ಕೊಪ್ಪಳ ಜಿಲ್ಲೆಯ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೊಗಿ ಇಲಾಖೆ ಕರೆದಿರುವ ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಕೊಪ್ಪಳ ಜಿಲ್ಲಾ ಸಿವಿಲ್ ಪ.ಜಾತಿ/ಪ.ಪಂಗಡದ ಗುತ್ತಿಗೆದಾರರ ಸಂಘದಿಂದ ಲೋಕೋಪಯೋಗಿ ಇಲಾಖೆ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ
“ಕರ್ನಾಟಕ ಸರ್ಕಾರವು ಪ.ಜಾತಿ/ಪ.ಪಂಗಡ, ಹಿಂದುಳಿದ ವರ್ಗ, 2ಎ, ಮತ್ತು ಪ್ರವರ್ಗ-1ರ ಸಮುದಾಯದವರಿಗೆ ಜಾತಿವಾರು ಗುತ್ತಿಗೆದಾರರಿಗೆ ಟೆಂಡರ್ ನೀಡುತ್ತಾರೆ. ಆದರೆ, ಕೊಪ್ಪಳ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಸೇರಿ ಪ.ಜಾತಿ/ಪ.ಪಂಗಡ, ಹಿಂದುಳಿದ, 2ಎ ಮತ್ತು ಪ್ರ.ವರ್ಗ 1 ಜಾತಿಗಳ ಗುತ್ತಿಗೆದಾರರಿಗೆ ಟೆಂಡರ್ ನೀಡುವಲ್ಲಿ ಅನ್ಯಾವೆಸಗುತ್ತಿದ್ದಾರೆಂದು ಆರೋಪಿಸಿ ಕೆಟಿಪಿಪಿ ಕಾಯ್ದೆ ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ” ಎಂದು ಸಂಗದ ವಿಭಾಗೀಯ ಅಧ್ಯಕ್ಷ ಸಿದ್ದು ಮಣ್ಣನವರ ಆರೋಪಿಸಿದರು.
“ಪ.ಜಾತಿ/ಪ.ಪಂಗಡಕ್ಕೆ ಶೇ.24.10ರಷ್ಟಿದ್ದು, ಈ ನಿಯಮಾನುಸಾರ ಟೆಂಡರ್ ಕರೆಯಬೇಕು. ಆದರೆ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ.ಜಾತಿ/ಪ.ಪಂಗಡ, ಹಿಂದುಳಿದ ಸಮುದಾಯಗಳಿಗೆ ಅನ್ಯಾಯವೆಸಗುತ್ತಲೇ ಬಂದಿದ್ದಾರೆ. ಕೊಪ್ಪಳ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಕಲಬುರಗಿ ಮಖ್ಯ ಎಂಜಿನಿಯರ್ ಸವರ್ಣೀಯ ಜನಪ್ರತಿನಿಧಿಗಳ ಕೈಗೊಂಬೆಯಾಗಿ ವರ್ತಿಸಿ ಟೆಂಡರ್ ಹಂಚಿಕೆಯಲ್ಲೂ ತಳಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ತೀವ್ರಗೊಂಡ ಕಾರಂಜಾ ಸಂತ್ರಸ್ತರ ಧರಣಿ : ಡಿ.18ರಂದು ಸಿಎಂ ನೇತೃತ್ವದಲ್ಲಿ ಸಭೆ
“ಪ್ಯಾಕೇಜ್ ಟೆಂಡರ್ ಕರೆದಿರುವ ಅದಿಕಾರಿಗಳು ಹಾಗೂ ಇದರಲ್ಲಿ ಮೂಗು ತೂರಿಸಿರುವ ಜನಪ್ರತಿನಿಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಪ್ಯಾಕೇಜ್ ಟೆಂಡರ್ ರದ್ದುಪಡಿಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಗುತ್ತಿಗೆದಾರ ಮಂಜುನಾಥ ಮಿಸಲಾಪುರ ಎಚ್ಚರಿಕೆ ನೀಡಿದರು.