ನ್ಯಾ. ನಾಗಮೋಹನದಾಸ್ ಆಯೋಗವು ಡಿ ಗುಂಪಿಗೆ ಕೇವಲ 4% ಮೀಸಲಾತಿ ನಿಗದಿ ಮಾಡಿರುವುದು ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿದೆ. ಭೋವಿ ಸಮಾಜಕ್ಕೆ 2026ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ, ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಆಧಾರದ ಮೇಲೆ ಜನಸಂಖ್ಯಾವಾರು ಪ್ರತ್ಯೇಕ ಒಳಮೀಸಲಾತಿಯನ್ನು ಕಲ್ಪಿಸಲು ಒತ್ತಾಯಿಸುತ್ತೇವೆ. ಹಾಗೂ ದೋಷ ಪೂರಿತ ನ್ಯಾ. ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಬೇಕು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ನೇತೃತ್ವದ ಭೋವಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
“ಡಿ ಗುಂಪಿಗಿಂತ ಅನಕ್ಷರತೆ , ಪಿಯೂಸಿ , ಪದವಿ ತೇರ್ಗಡೆ , ಸ್ನಾತಕೋತ್ತರ ಶಿಕ್ಷಣ , ಇಂಜಿನಿಯರಿಂಗ ಶಿಕ್ಷಣ , ರಾಜ್ಯ ಸರ್ಕಾರಿ ಉದ್ಯೋಗ , ಕೇಂದ್ರ ಸರ್ಕಾರಿ ಉದ್ಯೋಗ ಸ್ವಂತ ಮನೆ , ಭೂ ಒಡೆತನ ಹೀಗೆ ಹಲವು ಮಾನದಂಡಗಳಲ್ಲಿ ಬಿ ಮತ್ತು ಸಿ ಗುಂಪು , ಡಿ ಗುಂಪಿಗಿಂತ ಸ್ಪಷ್ಟವಾಗಿ ಮಂದೆ ಇದೆ. ಡಿ ಗುಂಪಿನವರು 26ರ ಪೈಕಿ 19 ಮಾನದಂಡಗಳಲ್ಲಿ ಹಿಂದೆ ಇದೆ. ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರವಾದ ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಸೃಜಿಸಲು ವಿನಂತಿಸುತ್ತೇವೆ” ಎಂದು ಒತ್ತಾಯಿಸಿದ್ದಾರೆ.
“ನ್ಯಾ|| ನಾಗಮೋಹನ್‌ದಾಸ್‌ರವರ ವರದಿಯಂತೆ ರಾಜ್ಯದ ಪರಿಶಿಷ್ಟ ಜಾತಿ ಜನಸಂಖ್ಯೆ 1 ಕೋಟಿ 7ಲಕ್ಷ ಹಾಗೂ ಭೋವಿ ಜನಾಂಗದ ಜನಸಂಖ್ಯೆ 11,29,301 ಇದೆ. 2001-11 ರ ಜನಸಂಖ್ಯೆಯ ದಶಕವಾರು ಬೆಳವಣಿಗೆಯ ಪ್ರಮಾಣ 22.31% ರಷ್ಟಿದೆ. ಇದೇ ಮಾನದಂಡವನ್ನು ಅನುಸರಿಸಿದರೂ 2011-2025 ಅಂದರೆ 15 ವರ್ಷಗಳ ನಂತರದ ಜನಸಂಖ್ಯೆ 15 ಲಕ್ಷವಾಗಬೇಕಿದೆ. ತರಾತುರಿಯಲ್ಲಿ ಅಲ್ಪ ಸಮಯದಲ್ಲಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಅವೈಜ್ಞಾನಿಕ ಮಾರ್ಗಗಳನ್ನು ಬಳಸಿ ಪ್ರಮಾದ ಎಸಗಲಾಗಿದೆ” ಎಂದು ಆಪಾದಿಸಲಾಗಿದೆ.

“ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ಬಳಸ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈ ಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ” ಎಂದು ತಿಳಿಸಲಾಗಿದೆ.
“ಸರ್ವೋಚ್ಚನ್ಯಾಯಾಲಯದ ಆಗಸ್ಟ್ 01, 2024ರ ತೀರ್ಪಿನಂತೆ ಪರಿಶಿಷ್ಟ ಜಾತಿಗಳು ವರ್ಗಿಕರಿಸಿ ಈ ಕೆಳಗಿನ ಮಾನದಂಡಗಳನ್ನು ಅನುಸರಿಸಬೇಕೆಂದು ಸೂಚಿಸುತ್ತದೆ.
1. ಶೈಕ್ಷಣಿಕ ಹಿಂದುಳಿದಿರುವಿಕೆ
2. ಸರ್ಕಾರಿ ಉದ್ಯೋಗ ಅಥÀವಾ ಸಾರ್ವಜನಿಕ ಸಂಸ್ಥೆಗಳು ಪ್ರಾತಿನಿಧ್ಯ
3. ಆರ್ಥಿಕ ನೈತಿಕತೆ
4. ಸಾಮಾಜಿಕ ಹಿಂದುಳಿದಿರುವಿಕೆ.
ವರದಿಯಲ್ಲಿ ತಿಳಿಸಿರುವಂತೆ ಈ ಎಲ್ಲಾ ಮಾನದಂಡಗಳಲ್ಲಿ ಭೋವಿ ಜನಾಂಗ, ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ್ದರು ಭೋವಿ ಸಮಾಜವನ್ನು ಎಡಗೈ, ಬಲಗೈ ಹಾಗೂ ಬಂಜಾರ ಸಮಾಜಗಳಂತಹ ಮುಂದುವರೆದ ಗುಂಪಿಗೆ ಸೇರಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವರದಿಯಲ್ಲಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಉದ್ಯೋಗ ಸೂಚಕಗಳಿಗೂ ಹಾಗೂ ಮೀಸಲಾಗಿರುವ ಶೇಕಡ ನಿಗದಿ ಪಡೆಸಿರುವುದಕ್ಕೂ ಯಾವುದೇ ತಾಳೇ ಇಲ್ಲದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೂಚಕಗಳು ಮತ್ತು ವಿವಿಧ ಗುಂಪುಗಳಲ್ಲಿ ನಿಗದಿಪಡಿಸಿದ ಮೀಸಲಾತಿಯ ಪ್ರಮಾಣಗಳ ನಡುವೆ ಯಾವುದೇ ಪರಸ್ಪರ ಸಂಬಂಧವಿಲ್ಲ” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನರೇಗಾ ಕೆಲಸ, ಕೂಲಿ ವಿಳಂಬ ವಿರೋಧಿಸಿ ಗ್ರಾಕೂಸ್ ಕಾರ್ಯಕರ್ತರ ಪತ್ರ ಚಳುವಳಿ
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಸಚಿವ ಸಪುಂಟದಲ್ಲಿ ತಮ್ಮ ಮನವಿಯನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು ಎನ್ನಲಾಗಿದೆ.
ಮನವಿ ಸಲ್ಲಿಸುವ ವೇಳೆ ನಿಯೋಗದಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ, ವಿ ಹನುಮಂತಪ್ಪ, ರವಿ ಪೂಜಾರಿ, ಜಯಶಂಕರ, ಮುರಳಿಧರ ಬಂಡೆ, ಶ್ರೀಮತಿ ಮಂಜುಳ, ಶ್ರೀಮತಿ ಗೀತಾ, ತಿಪ್ಪಣ್ಣ ಒಡೆಯರಾಜು, ಕೃಷ್ಣಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.