ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ ಭಾರತದ ಬಹುದೊಡ್ಡ ಉದ್ಯಮಿದಾರ ಗೌತಮ ಅದಾನಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಭಾರತೀಯ ಕಮ್ಯುನಿಷ್ಟ ಪಕ್ಷ (ಸಿಪಿಐ) ಪ್ರತಿಭಟನೆ ನಡೆಸಿತು.
ಈ ಕುರಿತು ಭಗತ್ ಸಿಂಗ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಷ್ಟ್ರಪತಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದರು.
ದೇಶದಲ್ಲಿಯೇ ಅತೀ ದೊಡ್ಡ ಬಂಡವಾಳಗಾರರ ಗೌತಮ ಅದಾನಿ ಅವರು ಸುಮಾರು 250 ಬಿಲಿಯನ್ ಡಾಲರ್ ಅವ್ಯವಹಾರ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಇವರ ಕಂಪನಿಗಳ ಷೇರು ಹಗರಣದ ಬಗ್ಗೆ ಹಿಂಡನ್ ಬರ್ಗ್ ಬಂದಿತು.
ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರ ವರದಿಯಲ್ಲಿ ಆದಾನಿ ಕಂಪನಿಯ ಬೆಳಕೇರಿ ಬಂದರಿನ ಹಗರಣ ಬಗ್ಗೆ ದಾಖಲೆ ಇದೆ. ಇಷ್ಟೆಲ್ಲ ಹಗರಣ ನಡೆಸಿದ ಅದಾನಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜನಪ್ರತಿನಿಧಿಗಳ ನಿರಾಸಕ್ತಿ : ಕನಸಾಗಿಯೇ ಉಳಿದ ಮನ್ನಾಏಖೇಳ್ಳಿ ‘ಪಟ್ಟಣ ಪಂಚಾಯಿತಿ’ ರಚನೆ
ಈ ಸಂದರ್ಭದಲ್ಲಿ ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ, ಕಾರ್ಯದರ್ಶಿ ಎಂ.ಡಿ.ಅಲಿ ಅಹ್ಮದ್, ಎಂ.ಡಿ.ಶಫಾಯತ್ ಅಲಿ, ಅಖಿಲ್ ಭಾರತ್ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಪ್ರಭು ಹುಚಕನಳ್ಳಿ, ಚಾಂದೋಬಾ ಬೋಸ್ಲೆ ಸೇರಿದಂತೆ ಇತರರಿದ್ದರು.