ಕ್ರಿಮಿನಲ್ ತಿದ್ದುಪಡಿ ಕಾಯ್ದೆ ವಾಪಸ್, ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ಮತಾಂಧ ದಾಳಿಗಳ ಮೇಲೆ ಕಠಿಣ ಕ್ರಮಗಳಿಗೆ ಒತ್ತಾಯಿಸಿ ಸಿಪಿಐ (ಎಂ) ಕಾರ್ಯಕರ್ತರು ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ʼದೇಶದಲ್ಲಿ ರಾಷ್ಟ್ರೀಯ ಪರೀಕ್ಷಾ ಎಜೆನ್ಸಿ ನಡೆಸಿದ ಪರೀಕ್ಷೆಗಳ ಹಗರಣದಿಂದ ವಿದ್ಯಾರ್ಥಿಗಳ ಭವಿಷ್ಯ ಪೋಷಕರ ಕನಸು ನುಚ್ಚು ನೂರು ಮಾಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಇಕ್ಕಟಿಗೆ ಸಿಲುಕುವಂತಾಗಿದೆ. ಶಿಕ್ಷಣದ ಕೇಂದ್ರೀಕರಣ, ವ್ಯಾಪಾರೀಕರಣ ಹಾಗೂ ಕೋಮುವಾದ ಪ್ರತಿಪಾದಿಸುವ ಎನ್‌ಇಪಿ ಕೈಬಿಡಬೇಕುʼ ಎಂದು ಆಗ್ರಹಿಸಿದರು.
ʼತರಾತುರಿತಲ್ಲಿ ಜಾರಿಗೊಳಿಸಿರುವ ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಿಮಿನಲ್ ಕಾನೂನುಗಳನ್ನು ವಾಪಸು ಪಡೆಯಬೇಕು. ಇದು ಜನರನ್ನು ರಾಷ್ಟ್ರ ವಿರೋಧಿಗಳೆಂದು ಆರೋಪಿಸಿ ಶಿಕ್ಷೆ ನೀಡಲು ದಾರಿಯಾಗಿದೆ ಎಂದು ದೂರಿದರು. ಅಲ್ಪಸಂಖ್ಯಾತರ ಮೇಲೆ ದೇಶದ ವಿವಿಧ ಬಾಗದಲ್ಲಿ ದಾಳಿ ನಡೆಸಲಾಗಿದ್ದು ಖಂಡನೀಯ. ದೇಶದ ಮುಸ್ಲಿಂ ಸಮಾಜದ ರಕ್ಷಣೆಗೆ ಅಗತ್ಯ ಕ್ರಮವಹಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ, ತಾಲೂಕು ಕಾರ್ಯದರ್ಶಿ ಡಿ.ಎಸ್. ಶರಣಬಸವ ಸೇರಿದಂತೆ ಪ್ರಮುಖರಾದ ಆಂಜನೇಯ, ಖಾಜಾ ಅಸ್ಲಂ ಪಾಷಾ, ಕರಿಯಪ್ಪ ಅಚ್ಚೊಳ್ಳಿ, ವರಲಕ್ಷ್ಮಿ, ರಂಗಪ್ಪ ಯಾಪಲದಿನ್ನಿ, ಗೋವಿಂದ, ಬಂದೇನವಾಜ, ನಾರಾಯಣ, ನರಸಿಂಹಲು ಇತರರಿದ್ದರು.
ವರದಿ : ಹಫೀಜುಲ್ಲ