ಸಂಘ-ಸಂಸ್ಥೆಗಳು ಜನಸಾಮಾನ್ಯರಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಮೂಡಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಬೀದರ್‌ನ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಆಯೋಜಿಸಿದ್ದ ವಚನಾಮೃತ ಕನ್ನಡ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. “ಈಗಾಗಲೇ ಅನೇಕ ಕನ್ನಡ ಪರ ಸಂಘ- ಸಂಸ್ಥೆಗಳು ಇವೆ. ಸಂಸ್ಥೆಗಳ ಸಂಖ್ಯೆ ಹೆಚ್ಚಿದಷ್ಟು ಕನ್ನಡ ಬೆಳವಣಿಗೆಗೆ ಅನುಕೂಲವೇ ಆಗಲಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆ. ಅವರು ಬೇರೆ ಬೇರೆ ರಾಜ್ಯಗಳಿಂದ ಬಂದವರಿಗೆ ಕನ್ನಡ ಕಲಿಸಿದ್ದರು. ಕನ್ನಡದಲ್ಲಿ ವಚನ ಬರೆಯಲು ಪ್ರೇರಣೆ ನೀಡಿದ್ದರು” ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, “ಸಾಹಿತ್ಯಿಕ ಚಟುವಟಿಕೆಗಳನ್ನು ಕೈಗೊಳ್ಳಲು ವಚನಾಮೃತ ಕನ್ನಡ ಸಂಘ ರಚಿಸಲಾಗಿದೆ. ಸಂಘದಿಂದ ಬರುವ ದಿನಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ” ಎಂದು ಹೇಳಿದರು.
ಕಲಬುರಗಿಯ ಹಿರಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವರ್ ವಿಶೇಷ ಉಪನ್ಯಾಸ ನೀಡಿ, “ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳಿಗೆ ಸಂಬಂಧವಿದೆ. ಮಾನವೀಯ ಮೌಲ್ಯಗಳ ಜಾಗೃತಿ ಹೆಚ್ಚು ಅವಶ್ಯಕವಾಗಿದೆ.12ನೇ ಶತಮಾನದ ಶರಣರು ನೀಡಿರುವ ಶ್ರೇಷ್ಠವಾದ ವಚನ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕು” ಎಂದು ಹೇಳಿದರು
ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಕನ್ನಡ ಪರ ಚಟುವಟಿಕೆಗಳಿಗೆ ತಮ್ಮ ಸಹಕಾರ ಸದಾ ಇರಲಿದೆ” ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯುನೈಟೆಡ್ ಕಿಂಗಡಂ ಗೌರವ ಯುವ ಸಂಚಾಲಕ ಆದಿಶ್ ವಾಲಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಬಿ.ವಿ. ಭೂಮರಡ್ಡಿ ಕಾಲೇಜು ಪ್ರಾಚಾರ್ಯ ಡಾ. ಪಿ. ವಿಠ್ಠಲರೆಡ್ಡಿ, ಸಾಹಿತ್ಯ ಹಾಗೂ ಸಂಸ್ಕೃತಿ ಚಿಂತಕ ಗುರುಸಿದ್ದಪ್ಪ ಬಿರಾದಾರ ಸೇರಿದಂತೆ ಪ್ರಮುಖರಾದ ಬಸವರಾಜ ರುದನೂರು, ಶ್ರೀಕಾಂತ ಬಿರಾದಾರ, ಲೋಕೇಶ ಉಡಬಾಳೆ, ಬಸವರಾಜ ಬಿರಾದಾರ, ಆನಂದ ಜಾಧವ್, ರಾಜಕುಮಾರ ಶಂಭು, ಸಿದ್ರಾಮಪ್ಪ ಸಪಾಟೆ, ಕೆ. ಗುರುಮೂರ್ತಿ, ಗಂಗಶೆಟ್ಟಿ ಖಾನಾಪುರೆ, ಬಸವರಾಜ ಬೆಳಕುಣಿ ಸ್ವರೂಪಾರಾಣಿ, ಭಾರತಿ ವಸ್ತ್ರದ್ ಮೊದಲಾದವರು ಇದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಭೀಕರ ಹತ್ಯೆ
ಪ್ರವೀಣ ಮ್ಯೂಸಿಕ್ ಅಕಾಡೆಮಿಯವರು ನಾಡ ಗೀತೆ ಹಾಗೂ ಸಂಗೀತ ನಡೆಸಿಕೊಟ್ಟರು. ಜಯದೇವಿ ಯದಲಾಪುರೆ ನಿರೂಪಿಸಿದರು. ಪರಮೇಶ್ವರ ಬಿರಾದಾರ ಸ್ವಾಗತಿಸಿದರು. ಸಂತೋಷ ಮಂಗಳೂರೆ ವಂದಿಸಿದರು.