ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಜಯಭೇರಿ ಸಾಧಿಸಿತು. ಮಧ್ಯಾಹ್ನ ಒಂದೂವರೆ ಸುಮಾರಿಗೆ ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್ ಸಿಬ್ಗತ್ ಉಲ್ಲಾ ಫಲಿತಾಂಶ ಘೋಷಣೆ ಮಾಡಿದರು.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪ.ಜಾತಿಗೆ ಮೀಸಲಾಗಿಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವಿಕಾಸ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ಇಬ್ಬರೂ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಸದಸ್ಯ ರಾಜೇಶ್, ಜೆಡಿಎಸ್ ನ ಬಷೀರ್ ಹಾಗೂ ಅನುಷಾ ಚುನಾವಣೆಗೆ ಗೈರು ಹಾಜರಿಯಾಗಿದ್ದರು. ಈ ಹಿನ್ನೆಲೆ ಅಧ್ಯಕ್ಷರಾಗಿ ವಿಕಾಶ್ ಮತ್ತು ಉಪಾಧ್ಯಕ್ಷರಾಗಿ ಗಂಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಕಾಂಗ್ರೆಸ್ ಪಕ್ಷದ ವಿಕಾಸ್ ಹಾಗೂ ಗಂಗರಾಜು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂತಸದ ವಿಚಾರ. ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದ ಕಾರಣ ಆಂಕಾಕ್ಷಿಗಳು ಹೆಚ್ಚಾಗಿದ್ದರು. ಆದರೆ ಎಲ್ಲರ ಮನವೊಲಿಸಿ ಮೂರನೇ ವಾರ್ಡಿನ ಕಾಂಗ್ರೆಸ್ ಸದಸ್ಯ ವಿಕಾಸ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಗಂಗರಾಜುರವರನ್ನು ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ಅಭಿವೃದ್ದಿ ಮಾಡುತ್ತಾರೆಂಬ ನಿರೀಕ್ಷೆಯಿದೆ. ಪ.ಪಂ.ಗೆ ಹೆಚ್ಚು ಅನುದಾನ ಒದಗಿಸಲು ಕ್ರಮ ವಹಿಸುತ್ತೇನೆ ಎಂದರು.
ಬಳಿಕ ಗುಡಿಬಂಡೆ ಪ.ಪಂ ನೂತನ ಅಧ್ಯಕ್ಷ ವಿಕಾಸ್ ಮಾತನಾಡಿ, ಶಾಸಕ ಸುಬ್ಬಾರೆಡ್ಡಿಯವರ ಮಾರ್ಗದರ್ಶನದಂತೆ ಗುಡಿಬಂಡೆ ಪಟ್ಟಣ ಪಂಚಾಯತಿಯನ್ನು ಅಭಿವೃದ್ದಿ ಮಾಡುತ್ತೇವೆ. ನನ್ನ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಡಿಬಂಡೆಯನ್ನು ಅಭಿವೃದ್ದಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!
ಈ ವೇಳೆ ನೂತನ ಪ.ಪಂ. ಉಪಾಧ್ಯಕ್ಷ ಗಂಗರಾಜು, ಸದಸ್ಯರಾದ ಇಸ್ಮಾಯಿಲ್ ಆಜಾದ್ ಬಾಬು, ಮಂಜುಳ, ರಾಜೇಶ್, ವೀಣಾ, ನಗೀನ್ ತಾಜ್, ಬಷೀರಾ, ಮುಖಂಡರಾದ ಆದಿರೆಡ್ಡಿ, ಹೆಚ್.ಪಿ.ಲಕ್ಷ್ಮೀನಾರಾಯಣ, ಮಂಜುನಾಥ್, ರಿಯಾಜ್, ತಿರುಮಣಿ ಮಂಜುನಾಥ್, ರಮೇಶ್, ಅಜಯ್, ಸಂಜಯ್ ಸೇರಿದಂತೆ ಹಲವರು ಇದ್ದರು.