ಬೀದರ್ ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರ ಸಭೆ ಕಚೇರಿ ಇರುವ ಸ್ಥಳದಲ್ಲೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಅಂದಾಜು 100 ಕೋಟಿ ರೂ. ಅನುದಾನದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ, ಫೆಬ್ರವರಿ ಮೊದಲ ವಾರದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಹೇಳಿದರು.
“ಸಂಕೀರ್ಣದ ನಿವೇಶನದ ಅಂತಿಮಗೊಳಿಸುವ ಕೆಲಸ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಕಂದಾಯ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಸಿ ವಿನ್ಯಾಸ ಸಿದ್ದಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ನಗರ ಸಭೆಯ 2 ಎಕರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ 3 ಎಕರೆಯ ಒಟ್ಟು 5 ಎಕರೆ ನಿವೇಶನದಲ್ಲಿ ನೂತನ ಜಿಲ್ಲಾ ಸಂಕೀರ್ಣನಿರ್ಮಾಣವಾಗುತ್ತುದೆ” ಎಂದು ಹೇಳಿದರು.
“ಈ ಹಿಂದೆ 48 ಕೋಟಿ ರೂ. ಅನುದಾನ ಇತ್ತು, ಆದರೆ ಸಚಿವ ಸಂಪುಟದಲ್ಲಿ 100 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಲೋಕಸಭೆ ಚುನಾವಣೆಯ ಮುನ್ನವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ನೂತನ ಸಂಕೀರ್ಣ ಕಟ್ಟಡದಲ್ಲಿ ನಗರ ಸಭೆ ಕಚೇರಿ ಇರುವುದಿಲ್ಲ. ಈಗಿರುವ ನಗರ ಸಭೆ ಕಚೇರಿ ಬೇರೆಡೆ ಸ್ಥಳಾಂತರಿಸಲಾಗವುದು” ಎಂದರು.
ಈ ಸುದ್ದಿ ಓದಿದ್ದೀರಾ? ಶೆಟ್ಟರ್ ನಡೆಯಿಂದ ಬೆಳಗಾವಿಯಲ್ಲಿ ಅಂಗಡಿ ಕುಟುಂಬದ ಟಿಕೆಟ್ ಭದ್ರ?
“ಬಸವಕಲ್ಯಾಣದಲ್ಲಿ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿಗೆ 200 ಕೋಟಿ ಬಿಡಗುಡೆಗೊಳಿಸಲಾಗಿತ್ತು. ಇದೀಗ ನಮ್ಮ ಸರ್ಕಾರ 40 ಕೋಟಿ ರೂ. ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ” ಎಂದು ಹೇಳಿದರು.