ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಾದ ನ್ಯಾಯಾಂಗ ಬಡಾವಣೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರದಂದು ನಿವಾಸಿಗಳ ಸಂಘ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಇದರ ಅಂಗವಾಗಿ ಇಂದು ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ನಮ್ಮ ಪರಿಸರವನ್ನು ನಾವೇ ಸ್ವಚ್ಛವಾಗಿ ಇಡಬೇಕೆಂಬ ಮನಸ್ಥಿತಿ ನಗರ ನಿವಾಸಿಗಳು ಅರಿತುಕೊಂಡಲ್ಲಿ ನಗರವು ಸ್ವಚ್ಛವಾಗಿರುತ್ತದೆ ಮತ್ತು ಡೆಂಘೀಯಂತಹ ಮಾರಕ ಕಾಯಿಲೆಗಳು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ
ಸ್ಥಳೀಯ ನಿವಾಸಿಗಳ ಸಂಘದ ಅಧ್ಯಕ್ಷ ನಿವೃತ್ತ ನ್ಯಾಯಾಧೀಶ ಡಿ. ಕೃಷ್ಣಪ್ಪ ಸ್ವಚ್ಛತಾ ಅಭಿಯಾನ ಸೇರಿದಂತೆ ಬಡಾವಣೆಯ ಇನ್ನಿತರ ಸಾರ್ವಜನಿಕ ಹಿತಾಸಕ್ತಿಯ ಕೆಲಸ ಕಾರ್ಯಗಳಲ್ಲಿ ಸಂಘವು ಅತ್ಯಂತ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ. ನಮ್ಮ ಈ ಬಡಾವಣೆ ಇತರ ಬಡಾವಣೆಗಳಿಗೆ ಮಾದರಿಯಾಗಲಿದೆ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಬನ್ನೂರ್ ಮಠ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ನಿವೃತ್ತ ನ್ಯಾಯಾಧೀಶ ವಿ.ಜಿ ಸವಡ್ಕರ್ ಮಲ್ಲಿಕಾರ್ಜುನ್ ಖಿಣಕೇರಿ, ಹುನುಗುಂದ್ ಮತ್ತು ಸಂಘದ ಸಕ್ರಿಯ ಸದಸ್ಯರಾದ ಎಲ್ ನಾಗರಾಜ್, ನಾಗರಾಜ್ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.
