ಸರ್ಕಾರದ ವಿರುದ್ಧ ಅರೆಬೆತ್ತಲೆ, ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಲು ಮುಂದಾದ ಕ್ರಾಂತಿಕಾರಿ ಪಾದಯಾತ್ರೆ ಒಳಮೀಸಲಾತಿ ಹೋರಾಟಗಾರರಿಗೆ ತಡೆಯೊಡ್ಡುವ ವೇಳೆ ಹೋರಾಟಗಾರರು ಪೋಲೀಸರ ಮಧ್ಯೆ ವಾಗ್ವಾದ ನಡೆದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನೆಡೆದಿದೆ.
ಸರ್ಕಾರದ ವಿಳಂಬ ನೀತಿ ಮತ್ತು ಹಿಂಬಾಗಿಲ ಮೂಲಕ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಮುಂದಾಗಿರುವ ಸರ್ಕಾರದ ವಿರುದ್ಧ ಒಳಮೀಸಲಾತಿ ಹೋರಾಟದ ಕಿಚ್ಚು ಮತ್ತೆ ಹೊತ್ತಿಕೊಂಡಿದ್ದು, ಮಾರ್ಚ್ 5 ರಿಂದ ಹರಿಹರದ ಪ್ರೊ.ಬಿ ಕೃಷ್ಣಪ್ಪನವರ ಮೈತ್ರಿವನದಿಂದ ಬೆಂಗಳೂರಿಗೆ ಪಾದಯಾತ್ರೆ ಪ್ರಾರಂಭವಾಗಿದ್ದು ಮಾರ್ಚ್ 11ರ ಮಂಗಳವಾರ ರಾತ್ರಿ ಹಿರಿಯೂರು ತಲುಪಿತ್ತು.

ಈ ಮಧ್ಯೆ ಹಿರಿಯೂರಿನಲ್ಲಿ ಕ್ರಾಂತಿಕಾರಿ ಪಾದಯಾತ್ರೆ ಪ್ರತಿಭಟನೆಯಲ್ಲಿ ಅಣಕು ಶವಯಾತ್ರೆ ದಹನ ನಡೆಸಲು ಮುಂದಾದ ಹೋರಾಟಗಾರರಿಗೆ ಪೊಲೀಸರು ಅನುಮತಿ ನಿರಾಕರಿಸಿ ತಡೆಯೊಡ್ಡಿದ್ದು, ಈ ವೇಳೆ ಭಾಸ್ಕರ್ ಪ್ರಸಾದ್ ಸೇರಿದಂತೆ ಹೋರಾಟಗಾರರು ಮತ್ತು ಪೋಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಪರಿಸ್ಥಿತಿ ತಿಳಿಗೊಳಿಸಿದ ನಂತರ ಹೋರಾಟಗಾರರು ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು. ನಂತರ ಹಿರಿಯೂರಿನ ಮುಖ್ಯರಸ್ತೆಯಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ತಲುಪಿದ ಕ್ರಾಂತಿಕಾರಿ ಪಾದಯಾತ್ರೆ ಬೆಂಗಳೂರಿನೆಡೆಗೆ ನಡಿಗೆಯನ್ನು ಮುಂದುವರೆಸಿತು.
ಒಳಮೀಸಲಾತಿಗಾಗಿ ಕ್ರಾಂತಿಕಾರಿ ಪಾದಯಾತ್ರೆಯ ಹೋರಾಟಗಾರರು ಹಿರಿಯೂರಿಗೆ ಆಗಮಿಸುವ ವೇಳೆ ಮಾರ್ಗಮಧ್ಯೆ ಆದಿಜಾಂಬವ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಷಡಕ್ಷರಮುನಿ ಶ್ರೀಗಳು, ಅಲ್ಲಿಗೆ ಆಗಮಿಸಿದ ಮಾದಾರ ಚೆನ್ನಯ್ಯ ಶ್ರೀಗಳು, ಹರಳಯ್ಯ ಶ್ರೀಗಳು ಕ್ರಾಂತಿಕಾರಿ ಪಾದಯಾತ್ರೆಗೆ ಬೆಂಬಲ ಸೂಚಿಸಿದರು.

ಕಳೆದ ಮೂರು ನಾಲ್ಕು ದಶಕಗಳಿಂದಲೂ ಒಳಮೀಸಲಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಶೋಷಿತ ಸಮುದಾಯಗಳು ಸುಪ್ರೀಂ ಕೋರ್ಟಿನ ಆದೇಶದ ನಂತರವೂ ಒಳಮಿಸಲಾತಿ ಘೋಷಣೆಗೆ, ಅದರ ಸೌಲಭ್ಯ ಪಡೆಯಲು ಮತ್ತೊಮ್ಮೆ ಹೋರಾಟಕ್ಕಿಳಿದಿವೆ. ಮಾರ್ಚ್ 5 ರಂದು ದಾವಣಗೆರೆ ಜಿಲ್ಲೆಯ ಹರಿಹರದ ಪ್ರೊ. ಬಿ.ಕೃಷ್ಣಪ್ಪನವರ ಚೈತ್ಯಭೂಮಿಯಿಂದ ಒಳಮೀಸಲಾತಿಗಾಗಿ ಪಾದಯಾತ್ರೆ ಪ್ರಾರಂಭವಾಗಿತ್ತು.

ಪಾದಯಾತ್ರೆಯ ಉದ್ಘಾಟನೆ ವೇಳೆ ಹೋರಾಟಗಾರರಾದ ಭಾಸ್ಕರ್ ಪ್ರಸಾದ್, ಚಿತ್ರನಟ ಚೇತನ್ ಅಹಿಂಸ, ಪ್ರೊ. ಹರಿರಾಮ್, ಪ್ರೊ.ಎಬಿ ರಾಮಚಂದ್ರಪ್ಪ, ನಿವೃತ್ತ ಎಸ್ಪಿ ರವಿ ನಾರಾಯಣ್, ಎಮ ಸಿ ಮೋಹನ್ ಕುಮಾರ್, ಎಲ್ ವಿ ಸುರೇಶ್, ಹೆಗ್ಗೆರೆ ರಂಗಪ್ಪ, ಬಸವರಾಜ್ ದೊಡ್ಮನಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಡಿ ಹನುಮಂತಪ್ಪ, ನಿವೃತ್ತ ಸಮಾಜ ಕಲ್ಯಾಣಅಧಿಕಾರಿ ಹನುಮಂತಪ್ಪ, ರಾಘವೇಂದ್ರ ಕಡೆಮನಿ, ಉಮೇಶ್ ರಾಣೆಬೆನ್ನೂರು, ಹೆಚ್ ಹುಲಿಗೇಶ, ಪಂಚು ಪೈಲ್ವಾನ್, ಎಸ್ ಕೇಶವ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದು ಮುನ್ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
ಒಳಮೀಸಲಾತಿಗಾಗಿ ಕ್ರಾಂತಿಕಾರಿ ಪಾದಯಾತ್ರೆಯಲ್ಲಿ ನಿರಂತರವಾಗಿ ಭಾಸ್ಕರ್ ಪ್ರಸಾದ್, ಪ್ರಭುರಾಜ್ ಕೊಡ್ಲಿ, ಹನುಮೇಶ್, ಲಕ್ಷ್ಮಣ್ ಬಂಡಾರಿ, ರಘು ಸಿ ಕೆ, ಮಲ್ಲಿಕ್, ತಿಪ್ಪೇಶ್, ಎಲ್ ವಿ ಸುರೇಶ, ರೆಡ್ಡಿ, ಮಾರುತಿ ನಾಲತಾವಾದ, ದುರುಗಪ್ಪ ದೊಡ್ಡಮಣಿ, ಹನುಮಂತ ದೊಡ್ಡ್ಮಣಿ, ನಾಗರಾಜ್ ಜೆ ಸಿ, ಹನುಮೇಶ್ ಭೇರಿ, ಉಮೇಶ್ ಸಾಮ್ರಾಟ್, ಮಂಜು, ರಾಹುಲ್, ಕಸ್ತೂರಿ ಮಂಜುನಾಥ್, ವೀರೇಶ್, ಮಂಜು, ರವಿಕುಮಾರ್, ಪುಟ್ಟಣ್ಣ, ಮೌನೇಶ್ ಟಿ ಮಸ್ಕಿ, ಪ್ರಮೋದ್, ಪ್ರಭು, ಅನಿಲ್, ಪರಶುರಾಮ್, ಕೆಂಚರಾಯ ಸೇರಿದಂತೆ ನೂರಾರು ಹೋರಾಟಗಾರರು ಪ್ರತಿ ದಿನ ಹೆಜ್ಜೆ ಹಾಕುತ್ತಿದ್ದಾರೆ.