ಪೊಲೀಸ್ ಇಲಾಖೆಯ ಹೊಯ್ಸಳ ಗಸ್ತು ವಾಹನದ ಕೀ ಕಸಿದು ಅಡ್ಡಗಟ್ಟಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಹೊರವಲಯದಲ್ಲಿ ನೆಡೆದಿದೆ.
ಸಚಿವರ ಬೆಂಬಲಿಗರನ್ನು ಪ್ರಶ್ನಿಸಿದ್ದಕ್ಕೆ ವಾಗ್ವಾದ ನಡೆದಿದು ಘಟನೆಗೆ ಕಾರಣ ಎನ್ನಲಾಗಿದೆ. ತಾವು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಪ್ತ ಸಹಾಯಕ ಮತ್ತು ಇತರ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ. ಆದರೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಪೊಲೀಸರೊಂದಿಗೆ ವಾಗ್ವಾದ ನೆಡೆಸಿ, ಹಲ್ಲೆಗೆ ಯತ್ನಿಸಿ, ರಸ್ತೆ ಅಡ್ಡಗಟ್ಟಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವ ಕುರಿತು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮದ್ಯ ಸೇವಿಸುತ್ತಿದ್ದ ಸಚಿವರ ಬೆಂಬಲಿಗರನ್ನು ಪ್ರಶ್ನಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಬೆಂಬಲಿಗರು ಸಚಿವರ ಆಪ್ತ ಸಹಾಯಕ ಭರತ್ ರೆಡ್ಡಿ ಮತ್ತು ಇತರರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ ಸಚಿವರ ಆಪ್ತ ಸಹಾಯಕ ಮತ್ತು ಬೆಂಬಲಿಗರನ್ನು ಹೊಯ್ಸಳ ಗಸ್ತು ವಾಹನದ ಪೊಲೀಸರು ಪ್ರಶ್ನಿಸಿ ರಾತ್ರಿಯಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುವಂತಿಲ್ಲ, ಇಲ್ಲಿಂದ ಕೂಡಲೇ ಹೊರಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿ ನಾವು ಸಚಿವರ ಬೆಂಬಲಿಗರು, ನಮಗೇ ಇಲ್ಲಿಂದ ಹೊರಡಲು ಆದೇಶ ನೀಡುತ್ತೀರಾ ಎಂದು ಪ್ರತ್ಯುತ್ತರ ನೀಡಿದಾಗ ವಾಗ್ವಾದ ಪ್ರಾರಂಭವಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಡಿಸೆಂಬರ್ ನೊಳಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷವೇ ದೊಡ್ಡದು: ಶಾಸಕ ಬಸವರಾಜ್
ಆನಂತರ ಕೈ ಮಿಲಾಯಿಸುವ ಹಂತ ತಲುಪಿದ್ದು ಬೆಂಬಲಿಗರು ಪುಂಡಾಟಿಕೆ ಮೆರೆದು ರಸ್ತೆಗೆ ಗಾಡಿಯನ್ನು ಅಡ್ಡಲಾಗಿ ನಿಲ್ಲಿಸಿ. ಹಾಗೂ ರಸ್ತೆಯಲ್ಲಿ ನಿಲ್ಲಿಸಿದ ಪೊಲೀಸ್ ಹೊಯ್ಸಳ ವಾಹನದ ಕೀ ಕಸಿದುಕೊಂಡು ಎಸ್ ಪಿ, ಐಜಿಪಿ ಯವರಿಗೆ ಪೋನ್ ಮಾಡಿದ್ದೇವೆ, ತಕ್ಕ ಶಾಸ್ತಿ ಮಾಡಿಸುತ್ತೇವೆ. ನಮಗೇ ಅಡ್ಡಗಟ್ಟುತ್ತೀರಾ? ಎಂದು ದಾಂಧಲೆ ನೆಡೆಸಿದ್ದಾಗಿೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.