ಬೆಳೆಗಳ ಸಂರಕ್ಷಣೆಗಾಗಿ ಎನ್. ಎಸ್. ಬೋಸರಾಜು ಫೌಂಡೇಷನ್ ವತಿಯಿಂದ ನಾಲ್ಕು ದಿನಗಳ ಕಾಲ ಮೋಡ ಬಿತ್ತನೆಗೆ ಚಾಲನೆಗೆ ಕಾಂಗ್ರೇಸ್ ಮುಂಖಡ ರವಿ ಬೋಸರಾಜ ಚಾಲನೆ ನೀಡಿದರು .
ರಾಯಚೂರು ಜಿಲ್ಲೆಯಲ್ಲಿ ತೀವ್ರ ಬರದ ಹಿನ್ನೆಲೆ ಮೆcongressಣಸಿನ ಕಾಯಿ, ಹತ್ತಿ, ಕಡಲೆ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಬಾಡುತ್ತಿವೆ, ಆದ್ದರಿಂದ ಬೆಳೆ ಸಂರಕ್ಷಣೆಗಾಗಿ, ದೇಶದ ಬೆನ್ನೆಲುಬಾದ ರೈತರಿಗೆ ಆತ್ಮಸ್ಥೈರ್ಯ ತುಂಬಲು ಎನ್.ಎಸ್ ಬೋಸರಾಜು ಫೌಂಡೇಷನ್ ವತಿಯಿಂದ ಹಾಗೂ ಪಿಕೆಕೆ ಸಂಸ್ಥೆ ಸಹಯೋಗದೊಂದಿಗೆ ನಾಲ್ಕು ದಿನಗಳ ಕಾಲ ಸ್ವಂತ ಖರ್ಚಿನಲ್ಲಿ ಮಾಡುತ್ತಿರುವ ಮೋಡ ಬಿತ್ತನೆ ಕಾರ್ಯಕ್ಕೆ ಮುಖಂಡ ರವಿ ಬೋಸರಾಜು ಅವರು ಹೇಳಿದರು .
“ಸ್ಥಳೀಯ ರೈತರ ಆರ್ಥಿಕತೆಗೆ ನೀಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಬೆಳೆಗೆ ಮಳೆ ಬಹಳ ಅವಶ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಮೋಡ ಬಿತ್ತನೆಯ ಕಾರ್ಯಕ್ಕೆ ಮುಂದಾಗಿದ್ದೇವೆ. ಜಿಲ್ಲೆಯ ಜನರ ಜೀವನ ಮಟ್ಟವನ್ನು ಉತ್ತಮವಾಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ” ಎಂದರು.
“ನವೆಂಬರ್ 5 ರಿಂದ ಈ ಕಾರ್ಯವನ್ನು ಪ್ರಾರಂಭಿಸಲಾಗುವುದು. ವೈಜ್ಞಾನಿಕವಾಗಿ ಪರಿಶೀಲನೆ ನಡೆಸುವ ಮೂಲಕ ಹಾಗೂ ಮೋಡಗಳ ಲಭ್ಯತೆಯ ಅನುಸಾರವಾಗಿ ಜಿಲ್ಲೆಯಾದ್ಯಂತ ಮೋಡ ಬಿತ್ತನೆಯ ಕಾರ್ಯವನ್ನು ಕೈಗೊಳ್ಳಲಾಗುವುದು. ಕ್ಯಾಪ್ಟನ್ ವೀರೇಂದ್ರ ಸಿಂಗ್ ಹಾಗೂ ಕೋ- ಕ್ಯಾಪ್ಟನ್ ಆದರ್ಶ ಪಾಂಡೆ ನೇತೃತ್ವದಲ್ಲಿ ವಿಟಿ- ಕೆಸಿಎಂ ವಿಮಾನದಿಂದ ಮೋಡ ಬಿತ್ತನೆ ಮಾಡಲಾಯಿತು. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮೋಡ ಬಿತ್ತನೆಯ ಕಾರ್ಯ ಯಶಸ್ವಿಯಾಗಿದ್ದು, ರಾಯಚೂರು ಜಿಲ್ಲೆಯಲ್ಲೂ ಮೋಡ ಕವಿ ಬಿತ್ತನೆ ಯಶಸ್ವಿಯಾಗುವ ಮೂಲಕ ಮಳೆಯಾಗಲಿದೆ ಎನ್ನುವುದು ನಮ್ಮ ವಿಶ್ವಾಸವಾಗಿದೆ” ಎಂದು ವಿಡಿಯೋ ಮೂಲಕ ಹಂಚಿಕೊಂಡರು .
ಈ ಸಂದರ್ಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಬಾದರ್ಲಿ, ಶರಣಯ್ಯ ನಾಯಕ್, ವಸಂತ ನಾಯಕ್, ಬ್ರಿಜ್ಜೆಶ್ ಪಾಟೀಲ್ , ಶಿವಕುಮಾರ್ ಅರಕೇರಿ, ಅಮರೇಗೌಡ ಜಂಬಲದಿನ್ನಿ, ಅರುಣ ದೋತರಬಂಡಿ, ಮೊಹ್ಮದ್ ಶೈಬಾಜ್, ವಿಶ್ವೇಶ್ವರ ರಾವ್, ವೆಂಕಟರಾವ್, ಭಾರ್ಗವ್, ಬಸವರಾಜ್, ಜುಕುರು, ವೆಂಕಟೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.