ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಹಾಯಕ ಕಮಿಷನರ್ ಕಚೇರಿ ಜಪ್ತಿಯಾಗಿದೆ. ರೈತ ಉದಯ್ ಬಾಳಗಿ ಎಂಬುವವರಿಗೆ ₹10,58,295 ರೂ. ಪರಿಹಾರ ನೀಡದ ಅಧಿಕಾರಿ ಕಚೇರಿ ಪೀಠೋಪಕರಣ ಜಪ್ತಿಗೆ ಕುಮಟಾ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿತ್ತು.
ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಲಯದ ಅಧಿಕಾರಿಗಳು , ಇಂದು ಕುಮಟಾ ಸಹಾಯಕ ಕಮಿಷನರ್ ಕಚೇರಿಯ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಂಕೋಲಾ ತಾಲೂಕಿನ ಗುಂಡಬಾಳ ಗ್ರಾಮದ ರೈತ ಉದಯ ಬಾಳಗಿ ಗೋಕರ್ಣ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ತನ್ನ ನಾಲ್ಕು ಗುಂಟೆ ಜಾಗ ನೀಡಿದ್ದರು. ಅದಕ್ಕೆ ಪರಿಹಾರವಾಗಿ ಸಣ್ಣ ನೀರಾವರಿ ಇಲಾಖೆಯ 10 ಲಕ್ಷ 58 ಸಾವಿರ ಪರಿಹಾರ ನೀಡಬೇಕಿತ್ತು. ಪರಿಹಾರ ನೀಡದ ಇಲಾಖೆಯ ವಿರುದ್ಧ ರೈತ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ಇದನ್ನು ಓದಿದ್ದೀರಾ? ಮಂಡ್ಯ | ಬೆಟ್ಟಿಂಗ್ಗೆ ಪ್ರಚೋದನೆ: ನಾಗರಿಕರ ಪ್ರತಿಭಟನೆಯ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು; ಎಫ್ಐಆರ್ ದಾಖಲು
ನ್ಯಾಯಾಲಯ ರೈತನ ಅಳಲು ಆಲಿಸಿ, ಪರಿಹಾರ ನೀಡದ ಅಧಿಕಾರಿ ಕಚೇರಿ ಪೀಠೋಪಕರಣ ಜಪ್ತಿ ಮಾಡಲು ಆದೇಶಿಸಿದ್ದರು.
