ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಂಪು ಹಿಂಸೆ, ಹತ್ಯೆ, ಅಮಾಯಕರ ಕೊಲೆ ತಡೆಯಲು ದ್ವೇಷ ಭಾಷಣ ಮಾಡುತ್ತಿರುವ ಸಂವಿಧಾನ ವಿರೋಧಿ ಸಾಮಾಜಿಕ ಶಕ್ತಿಗಳನ್ನು ಗುಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಬೀದರ ಜಿಲ್ಲಾ ಜಾತ್ಯಾತೀತ ನಾಗರಿಕ ವೇದಿಕೆ ಆಗ್ರಹಿಸಿದೆ.
ಸೋಮವಾರ ವೇದಿಕೆಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ಮುಖಂಡರು ಮಾತನಾಡಿ, ʼದೇಶದಲ್ಲಿ ಬಲಪಂಥಿಯ ಸಂಘಟನೆಗಳು ದಿನನಿತ್ಯ ಕಾನೂನು ಕೈಗೆತ್ತಿಕೊಂಡು ನಿರ್ದಿಷ್ಟ ಜನಾಂಗ ಮತ್ತು ಸಮುದಾಯವನ್ನು ಗುರಿ ಮಾಡುತ್ತ ಗುಂಪು ಹತ್ಯೆ, ಗುಂಪು ಹಿಂಸೆ ಮತ್ತು ಅಮಾಯಕರ ಕೊಲೆ ನಡೆಸಲಾಗುತ್ತಿದೆ. ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟ ಆಗಿರವುದನ್ನು ಸಹಿಸದ ಮತೀಯವಾದಿಗಳು ಹಿಂಸೆ, ಕೊಲೆಗಳಿಗೆ ಪ್ರಚೋದಿಸುತ್ತಿದ್ದಾರೆ. ಲವ್ ಜಿಹಾದ್, ಗೋರಕ್ಷಣೆ, ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯವನ್ನು ಮತ್ತು ನಾಗರಿಕ ಹಕ್ಕಿಗಾಗಿ ಹೋರಾಡುವ ದಲಿತ ಸಮುದಾಯದವರ ಮೇಲೆ ದಾಳಿಗಳು ನಡೆಯುತ್ತಿವೆʼ ಎಂದು ಖಂಡಿಸಿದರು.
ʼಬಲಪಂಥಿಯ ಸಂಘಟನೆಯ ಉಪ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಗುಂಪು ಹತ್ಯೆ, ಗುಂಪು ಹಿಂಸೆ ಮತ್ತು ಕೊಲೆ ಮಾಡುವ ಪ್ರಯೋಗಾಲಯವನ್ನಾಗಿ ಮಾಡಲಾಗಿರುತ್ತಿದೆ. ರೌಡಿಗಳನ್ನು ಸಮಾಜ ಮುಖಂಡರಾಗಿ ಬಿಂಬಿಸುವಲ್ಲಿ ಮಾಧ್ಯಮಗಳಲ್ಲಿ ನಿರಂತರ ಪ್ರಚಾರ ಕೊಡಲಾಗುತ್ತಿದೆ. ಕೊಲೆಗೆ ಕೊಲೆಯೇ ಉತ್ತರವೆನ್ನುವಂತೆ ಅರಾಜಕತೆ ನಿರ್ಮಿಸಿ ಕಾನೂನು ಕೈಗೆತ್ತಿಕೊಂಡು ಅಮಾಯಕರನ್ನು ಕೊಲೆ ಮಾಡಲಾಗುತ್ತಿದೆʼ ಎಂದು ಆರೋಪಿಸಿದರು.
ಯಾವುದೇ ಹಿಂಸೆಯಲ್ಲಿ ಭಾಗಿಯಾಗದ ಅಬ್ದುಲ್ ರಹೆಮಾನ್ ಎಂಬುವರನ್ನು 2025ರ ಮೇ 27ರಂದು ಕೊಲೆ ಮಾಡಲಾಗಿದೆ. ಕೊಲೆಯಾದ ಅಬ್ದುಲ್ ರಹೆಮಾನ್ ಅವರು ಕೆಲವು ದಿನಗಳ ಹಿಂದೆ ರೋಗಿಯೊಬ್ಬರ ಜೀವ ರಕ್ಷಿಸಲು ತನ್ನ ರಕ್ತವನ್ನೇ ಕೊಟ್ಟಿರುವ ವ್ಯಕ್ತಿ. ಯಾವುದೇ ಅಪರಾಧದ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ಹಿಂದುತ್ವವಾದಿಗಳು ಕೊಲೆಗೈದಿದ್ದಾರೆ. ಇದೆಲ್ಲವನ್ನು ನೋಡಿದರೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕೋಮುಶಕ್ತಿಯು ವಿಜೃಂಭಿಸುತ್ತಿದೆʼ ಎಂದು ಕಿಡಿಕಾರಿದರು.
ಅಮಾಯಕ ಅಬ್ದುಲ್ ರಹೆಮಾನ್ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಶೀಘ್ರದಲ್ಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಎಂಲ್ಸಿ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಜಿಲ್ಲಾ ಜಾತ್ಯತೀತ ನಾಗರಿಕ ವೇದಿಕೆಯ ಸದಸ್ಯರಾದ ನಿಜಾಮೋದ್ದೀನ್, ಸೈಯದ್ ವಹೀದ್ ಲಖನ್, ಬಾಬುರಾವ ಹೊನ್ನಾ, ರಾಜಕುಮಾರ ಮೂಲಭಾರತಿ, ಉಮೇಶಕುಮಾರ ಸೋರಳ್ಳಿಕರ್, ಶ್ರೀಕಾಂತ ಸ್ವಾಮಿ, ಶಪಾಯತ್ ಅಲಿ, ಅರುಣ ಪಟೇಲ್, ರಾಜಕುಮಾರ ಗುನಳ್ಳಿ, ಅಂಬೇಡ್ಕರ್ ಬೌದ್ಧೆ, ಜಗನ್ನಾಥ ಹೊನ್ನಾ, ರಾಹುಲ್ ಡಾಂಗೆ, ಸೊಯೋಬುದ್ದೀನ್, ಸೈಯದ್ ಇಬ್ರಾಹಿಂ, ಶಫಿಯೋದ್ದೀನ್ ಗೋಲ್ಡ್, ಪ್ರಭು ಹೊಚಕನಳ್ಳಿ, ಮೌಲಾನಾ ಮನ್ನಾಖೇಳ್ಳಿ, ಪ್ರಭು ತಗಣಿಕರ್, ಚಾಂದೋಬಾ ಹಂದಿಕೇರಾ, ಪಾಂಡುರಂಗ ಪ್ಯಾಗೆ, ಸುನೀಲ ವರ್ಮಾ, ಬಾಬುರಾವ ಕೌಠಾ, ಜೈಶೀಲ, ಸಾಯಿ ಶಿಂಧೆ, ರಾಹುಲ ಹಾಲಹಿಪ್ಪರಗಾ ಮತ್ತಿತರರು ಉಪಸ್ಥಿತರಿದ್ದರು.