ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಸಿದ್ಧೇಶ್ವರನ ದುರ್ಗಾ ಗ್ರಾಮ ಪಂಚಾಯಿತಿಯಲ್ಲಿ ನರೇಗಾ-ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 250 ಜನ ಕೆಲಸ ಮಾಡುತ್ತಿದ್ದು, ಒಂದುವರೆ ತಿಂಗಳಾದರೂ ಸಹ ಕೂಲಿ ಹಣ ಪಾವತಿ ಆಗಿರುವುದಿಲ್ಲ. ಅಲ್ಲದೆ ನಿರಂತರವಾಗಿ ನೂರು ಮಾನವ ದಿನಗಳ ಕೆಲಸ ಒದಗಿಸಲು ಒತ್ತಾಯಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ-ಗ್ರಾಕೂಸ್ ಪ್ರತಿಭಟನೆ ನಡೆಸಿ ಪತ್ರ ಚಳವಳಿ ನೆಡೆಸಿದರು.
ಈ ವೇಳೆ ಮಾತನಾಡಿದ ಗ್ರಾಕೂಸ್ ಮುಖಂಡರು “ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಬಡಜನರಿಗೆ ಆರ್ಥಿಕ ನೆರವು ಒದಗಿಸಿದೆ. ಆದರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದೇಶ್ವರನ ದುರ್ಗಾ ಪಂಚಾಯತಿಯಲ್ಲಿ ಒಂದುವರೆ ತಿಂಗಳಾದರೂ ಒಂದು ವಾರದ ಕೂಲಿ ಸಹ ಹಣ ಪಾವತಿ ಆಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“100 ಮಾನವ ದಿನಗಳು ಮುಗಿಯುವವರೆಗೂ ನಿರಂತರ ಕೆಲಸ ನೀಡಬೇಕು. 2024ರಲ್ಲಿ ಆಗಸ್ಟ್ ತಿಂಗಳ ಹೊತ್ತಿಗೆ ಒಂದು ಕೂಲಿ ಕಾರ್ಡ್ ನಲ್ಲಿ ಇಬ್ಬರು ಕೆಲಸಕ್ಕೆ ಬರುತ್ತಿದ್ದರೆ ಅಂತಹವರ ನೂರು ಮಾನವ ದಿನಗಳು ಮುಗಿಯುತ್ತಾ ಬಂದಿತ್ತು. ಮತ್ತು 15ರಿಂದ 20 ಸಾವಿರ ಹಣ ಕೂಲಿ ಕಾರ್ಮಿಕರಿಗೆ ಪಾವತಿಯಾಗಿತ್ತು” ಎಂದು ತಿಳಿಸಿದರು.
“ಈ ವರ್ಷದಲ್ಲಿ ಬರೀ 15 ದಿನ ಕೆಲಸ ಮಾಡಿದ್ದು, ಇದುವರೆಗೂ ಹಣ ಬಿಡುಗಡೆಯಾಗದ ಕಾರಣ ಕಾರ್ಮಿಕರು ತೊಂದರೆ ಎದುರಿಸುತ್ತಿದ್ದು, ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಈ ಕೂಡಲೇ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಪತ್ರ ಚಳುವಳಿ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಚಳ್ಳಕೆರೆಯಲ್ಲಿ ಯೂರಿಯಾ ಕೊರತೆ; ರೈತರ ಆತಂಕ
ಕಾರ್ಯಕರ್ತರು “ಕೂಲಿ ಕೊಡಿ, ಕೆಲಸ ಕೊಡಿ, ಇಲ್ಲ ಕುರ್ಚಿ ಬಿಡಿ” ಎಂದು ಘೋಷಣೆ ಕೂಗುತ್ತಾ ಪತ್ರ ಚಳುವಳಿ ನಡೆಸಿದರು. ಪತ್ರ ಚಳುವಳಿ ವೇಳೆ ಗ್ರಾಕೂಸ್ ಮುಖಂಡರಾದ ಮಂಜಮ್ಮ, ಸಂಧ್ಯಾ, ವೈಶಾಲಿ, ನಾಗೇಂದ್ರ, ಸರೋಜಮ್ಮ, ಈರಮ್ಮ, ಶೇಖಪ್ಪ, ಮುದ್ದಪ್ಪ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.