ಶೋಷಿತರು, ದುರ್ಬಲರು, ತಳ ಸಮುದಾಯ ಸೇರಿ ಎಲ್ಲ ಜನಾಂಗ, ವರ್ಗಗಳ ಹಿತ ಭಾರತದ ಸಂವಿಧಾನದಲ್ಲಿ ಅಡಗಿದೆ. ಆದರೆ, ಕೆಲವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.
ಭಾಲ್ಕಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ಸಂವಿಧಾನ ದಿನ ಆಚರಣೆಯಲ್ಲಿ ಪಾಲ್ಗೊಂಡು ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು.
“ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಸಮುದಾಯಕ್ಕೆ ಸೀಮಿತವಾಗಿಲ್ಲ, ಅವರು ವಿಶ್ವಜ್ಯೋತಿ ಆಗಿದ್ದಾರೆ. ಅವರ ಚಿಂತನೆ, ವಿಚಾರಧಾರೆ ವಿಶ್ವಕ್ಕೆ ಶ್ರೇಷ್ಠವಾಗಿವೆ. ಜಗತ್ತಿನ ಎಲ್ಲ ಸಂವಿಧಾನಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ಒದಗಿಸಿದ್ದಾರೆ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣದಂತೆ ದೆಹಲಿಯಲ್ಲೂ ಕಾಂಗ್ರೆಸ್ ಬಿಜೆಪಿಯ ಟೈರ್ ಪಂಕ್ಚರ್ ಮಾಡಲಿದೆ: ರಾಹುಲ್ ಗಾಂಧಿ
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ ಮೋರೆ, ದಲಿತಪರ ಸಂಘಟನೆಗಳ ಹಿರಿಯ ಮುಖಂಡ ವಿಲಾಸ ಮೋರೆ, ಪ್ರಥಮ ದರ್ಜೆ ಗುತ್ತಿಗೆದಾರ ಸಂಗಮೇಶ ಹುಣಜೆ, ಪ್ರಮುಖರಾದ ಜೈಪಾಲ ಬೋರಾಳೆ,
ಅಶೋಕ ಗಾಯಕವಾಡ, ಪ್ರಕಾಶ ಭಾವಿಕಟ್ಟೆ, ಸಂಜು ಭಾವಿಕಟ್ಟೆ, ಕೈಲಾಸ ಭಾವಿಕಟ್ಟೆ, ಶಿವಕುಮಾರ ಮೇತ್ರೆ, ಓಂಕಾರ ಮೋರೆ, ಪ್ರಶಾಂತ ಕೊಟಗೀರಾ, ಭೀಮ ಕಾಂಬಳೆ, ಮಹಾಂತೇಶ ವಜ್ರೆ, ಶಶಿಕಲಾ ಸಿಂಧನಕೇರೆ, ಚಂದು ಸಂಪಂಗೆ, ನಾರಾಯಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಸಂಗನ್ ಸೇರಿದಂತೆ ಹಲವರು ಇದ್ದರು.