ರಾಜ್ಯ ಸರ್ಕಾರ ‘ಸಂವಿಧಾನ ಜಾಗೃತಿ ಜಾಥಾ’ ಫೆಬ್ರವರಿ 13ರಂದು ಶಿರಹಟ್ಟಿಗೆ ತೆರಳಲಿದೆ. ಜಾಥಾವನ್ನು ಸ್ವಾಗತಿಸುವ ಕುರಿತು ಲಕ್ಷ್ಮೇಶ್ವರದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪೂರ್ವಭಾವಿ ನಡೆಸಿದೆ.
ಲಕ್ಷ್ಮೇಶ್ವರದ ಉಮ್ಮಾ ವಿದ್ಯಾಲಯದಲ್ಲಿ ಫೆ.13ರಂದು ಕಾರ್ಯಕ್ರಮ ನಡೆಯಲಿದೆ. ಬಳಿಕ, ಮುಂಡಗರಿ ಮೂಲಕ ಜಾಥಾ ಜಿಲ್ಲೆಯನ್ನು ದಾಟಲಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಜಾಥಾವು ಲಕ್ಷ್ಮೇಶ್ವರ ತಾಲೂಕಿನ ಶಿರಹಟ್ಟಿ, ಮಾಗಡಿ, ಯತ್ತಿನಹಳ್ಳಿ, ಮಾಡಳ್ಳಿ ಹಾಗೂ ಗೊಜನೂರ ಗ್ರಾಮದ ಮೂಲಕ ಸಂಚರಿಸಲಿದೆ. ಫೆ.16ರವರೆಗೂ ತಾಲೂಕಿನಲ್ಲಿ ಸಂಚರಿಸುತ್ತದೆ ಎಂದು ತಿಳಿಸಿದ್ದಾರೆ.
ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ವಿವಿಧ ಸಮಾಜದ ಸಂಘಟನೆಗಳ ಮುಖಂಡರುಗಳು ಶಾಲಾ ಶಿಕ್ಷಕರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಲಕ್ಷ್ಮೇಶ್ವರ ತಹಶಿಲ್ದಾರ ವಾಸುದೇವ ಎಚ್ ವಿ, ಗ್ರೇಡ್ ಟು ತಹಶಿಲ್ದಾರ ಮಂಜುನಾಥ ಅಮಾಸಿ. ಸಮಾಜ ಕಲ್ಯಾಣ ಅಧಿಕಾರಿ ಶರಣಯ್ಯ ಕುಲಕರ್ಣಿ, ಪುರಸಭೆಯ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಗೊಜನೂರು, ಲಕ್ಷ್ಮೇಶ್ವರ, ಸೂರಣಗಿ, ಅಕ್ಕಿಗುಂದ, ಬಾಲೇಹೊಸೂರ. ಮುಂತಾದ ಗ್ರಾಮದ ಎಲ್ಲ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ವರದಿ: ಕೇಶವ ಕಟ್ಟಿಮನಿ, ಸಿಟಿಜನ್ ಜರ್ನಲಿಸ್ಟ್, ಲಕ್ಷ್ಮೇಶ್ವರ