ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೆಳ್ಳೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಭಾನುವಾರ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 12 ನಿರ್ದೇಶಕ ಸ್ಥಾನಗಳ ಪೈಕಿ 9 ನಿರ್ದೇಶಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಜಯಭೇರಿ ಸಾಧಿಸಿದ್ದು, ಬಿಜೆಪಿ 3 ಸ್ಥಾನಗಳಿಗೆ ತೃಪ್ತಿಪಟ್ಟಿದೆ.
12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 24 ಮಂದಿ ಅರ್ಭರ್ಥಿಗಳು ಸ್ಪರ್ಧೆ ಮಾಡಿದ್ದರು. ಮೀಸಲಾತಿ ಅನುಸಾರ ಚುನಾವಣಾಧಿಕಾರಿ ಪ್ರೇಮ್ ಕುಮಾರ್ ಫಲಿತಾಂಶ ಪ್ರಕಟಿಸಿದರು.

ಸಾಮಾನ್ಯ ಸ್ಥಾನಕ್ಕೆ ಎನ್.ಎಸ್.ಪ್ರಭಾಕರ್ ರೆಡ್ಡಿ, ಕೆ.ಆರ್.ನರಸಿಂಹಪ್ಪ, ಭಾವಿರೆಡ್ಡಿ, ಶ್ರೀನಿವಾಸ್, ವೆಂಕಟರಮಣರೆಡ್ಡಿ ಆಯ್ಕೆಯಾದರೆ, ಪರಿಶಿಷ್ಟ ಜಾತಿ, ಪ.ಪಂಗಡ ಮೀಸಲು ಸ್ಥಾನಕ್ಕೆ ಕ್ರಮವಾಗಿ ಉತ್ತಣ್ಣ, ಕೃಷ್ಣಪ್ಪ ಆಯ್ಕೆಯಾದರು. ಹಿಂದುಳಿದ ಪ್ರವರ್ಗ-ಎ ಸ್ಥಾನಕ್ಕೆ ಬಾಬಾಜಾನ್ ಮತ್ತು ಬಿ.ಟಿ.ಕೃಷ್ಣಪ್ಪ ಹಾಗೂ ಮಹಿಳಾ ಮೀಸಲು ಸ್ಥಾನಗಳಿಗೆ ಈಶ್ವರಮ್ಮ, ಕಲಾವತಿ ಆಯ್ಕೆಯಾಗುವ ಮೂಲಕ ಚುನಾವಣೆ ಶಾಂತಿಯುತ ಅಂತ್ಯ ಕಂಡಿತು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಆ.27ರಂದು ರಾಜಭವನ ಚಲೋ
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳನ್ನು ಬೆಂಬಲಿಗರು ಹೂಮಾಲೆ ಹಾಕಿ ಅಭಿನಂದಿಸಿದರು. ಬಳಿಕ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.