ಎಸ್ಸೆಸ್ಸೆಲ್ಸಿ ಫಲಿತಾಂಶ ಬಂತು ಮುಂದೇನು? ಇಲ್ಲಿದೆ ಕೆಲ ಟಿಪ್ಸ್‌ಗಳು

Date:

Advertisements

ಅಬ್ಬಾ! ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಫಲಿತಾಂಶವೂ ಬಂತು ಸದ್ಯ ಪಾಸಾಗಿದ್ದೀವಿ – ಅಂತ ಉಸಿರುಬಿಟ್ಟೋರು ಕೆಲವರು. ಆದರೆ, ಮುಂದೆ ಏನ್ ಮಾಡೋದು? ಯಾವ್‌ ಕೋರ್ಸ್‌ಗೆ ಸೇರೋದು? ಮನೇಲಿ ತುಂಬ ಕಷ್ಟ ಇದೆ ಬೇಗ ಕೆಲಸ ತಗೋಬೇಕು ಮನೆ ಕಷ್ಟ ತೂಗಿಸಬೇಕು ಅಂತಹ ಕೋರ್ಸ್ ಯಾವುದು? ಆ ಬಗ್ಗೆ ಯಾರ ಬಳಿ ಸಲಹೆ ಕೇಳೋದು? ನೂರಾರು ಪ್ರಶ್ನೆಗಳಿಗೆ, ಗೊಂದಲಕ್ಕೆ ಸಿಲುಕಿರುವವರು ಹಲವರು. ಅಂತಹ ವಿದ್ಯಾರ್ಥಿಗಳಿಗೆ ಇಲ್ಲಿದೆ ಹಲವು ಟಿಪ್ಸ್.

ಹತ್ತನೇ ತರಗತಿ ನಂತರ ಉತ್ತಮ ಅಂಕ ಪಡೆದರೂ – ಪಡೆಯದೇ ಇದ್ದರೂ, ವಿಜ್ಞಾನ ವಿಭಾಗಕ್ಕೆ ಸೇರಿ ವೈದ್ಯ, ಎಂಜಿನಿಯರ್ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಪೋಷಕರು ತಮ್ಮ ಮಕ್ಕಳ ತಲೆಗೆ ತುಂಬುತ್ತಾರೆ. ಆದರೆ, ವಿದ್ಯಾರ್ಥಿಗಳು ಆ ಗೋಜಿಗೆ ಸಿಲುಕದೆ, ಮುಂದಿನ ಭವಿಷ್ಯದ ಬಗ್ಗೆ ನೀವೇ ನಿರ್ಧರಿಸಬೇಕು.

ವೃತ್ತಿಪರ ಕೋರ್ಸ್‌ಗಳು

Advertisements

ಮನೆಯಲ್ಲಿ ಬಡತನ, ಬೇಗನೆ ಓದು ಮುಗಿಸಿ ಒಂದು ಒಳ್ಳೆಯ ಕೆಲಸ ದಕ್ಕಿಸಿಕೊಂಡು, ಆರ್ಥಿಕವಾಗಿ ಸುಧಾರಿಸುವ ಹಂತಕ್ಕೆ ತಲುಪಬೇಕು ಎಂದು ಚಿಂತಿಸುವವರು, ಐಟಿಐ, ಪಾಲಿಟೆಕ್ನಿಕ್‌ ಡಿಪ್ಲೊಮಾ, ಪ್ಯಾರಾ ಮೆಡಿಕಲ್‌, ಪ್ಲಾಸ್ಟಿಕ್‌ ಟೆಕ್ನಾಲಜಿ, ಲೆದರ್‌ ಆಂಡ್‌ ಫೂಟ್‌ವೇರ್‌ ಟೆಕ್ನಾಲಜಿ, ಟೂಲ್‌ ಆಂಡ್‌ ಡೈ ಮೇಕಿಂಗ್‌, ಟೈಪ್ ರೈಟಿಂಗ್, ಸ್ಟೆನೋಗ್ರಫಿ, ಲೈಬ್ರರಿ ಅಸಿಸ್ಟೆಂಟ್, ಬ್ಯೂಟಿ ಎಕ್ಸ್‌ಪರ್ಟ್, ಇಂಟೀರಿಯರ್ ಡಿಸೈನಿಂಗ್, ಫೈರ್ ಮತ್ತು ಸೇಫ್ಟಿ, ಜ್ಯುವೆಲ್ಲರಿ ಡಿಸೈನಿಂಗ್, ಡಯಾಲಿಸಿಸ್ ಟೆಕ್ನಿಷಿಯನ್, ಸ್ಯಾನಿಟರಿ ಇನ್ಸ್‌ಪೆಕ್ಟರ್ ಹಾಗೂ ನರ್ಸಿಂಗ್ ಕೋರ್ಸ್‌ಗಳಿಗೆ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡಿಪ್ಲೊಮಾ, ಸರ್ಟಿಫಿಕೇಟ್ ಮತ್ತು ಜಾಬ್‌ ಓರಿಯೆಂಟೆಡ್‌ ಕೋರ್ಸ್‌ಗಳಿವೆ. ಅದಾದ ನಂತರ ಓದನ್ನು ಬಿಡದೆ ದುಡಿದು ಕೆಲಸ ಮಾಡುವುದರೊಂದಿಗೆ ಸಂಜೆ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರೆಸುವುದು ಒಳಿತು.

ಪಿಯುಸಿ ಓದಬೇಕು ಯಾವ ಕೋರ್ಸ್ ಪಡೆಯಲಿ?

ಪಿಯುಸಿ ಶಿಕ್ಷಣ ಪಡೆಯಲು ಇಚ್ಛಿಸುವವರು ನಿಮಗಿಷ್ಟವಾದ ಮತ್ತು ನೀವು ಯಾವುದರಲ್ಲಿ ಪರಿಣಿತರಾಗಬಲ್ಲಿರಿ ಎಂದು ಯೋಚಿಸಿ ನಿಮ್ಮ ಮುಂದಿನ ಭವಿಷ್ಯದ ನಿರ್ಧಾರ ಕೈಗೊಳ್ಳಬೇಕಿದೆ. ಪೋಷಕರ ಒತ್ತಡಕ್ಕೆ ಮಣಿದು ಸಂಕಷ್ಟಕ್ಕೆ ಒಳಗಾಗಬೇಡಿ.

ಪಿಯುಸಿಯಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಎನ್ನುವ ಮೂರು ವಿಭಾಗಗಳಿವೆ. ಈ ಮೂರೂ ವಿಭಾಗಗಳಲ್ಲಿ ತಲಾ ನಾಲ್ಕು ವಿಷಯ ಹಾಗೂ ಎರಡು ಭಾಷೆಗಳನ್ನು ಸೇರಿಸಿ ಒಂದಿಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ಮೂಲಗಣಿತ, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ ಹಾಗೂ ಬ್ಯುಸಿನೆಸ್ ಸ್ಟಡೀಸ್ ಜನಪ್ರಿಯ ಕಾಂಬಿನೇಷನ್. ಕೆಲ ಕಾಲೇಜುಗಳ ವಾಣಿಜ್ಯ ವಿಭಾಗಗಳಲ್ಲಿ ಅರ್ಥಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಮಾಜಶಾಸ್ತ್ರ, ಇತಿಹಾಸ ವಿಷಯಗಳ ಅಧ್ಯಯನಕ್ಕೂ ಅವಕಾಶ ಇರುತ್ತದೆ. ಷೇರು ಮಾರುಕಟ್ಟೆಯ ಬಗ್ಗೆ ಅಪಾರ ಆಸಕ್ತಿ ಹೊಂದಿರುವವರು, ಚಾರ್ಟೆಡ್‌ ಅಕೌಂಟೆಂಟ್ ಆಗಬಯಸುವವರು, ಉದ್ಯಮಶೀಲತೆ ಇರುವವರು, ಸ್ವಂತ ಕಂಪನಿ ಸ್ಥಾಪಿಸುವ ಹಂಬಲ ಇರುವವರು ಸಾಮಾನ್ಯವಾಗಿ ವಾಣಿಜ್ಯ ವಿಭಾಗ ಆರಿಸಿಕೊಳ್ಳುತ್ತಾರೆ.

ಕಲಾ ವಿಭಾಗ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರದ ಕಾಂಬಿನೇಷನ್ ಜನಪ್ರಿಯ. ಇದರ ಜೊತೆಗೆ ಐಚ್ಛಿಕ ಕನ್ನಡ, ಐಚ್ಛಿಕ ಇಂಗ್ಲಿಷ್, ತರ್ಕಶಾಸ್ತ್ರ, ಮನಃಶಾಸ್ತ್ರ, ಭೂಗೋಳ, ಸಂಗೀತದ ವಿಷಯಗಳು ಲಭ್ಯವಿದೆ. ಪತ್ರಿಕೋದ್ಯಮ, ಪ್ರವಾಸೋದ್ಯಮ, ಐಎಎಸ್‌, ಪಿಎಸ್‌ಐ, ವಕೀಲ, ನಿರೂಪಕರು, ಅಧಿಕಾರಿಗಳು, ಪಳೆಯುಳಿಕೆಗಳ ಸಂಶೋಧನೆ, ಮಾನಸಿಕ ತಜ್ಞರು ಆಗುವ ಹಲವು ಅವಕಾಶಗಳನ್ನು ಕಲಾ ವಿಭಾಗ ಸೃಷ್ಟಿಸುತ್ತದೆ.

ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಜನಪ್ರಿಯ ಕಾಂಬಿನೇಷನ್. ಇದರಲ್ಲಿ ಜೀವಶಾಸ್ತ್ರದ ಬದಲು ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಆರಿಸಿಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಎಂಜಿನಿಯರಿಂಗ್, ಮೆಡಿಕಲ್ ಓದಲು ಆಸಕ್ತಿಯಿರುವವರು, ಮೂಲ ವಿಜ್ಞಾನದಲ್ಲಿ ಸಂಶೋಧನೆ ಮುಂದುವರಿಸಲು ಇಚ್ಛಿಸುವವರು ಸಾಮಾನ್ಯವಾಗಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ.

ಪಿಯುಸಿಯಲ್ಲಿ ವಿಜ್ಞಾನ ಓದಿದ್ದರೆ ಮುಂದೆ ಯಾವುದೇ ಕಾಂಬಿನೇಷನ್‌ನಲ್ಲಿ ಪದವಿ ಶಿಕ್ಷಣ ಪಡೆಯಲು ಅವಕಾಶ ಇರುತ್ತದೆ. ಪಿಯುಸಿಯಲ್ಲಿ ಕಲೆ ಅಥವಾ ವಾಣಿಜ್ಯ ವಿಭಾಗದ ಕಾಂಬಿನೇಷನ್‌ಗಳನ್ನು ಓದಿದ್ದರೆ ವಿಜ್ಞಾನದಲ್ಲಿ ಪದವಿ ಪಡೆಯಲು ಅವಕಾಶ ಕಷ್ಟ. ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿ ಮುಂದೆ ವಾಣಿಜ್ಯ ವಿಭಾಗಕ್ಕೆ ಸೇರಲು ಇಚ್ಛಿಸುವವರು ತಮ್ಮ ವಿಭಾಗವನ್ನು ಬದಲಾಯಿಸಬಹುದಾಗಿದೆ.

ಈ ಸುದ್ದಿ ಓದಿದ್ದೀರಾ?: ಎಸ್‌ಎಸ್‌ಎಲ್‌ಸಿ | 95.68% ಪಡೆದ ವಲಸೆ ಕಾರ್ಮಿಕನ ಪುತ್ರ

ಶೇಕಡವಾರು ಫಲಿತಾಂಶದ ಮೇಲೆ ಭವಿಷ್ಯ ನಿರ್ಧರಿಸಬೇಡಿ

“ವಸತಿ ನಿಲಯಗಳ ಸೌಲಭ್ಯ ಇದ್ದರೂ ಸಹ ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರು ತಮ್ಮ ಮಕ್ಕಳನ್ನು ದೂರದ ಊರುಗಳಿಗೆ ಕಳುಹಿಸಲು ಹಿಂಜರಿಯುತ್ತಾರೆ. ಅದರಲ್ಲೂ ಹೆಣ್ಮಕ್ಕಳನ್ನೂ ಖಡಾಖಂಡಿತವಾಗಿ ಹೊರಗೆ ಕಳುಹಿಸುವುದೇ ಇಲ್ಲ. ಹತ್ತಿರದಲ್ಲಿ ಅಥವಾ ಪಕ್ಕ ಊರಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ತಾಕೀತು ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ವಿಧಿ ಇಲ್ಲದೆ ಇರುವ ಕೋರ್ಸ್‌ಗಳನ್ನೇ ಅಧ್ಯಯನ ಮಾಡಬೇಕಾದ ಪರಿಸ್ಥಿತಿ. ಗ್ರಾಮೀಣ ಪ್ರದೇಶಗಳಲ್ಲಿರುವ ಜನರಂತೂ ಮೂಲ ಸೌಕರ್ಯಗಳ ವಂಚಿತರು. ಹೀಗಾಗಿ ಇಷ್ಟವಿಲ್ಲದ ಕೋರ್ಸ್‌ ಪಡೆದು ಅರ್ಧಕ್ಕೆ ಶಿಕ್ಷಣ ನಿಲ್ಲಿಸುವಂತಾಗುತ್ತದೆ. ಶೇಕಡವಾರು ಫಲಿತಾಂಶದ ಮೇಲೆ ಭವಿಷ್ಯ ನಿರ್ಧರಿಸಬೇಡಿ” ಎಂದು ಈದಿನ.ಕಾಮ್‌ನೊಂದಿಗೆ ಮಾತನಾಡಿದ ಎಂದು ಯುವಜನ ಕಾರ್ಯಕರ್ತರು ಹಾಗೂ ವೃತ್ತಿ ಮಾರ್ಗದರ್ಶಕರಾದ ರಾಮಕ್ಕ ಆರ್ ಮಾಹಿತಿ ನೀಡಿದರು.

ವೃತ್ತಿ ನಿರ್ಧರಿಸಿ; ಅದಕ್ಕೆ ಪೂರಕವಾಗಿ ಅಧ್ಯಯನ ಮಾಡಿ

“ಶಿಕ್ಷಣದ ನಂತರ ವೃತ್ತಿ ಆಯ್ಕೆ ಮಾಡುವ ಬಗ್ಗೆ ಚಿಂತಿಸುವುದು ತಪ್ಪು. ವೃತ್ತಿ ನಿರ್ಧರಿಸಿದ ನಂತರ ಅದಕ್ಕೆ ಪೂರಕವಾಗಿ ಅಧ್ಯಯನ ಮಾಡಬೇಕು. ಸಾಧ್ಯವಾದಷ್ಟು ವೃತ್ತಿ ಮಾರ್ಗದರ್ಶಕರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಮುಖ್ಯ. ಯಾವುದೋ ತಿಳಿಯದ ವಿಷಯಗಳ ಬಗ್ಗೆ ಜೀವನ ಪೂರ್ತಿ ಅಧ್ಯಯನ ಮಾಡುವ ಬದಲಾಗಿ ಈ ಮಾರ್ಗ ಒಳಿತು. ಹಾಗೆಯೇ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನ ಜೀವನದಲ್ಲೇ ವೃತ್ತಿ ಪರ ಅಧ್ಯಯನಗಳ ಬಗ್ಗೆ ಮಾರ್ಗದರ್ಶಕರನ್ನು ನೇಮಿಸಬೇಕು. ಈ ಬಗ್ಗೆ ಇದುವರೆಗೂ ಯಾರು ಸಹ ಯೋಚಿಸಿಲ್ಲ. ಎಸ್ಸೆಸ್ಸೆಲ್ಸಿ ನಂತರ ಓದಲು ಇಷ್ಟಪಡದೆ ಇರುವವರು ಫೈನ್‌ ಆರ್ಟ್ಸ್, ಸಂಗೀತ ಈ ಕಲೆಗಳತ್ತ ಮುಖ ಮಾಡಬಹುದು. ಹೆಚ್ಚಾಗಿ ಪಿಯುಸಿ ಶಿಕ್ಷಣ ಪಡೆಯುವುದು ಮುಖ್ಯ. ಪೋಷಕರು, ಶಿಕ್ಷಕರ ಒತ್ತಡಕ್ಕೆ ಮಣಿಯಬೇಡಿ. ತಳ ಸಮುದಾಯದಿಂದ ಬಂದಂತಹ ವಿದ್ಯಾರ್ಥಿಗಳು ಈ ಹಿಂದೆ ನಮ್ಮ ಪೂರ್ವಜರು ಸಾಧಿಸದಿದ್ದನ್ನು ಸಾಧಿಸುವತ್ತ ಹೆಚ್ಚು ಗಮನ ಹರಿಸಬೇಕು” ಎಂದು ಸಲಹೆ ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

Download Eedina App Android / iOS

X