ಚಿಕ್ಕಬಳ್ಳಾಪುರ | ಕ್ರಿಸ್‌ಮಸ್ ; ಜಿಲ್ಲಾದ್ಯಂತ ಚರ್ಚ್‌ಗಳಲ್ಲಿ ಸಡಗರ, ಸಂಭ್ರಮ

Date:

Advertisements

ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ತಾಲೂಕಿನಾದ್ಯಂತ ಚರ್ಚುಗಳಲ್ಲಿ ಶಾಂತಿಧೂತ ಯೇಸುವಿನ ಜನ್ಮದಿನದ ಅಂಗವಾಗಿ ಕ್ರೈಸ್ತ ಬಾಂಧವರು ಕ್ರಿಸ್‌ಮಸ್‌ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಚಿಕ್ಕಬಳ್ಳಾಪುರ ನಗರದ ಸಿಎಸ್‌ಐ ವೆಸ್ಲಿ ಚರ್ಚ್‌ ಸೇರಿದಂತೆ ಜಿಲ್ಲೆಯಾದ್ಯಂತ ಕ್ರಿಸ್‌ ಮಸ್‌ ಹಬ್ಬದ ಹಿನ್ನೆಲೆ ಚರ್ಚ್‌ಗಳಿಗೆ ಬಣ್ಣಬಣ್ಣದ ವಿದ್ಯುದೀಪಾಲಂಕಾರ ಮಾಡಲಾಗಿತ್ತು. ಕ್ರೈಸ್ತ ಬಾಂಧವರು ಹೊಸ ಉಡುಗೆ ತೊಡುಗೆಗಳನ್ನು ತೊಟ್ಟು ಮನೆಗಳ ಮುಂದೆ ಕ್ರಿಸ್‌ ಮಸ್‌ ಟ್ರೀ, ಗೋದಲಿ, ನಕ್ಷತ್ರ, ಬೆಲ್‌ ಹಾಗೂ ಸಂತ ಕ್ಲಾಸ್‌ ವೇಷಭೂಷಣ ಹಾಕುವ ಮೂಲಕ ಕ್ರಿಸ್‌ ಮಸ್‌ ಹಬ್ಬವನ್ನು ಆಚರಿಸಿದರು.

ಬಾಗೇಪಲ್ಲಿ ಪಟ್ಟಣದ ವಿವಿಧ ಚರ್ಚುಗಳಿಗೆ ವಿಶೇಷ ವಿದ್ಯುದ್ಧೀಪಾಲಂಕಾರ ಮಾಡಲಾಗಿದ್ದು, ವರ್ಣರಂಜಿತವಾಗಿ ಕಂಗೊಳಿಸಿದವು. ಕ್ರೈಸ್ತರ ಮನೆಗಳು ಸಹ ವಿದ್ಯುತ್ ದೀಪಗಳಿಂದ ಗಮನ ನೋಡುಗರ ಗಮನ ಸೆಳೆಯುವಂತಿದ್ದವು. ಬಾಗೇಪಲ್ಲಿ ತಾಲ್ಲೂಕಿನಾದ್ಯಂತ
ಕ್ರಿಸ್ಮಸ್ ಗೋದಲಿ, ನಕ್ಷತ್ರಗಳ ಸಾಲು ಎಲ್ಲೆಡೆ ರಾರಾಜಿಸಿದವು.

Advertisements

ವಿಶೇಷ ತಿನಿಸುಗಳಾದ ಕೇಕು, ಕುಸ್ವಾರ್‌ಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿತ್ತು. ಹಬ್ಬಕ್ಕಾಗಿ ಸಮುದಾಯದವರು ಎರಡು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದು, ಸಂಭ್ರಮಾಚರಣೆಗೆ ಮಂಗಳವಾರ ಹಾಗೂ ಬುಧವಾರ ಚರ್ಚ್‌ ಹಾಗೂ ಮನೆಗಳಲ್ಲಿ ಅಂತಿಮ ತಯಾರಿ ನಡೆಸುತ್ತಿದ್ದ ದೃಶ್ಯ ಕಂಡುಬಂತು. ಯೇಸು ಹುಟ್ಟಿನ ಸಂದೇಶದ ದ್ಯೋತಕವಾಗಿ ಬಣ್ಣ ಬಣ್ಣದ ನಕ್ಷತ್ರಗಳು, ಆಕಾಶ ಬುಟ್ಟಿಗಳು, ಕ್ರಿಸ್‌ಮಸ್‌ ಟ್ರೀಗಳು ಎಲ್ಲಾ ಚರ್ಚ್‌ ಹಾಗೂ ಪ್ರಾರ್ಥನಾ ಮಂದಿರಗಳ ಮಹಡಿಯನ್ನು ಅಲಂಕರಿಸಿದ್ದವು.

ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಮನೆಗಳಲ್ಲಿ ಕೇಕ್‌ ಹಾಗೂ ವಿಶೇಷ ಖಾದ್ಯ ತಯಾರಿ ನಡೆಸಿದ್ದು, ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಕ್ರಿಸ್‌ ಮಸ್‌ ಅಂಗವಾಗಿ ಚರ್ಚುಗಳಲ್ಲಿ ಯೇಸುವಿನ ಸ್ತುತಿಗೀತೆಗಳ ಗಾಯನ, ಬಲಿಪೂಜೆ ಹಾಗೂ ವಿಶೇಷ ಪಾರ್ಥನೆ ಜರುಗಿದವು.

ಬಾಗೇಪಲ್ಲಿ ಪಟ್ಟಣದ ಹೊಸ ಜೀವನ ನಿಲಯದ ಫಾದರ್ ಹೆಚ್.ಎಸ್.ಪ್ರಕಾಶ್ ಪ್ರಾರ್ಥನೆ ಮಾಡಿ ಕ್ರಿಸ್ಮಸ್ ಸಂಭ್ರಮದ, ಆಡಂಬರದ ಅಚರಣೆಯ ಹೊರತಾಗಿ ಪ್ರೀತಿ, ದಯೆ, ಕರುಣೆ, ಕ್ಷಮೆ, ಸೇವೆ ಮುಂತಾದ ಮಾನವೀಯ ಮತ್ತು ದೈವೀ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳುವ ಒಂದು ಶ್ರೇಷ್ಠ ಆಚರಣೆಯಾಗಲಿ ಎಂದು ಹರಸಿದರು. ‌

ಇದನ್ನೂ ಓದಿ : ಚಿಕ್ಕಬಳ್ಳಾಪುರ | ಸಿರಿಧಾನ್ಯ ಬೆಳೆಗಳಿಂದ ಆರ್ಥಿಕ ಸಿರಿ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಮನುಷ್ಯನ ಅಂತರಾತ್ಮದಲ್ಲಿ ಮಾನವೀಯ ಮೌಲ್ಯಗಳು ಕ್ರಿಸ್ತನ ಜನನದಲ್ಲಿ ಮತ್ತೆ ಮತ್ತೆ ಮೂಡಿಬರಲಿ. ವಿಶ್ವದ ಸಮಸ್ತ ಜನರು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪ್ರೀತಿ, ಶಾಂತಿ ನೆಮ್ಮದಿಯೊಂದಿಗೆ ಸಹಾಯ, ಸಹಕಾರ, ಸಹಬಾಳ್ವೆಯೊಂದಿಗೆ ಇಡೀ ಮನುಕುಲ ಒಂದು ವಿಶ್ವ ಕುಟುಂಬವಾಗಿ ಜೀವಿಸಲು ಈ ಕ್ರಿಸ್ತ ಜಯಂತಿ ಕ್ರಿಸ್​ಮಸ್ ಹಬ್ಬ ಸರ್ವರಿಗೂ ಸ್ಪೂರ್ತಿ ಹಾಗೂ ಪ್ರೇರಣೆಯಾಗಲಿ ಎಂದು ಶುಭ ಕೋರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X