ಭಾರೀ ಮಳೆಯಿಂದಾಗಿ, ಗೋಡೆ ಕುಸಿದು ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಪರಿಹಾರಕ್ಕಾಗಿ ಚೆಕ್ ವಿತರಿಸಿತ್ತು. ಆದರೆ, ಜಿಲ್ಲಾಡಳಿತ ಮಾಡಿರುವ ಎಡವಟ್ಟಿನಿಂದ ಚೆಕ್ ಮೂಲಕ ಸಂತ್ರಸ್ತರು ಹಣ ಪಡೆಯಲು ಸಾಧ್ಯವಾಗಿಲ್ಲ. ಇದೀಗ, ಜಿಲ್ಲಾಡಳಿತ ನೀಡಿದ್ದ ಚೆಕ್ ‘ಬೌನ್ಸ್’ ಆಗಿದೆ ಎಂದು ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಜಿಲ್ಲೆಯ ಕಳಸಾ ತಾಲೂಕಿನ ಹಳುವಳ್ಳಿ ಗ್ರಾಮದ ಲಕ್ಷ್ಮಣ್ ಎಂಬವರ ಮನೆ ಕುಸಿದಿತ್ತು. ಅವರ ಮನೆಯ ಮೇಲೆ ಮರ ಬಿದ್ದಿದ್ದರಿಂದ ಮನೆ ಧ್ವಂಸಗೊಂಡಿತ್ತು. ಮನೆಗೆ ಹಾನಿಯಾದ ಪರಿಣಾಮ, ಪುನರ್ವಸತಿ ಕಲ್ಪಿಸಲು ಪರಿಹಾರವಾಗಿ ಅವರಿಗೆ 1.20 ಲಕ್ಷ ರೂ. ಮೌಲ್ಯದ ಚೆಕ್‌ಅನ್ನು ಚಿಕ್ಕಮಗಳೂರು ಜಿಲ್ಲಾಡಳಿತ ನೀಡಿತ್ತು.
ಜಿಲ್ಲಾಡಳಿತ ನೀಡಿದ್ದ ಚೆಕ್‌ಅನ್ನು ಬ್ಯಾಂಕ್‌ನಲ್ಲಿ ಕೊಟ್ಟು, ಹಣ ಪಡೆಯಲು ಲಕ್ಷ್ಮಣ್ ಅವರು ನಾಲ್ಕು ತಿಂಗಳಿನಿಂದ ತಾಲೂಕು ಕಚೇರಿಗೂ – ತಮ್ಮ ಹಳ್ಳಿಗೂ ಅಲೆದಾಡುತ್ತಿದ್ದರು. ಆದರೂ, ಪರಿಹಾರದ ಹಣವನ್ನು ತಹಶೀಲ್ದಾರ್ ಬಿಡುಗಡೆ ಮಾಡಿಲ್ಲ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಹೀಗಾಗಿ, ಚೆಕ್ ಬೌನ್ಸ್ ಆಗಿದೆ ಎಂದು ಹೇಳಿದ್ದಾರೆ.