ರಾಜ್ಯ ರಾಜಧಾನಿ ಬೆಂಗಳೂರಿನ ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ಎಲೆಕ್ಟ್ರಿಕ್ ಶೋರೂಂ, ಗೃಹೋಪಯೋಗಿ ವಸ್ತುಗಳ ಅಂಗಡಿ ಸೇರಿದಂತೆ 100 ಕಡೆಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸರಕುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಅನಧಿಕೃತವಾಗಿ ಗೋದಾಮುಗಳಲ್ಲಿ ಶೇಖರಿಸಿಟ್ಟು, ಜಿಎಸ್‌ಟಿ ನೀಡದೇ ವ್ಯಾಪಾರ ನಡೆಸುತ್ತಿರುವ ಮಾಹಿತಿ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಗೋದಾಮಿನಲ್ಲಿ ಲೆಕ್ಕಕ್ಕೆ ಸಿಗದ ಹಲವು ವಸ್ತು ಇಟ್ಟಿರುವುದು ಬೆಳಕಿಗೆ ಬಂದಿದೆ. ಅನಧಿಕೃತವಾಗಿ ಸರಕುಗಳನ್ನು ಶೇಖರಣೆ ಮಾಡಿಟ್ಟಿದ್ದ ಅಂಗಡಿ ಮಾಲೀಕರಿಗೆ ವಾಣಿಜ್ಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೆ.5ರ ತಡರಾತ್ರಿ ಚಿಕ್ಕಪೇಟೆ ಮತ್ತು ಸುತ್ತಮುತ್ತಲಿನ ಟೆಕ್ಸ್ ಟೈಲ್ಸ್ ವ್ಯಾಪಾರಿಗಳು, ರೆಡಿಮೇಡ್ ಗಾರ್ಮೆಂಟ್ಸ್, ಎಲೆಕ್ಟ್ರಿಕ್ ವಸ್ತುಗಳ ಶೋರೂಂ, ಗೃಹೋಪಯೋಗಿ ವಸ್ತುಗಳ ಶಾಪ್ ಸೇರಿದಂತೆ ನೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆಯ ಪ್ರಮಾಣವನ್ನು ಪತ್ತೆ ಹಚ್ಚಲು ಹಣಕಾಸಿನ ದಾಖಲೆಗಳು ಮತ್ತು ಇತರ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಗೋಡೌನ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ವಾಣಿಜ್ಯ ತೆರಿಗೆ ಪಾವತಿಸದೆ ವಂಚನೆ ಎಸಗಿದ ಆರೋಪದ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ತೆರಿಗೆ ಪಾವತಿ ಮಾಡದೇ ಗೋಡೌನ್‌ನಲ್ಲಿರಿಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಗೋಡೌನ್ ಮತ್ತು ಅಂಗಡಿಗಳಿಗೆ ಜಿಎಸ್‌ಟಿ ನಿಯಮಾವಳಿ ಪ್ರಕಾರ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಟ್ ಕಾಯಿನ್ ಹಗರಣ | ಪಂಜಾಬ್‌ನ ಹ್ಯಾಕರ್ ರಾಜೇಂದ್ರ ಸಿಂಗ್ ಎಸ್‌ಐಟಿ ವಶಕ್ಕೆ
ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರ ಮತ್ತು ಸಂಖ್ಯೆಯನ್ನು ಪ್ರದರ್ಶಿಸಿಲ್ಲ. ನೋಂದಾಯಿತ ವ್ಯಾಪಾರ ಸ್ಥಳ ಮತ್ತು ಹೆಚ್ಚುವರಿ ವ್ಯಾಪಾರ ಸ್ಥಳ ಘೋಷಿಸಿಲ್ಲ. ಅಂಥವರಿಗೆ ವಾಣಿಜ್ಯ ತೆರಿಗೆ ಇಲಾಖೆ ದಂಡ ವಿಧಿಸಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.