ಬೀದರ್‌ | ವಿವಿಧ ಬೇಡಿಕೆ ಈಡೇರಿಕೆಗೆ ಸಿಪಿಐ ಒತ್ತಾಯ

Date:

Advertisements
  • ಬೀದರ ಬರ ಪೀಡಿತ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹ
  • ʼನ್ಯೂಸ್‌ ಕ್ಲಿಕ್‌ʼ ಸಂಸ್ಥೆಯ ಪತ್ರಕರ್ತರ ಮನೆ ಮೇಲೆ ನಡೆಸಿದ ಇಡಿ ದಾಳಿ ಖಂಡನೀಯ

ಬೀದರ್ ಜಿಲ್ಲೆ ಬರ ಪರಿಸ್ಥಿತಿ, ಆರ್ಟಿಕಲ್ 371(ಜೆ)ಯ ಅನುಷ್ಠಾನ, ಬಲಪಂಥಿಯ ರಾಷ್ಟ್ರೀಯ ಏಜ್ಯುಕೇಶನ ಪಾಲಿಸಿ ರಾಜ್ಯದಲ್ಲಿ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರು ಬೀದರ್‌ ನಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, “ಸರ್ಕಾರ ಅರಣ್ಯ ಕಾಯ್ದೆ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದು. ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸಬೇಕು, ನರೇಗಾ ಕಾರ್ಮಿಕರ ಆನಲೈನ್ ಹಾಜರಾತಿ ರದ್ದುಪಡಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳನ್ನು 5 ಸಾವಿರ ಜನ ಸಂಖ್ಯೆಗೆ ಆರೋಗ್ಯ ಸೇವೆ ಒದಗಿಸಬೇಕು. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಅತಿ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಅವರುಗಳನ್ನು ಕ್ರಮಬದ್ಧಗೋಳಿಸಬೇಕು ಹಾಗೂ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತರನ್ನು ಸರಕಾರಿ ನೌಕರರೆಂದು ಪರಿಗಣಿಸಿ ʼಸಿʼ ಹುದ್ದೆಯಲ್ಲಿ ಕ್ರಮ ಬದ್ಧಗೊಳಿಸುವುದು ಹಾಗೂ ಆರೋಗ್ಯ ಕೇಂದ್ರಗಳಿಗೆ ಔಷಧಿಗಳನ್ನು ಹೆಚ್ಚಾಗಿ ಪೂರೈಸಬೇಕು ಎಂದು ಒತ್ತಾಯಿಸಿದರು.

Advertisements

“ಇತ್ತೀಚೆಗೆ ದೆಹಲಿಯಲ್ಲಿ News Click ಸಂಸ್ಥೆಯಲ್ಲಿ ಪತ್ರಕರ್ತರಾಗಿ ದುಡಿಯುವರನ್ನು ಉದ್ದೇಶ ಪೂರ್ವಕವಾಗಿ ಅವರುಗಳ ಮನೆ ಮತ್ತು ಕಚೇರಿಗಳ ಮೇಲೆ ಕೇಂದ್ರ ಸರ್ಕಾರದ ನಡೆಸಿದ ಇಡಿ ದಾಳಿ  ತೀವ್ರವಾಗಿ ಖಂಡಿಸಿದ ಕಾರ್ಯಕರ್ತರು ಪತ್ರಕರ್ತರ ವಿರುದ್ಧ ʼUAPAʼ ಕಾನೂನಿನಂತೆ ನೋಂದಣಿ ಮಾಡಿದ್ದು ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಪ್ರಮುಖರಾದ ಬಾಬುರಾವ ಹೊನ್ನಾ , ಎಮ್.ಡಿ ಶಫಾಯತ್ ಅಲಿ, ಅಲಿ ಅಹ್ಮದ್ ಖಾನ್, ನಜೀರ್ ಅಹ್ಮದ್ , ಗುರುಪಾದಯ್ಯ ಸ್ವಾಮಿ, ಮೌಲಾನಾ, ಪ್ರಭು ಹೊಚಕನಳ್ಳಿ, ಸುನೀಲ ವರ್ಮಾ, ಪ್ರಭು ತಗಣಿಕರ್, ಶಿವರಾಜ ಕಮಠಾಣ, ರಾಮಣ್ಣಾ ಅಲಮಾಸಪೂರ, ಮಾರುತಿ ನಂದ್ಯಾಳ ಸೇರಿದಂತೆ ಇತರರಿದ್ದರು.

ಬೇಡಿಕೆಗಳು:

  1. ನಿವೇಶನ ರಹಿತರಿಗೆ ಮನೆಗಳು ಮಂಜೂರು ಮಾಡುವುದು.
  2. ಬೀದರ್ ಬರ ಪೀಡಿತವೆಂದು ಜಿಲ್ಲೆ ಎಂದು ಘೋಷಿಸಬೇಕು.
  3. ಕಲಂ 371 (ಜೆ) ರಂತೆ ಹುದ್ದೆಗಳನ್ನು ಭರ್ತಿ ಮಾಡಬೇಕು.
  4. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸುವುದು.
  5. ಅರಣ್ಯ ಸಂರಕ್ಷಣ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು. ಬಗರ ಹುಕುಂ ಸಾಗುವಳಿದಾರರನ್ನು
    ಸಕ್ರಮಗೊಳಿಸಬೇಕು.
  6. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು.
  7. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಔಷಧ ಮತ್ತು ಉಪಕರಣಗಳನ್ನು ಪೂರೈಸಬೇಕು.
  8. ಸಮುದಾಯ ಆರೋಗ್ಯ ಅಧಿಕಾರಿಗಳನ್ನು, ಅಂಗನವಾಡಿ ನೌಕರ, ಆಶಾ ಕಾರ್ಯಕರ್ತ ಮತ್ತು ಬಿಸಿಯೂಟ ನೌಕರರನ್ನು ಸಕ್ರಮಗೊಳಿಸಬೇಕು.

ಈ ಸುದ್ದಿ ಓದಿದ್ದೀರಾ? ನವೆಂಬರ್‌ನಲ್ಲಿ ರಾಜ್ಯದ ಜಾತಿಗಣತಿ ವರದಿ ನನ್ನ ಕೈ ಸೇರಲಿದೆ: ಸಿಎಂ ಸಿದ್ದರಾಮಯ್ಯ

  1. ಭೂಮಿ ಸರ್ವೇ ಮಾಡಲು ಶುಲ್ಕ ಹೆಚ್ಚಿಸಿದನ್ನು ಹಿಂಪಡೆಯಬೇಕು. ಪಹಣಿ ಪತ್ರಿಕೆಗಳಲ್ಲಿಯ ತಪ್ಪುಗಳನ್ನು ಕಂದಾಯ ಆದಾಲತ್ ಮುಖಾಂತರ ಸರಿಪಡಿಸಬೇಕು.
  2. ಬೀದರ ಸಹಕಾರ ಸಕ್ಕರೆ ಕಾರರ್ಖಾನೆ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿ ರೈತರ ಮತ್ತು ಕಾರ್ಮಿಕರ ಹಣ ಕೊಡದೆ ಇದ್ದುದಕ್ಕೆ ಅಪರಾಧಿಕ ಪ್ರಕರಣವನ್ನು ನೋಂದಾಯಿಸಬೇಕು.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X