಳಕಾಲ್ಮುರಿನಲ್ಲಿ ನಿರ್ಣಯ ಕೈಗೊಂಡರು.

‘ಮೊಳಕಾಲ್ಮೂರು ಶಾಶ್ವತ ಕುಡಿಯುವ ನೀರು ಯೋಜನೆಯ ಉದ್ಘಾಟನೆಗೆ ಆಗಮಿಸಲಿರುವ ಸಂಸದ ಕಾರಜೋಳರವರು ಕೇಂದ್ರದ ಘೋಷಣೆಯಂತೆ ಭದ್ರಾ ಅನುದಾನ ಬಿಡುಗಡೆ ಮಾಡಿಸಿ ಕಾರ್ಯಕ್ರಮಕ್ಕೆ ಬರಬೇಕು. ಇಲ್ಲವಾದಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗಬಾರದೆಂದು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳು ಶಾಶ್ವತ ಬರ ಪಟ್ಟಿಯಲ್ಲಿದ್ದರೂ ಅದರಿಂದ ಹೊರಬರಲು ಸಚಿವರು, ಶಾಸಕರು, ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಪ್ರಯತ್ನಕ್ಕೆ ಕೈಜೋಡಿಸಿಲ್ಲ. ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ ಹಣ ನಿಗದಿಯಾಗಿದ್ದರೂ, ಇದುವರೆಗೂ ಅದನ್ನು ಬಿಡುಗಡೆ ಮಾಡಿಲ್ಲ ಎಲ್ಲಾ ಸಂಸದರು ಪಕ್ಷಭೇದ ಮರೆತು ಹಣ ಬಿಡುಗಡೆ ಮಾಡಿಸಲು ಮುಂದಾಗಬೇಕು’ ಎಂದು ಸಭೆಯಲ್ಲಿ ಒತ್ತಾಯಿಸಿದರು.

‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದು, ಯೋಜನೆ ಮಾರ್ಪಾಡು ಮಾಡಬೇಕು. ಬೆಲೆ ನಷ್ಟ ಪರಿಹಾರ ತೀರ್ಮಾನಿಸುವಾಗ ಅವೈಜ್ಞಾನಿಕ ಅಂಶಗಳನ್ನು ಕೈ ಬಿಟ್ಟು ಬೆಳೆ ನಷ್ಟವನ್ನು ಮಾತ್ರ ಪರಿಗಣಿಸಬೇಕು. ರೈತನ ಪ್ರತಿ ಸರ್ವೆ ನಂಬರಿನ ಬೆಳೆ ಪರಿಶೀಲಿಸಿ ಪರಿಹಾರ ನೀಡಬೇಕು. ಬೆಳೆವಿಮೆ ತುಂಬಿದ ರೈತರಿಗೆ ಈಗಿರುವ ಚೀಟಿ ಪದ್ಧತಿ ಬದಲು ವಿಮಾಬಾಂಡ್ ನೀಡಬೇಕು’ ಎಂದು ಇಂದು ರೈತ ಸಂಘ ಮುಖಂಡರು ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಈ ಒತ್ತಾಯಗಳನ್ನು ಈಡೇರಿಸಬೇಕೆಂದು ಸಭೆಯಲ್ಲಿ ನಿರ್ಣಾಯಕಗೊಂಡರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಚಳ್ಳಕೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಹೊಸ ಶೌಚಾಲಯ ನಿರ್ಮಾಣ, ವ್ಯಾಪಾರಿಗಳು ಮತ್ತು ನಾಗರೀಕರ ಆಕ್ಷೇಪ.
ಸಭೆಯಲ್ಲಿ ರೈತ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ, ಮರ್ಲಹಳ್ಳಿ ರವಿಕುಮಾರ್, ದಾಸನೂರ ನಾಯಕ, ಕೆಟಿ ನಾಗರಾಜ್, ಈರಣ್ಣ, ಬೂದಪ್ಪ, ಹಟ್ಟಿ ನಾಗರಾಜ್, ಚಂದ್ರಣ್ಣ, ಮಂಜುನಾಥ, ವೀರಣ್ಣ, ಮೇಸ್ತ್ರಿ ಪಾಪಯ್ಯ, ಡಿಎಸ್ಎಸ್ ಕೊಂಡ್ಲಾಪುರ ಪರಮೇಶ್ವರಪ್ಪ, ಗಂಗಾಧರ, ಆನಂದ, ರಾಜು, ಬೊಮ್ಮಲಿಂಗನಹಳ್ಳಿ ಮಂಜುನಾಥ ಹಾಗೂ ಇತರರು ಭಾಗವಹಿಸಿದ್ದರು.
