ಕಲಬುರಗಿ | ಎಲ್ಲದರಲ್ಲೂ ಗುಣಾತ್ಮಕತೆ ಕಾಣುವ ಮನೋಭಾವ ಬೆಳೆಯಬೇಕು: ಪ್ರೊ. ವಿಕ್ರಮ ವಿಸಾಜಿ

Date:

Advertisements
  • ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠ ಮತ್ತು ಒಳ್ಳೆಯ ಪುಸ್ತಕಗಳೊಂದಿಗಿನ ಒಡನಾಟ ಮುಖ್ಯ.
  • ಕ.ಕ. ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಅಳಿಸಲು ಇಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಬೇಕಿದೆ.

ಹೊಸ ಪೀಳಿಗೆಯ ಆಲೋಚನೆಗಳೇ ದೇಶದ ನಿಜವಾದ ಆಸ್ತಿ. ಎಲ್ಲ ಕಾಲದ ಅರಮನೆಗಳು ಬಿದ್ದುಹೋಗಿವೆ. ಆ ಸಂದರ್ಭದಲ್ಲಿ ಸೃಷ್ಠಿಯಾದ ಜ್ಞಾನ ಮಾತ್ರ ಉಳಿದಿದೆ ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ ವಿಕ್ರಮ ವಿಸಾಜಿ ಹೇಳಿದರು.

ಬೀದರ ಜಿಲ್ಲೆಯ ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜು ಸಿಯುಕೆ ಕನ್ನಡ ವಿಭಾಗದ ಸಹಯೋಗದಲ್ಲಿ ಕಲಬುರಗಿಯ ಸಿಯುಕೆ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡಿದ ‘ಲೇಖಕರೊಂದಿಗೆ ಸಂವಾದ’ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, “ರಾಷ್ಟ್ರಕೂಟರ ಸಾಮ್ರಾಜ್ಯ ಅಳಿದರೂ ಆ ಕಾಲದಲ್ಲಿ ‘ಕವಿರಾಜಮಾರ್ಗ’ ಕಟ್ಟಿಕೊಟ್ಟ ಜ್ಞಾನ ಪರಂಪರೆ ಇಂದಿಗೂ ಉಳಿದಿದೆ ಎಂದರು.ನಮಗೆ ಬಹಳ ದೊಡ್ಡ ಪರಂಪರೆ ಇದೆ ಎಂದರೆ ನಾವು ದೊಡ್ಡವರಾಗುವುದಿಲ್ಲ. ಆ ಪರಂಪರೆಯ ಸತ್ವ ಹೀರಿ ಮುಂದುವರೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ವೈಚಾರಿಕತೆಯ, ಚಿಂತನಶೀಲತೆಯ ದೃಷ್ಟಿಯಿಂದ ಸಮೃದ್ಧವಾಗಿರುವ ಪಟ್ಟಣ ಕಲ್ಯಾಣ. ವಚನ ಸಾಹಿತ್ಯ ಇರದಿದ್ದರೆ ಕನ್ನಡ ಸಾಹಿತ್ಯದ ಕಣಜ ಖಾಲಿಯಾಗಿರುತಿತ್ತು” ಎಂದು ನುಡಿದರು.

“ವಿದ್ಯಾರ್ಥಿ ಜೀವನದಲ್ಲಿ ಶ್ರೇಷ್ಠ ಮತ್ತು ಒಳ್ಳೆಯ ಪುಸ್ತಕಗಳೊಂದಿಗಿನ ಒಡನಾಟ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಸರಳವಾಗಿರಬೇಕು. ಹೈಫೈ ಜೀವನದಿಂದ ಸೂಕ್ಷ್ಮತೆ ನಾಶವಾಗುತ್ತದೆ. ಎಷ್ಟು ಸರಳವಾಗಿರುತ್ತೇವೆಯೋ ಅಷ್ಟು ಸೂಕ್ಷ್ಮತೆ ಬೆಳೆಯುತ್ತದೆ ಎಂದರು.ಜೀವನದಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಕೊಡುತ್ತೇವೆ ಎಂಬುದೇ ನಮ್ಮ ವ್ಯಕ್ತಿತ್ವ ರೂಪಿಸುತ್ತವೆ. ಯೋಚಿಸುವುದು, ಸ್ವತಂತ್ರ ಚಿಂತನೆಗಳೇ ರೂಪಿಸುವುದು ನಮ್ಮ ಪ್ರಾಮುಖ್ಯತೆವಿರಬೇಕು. ವಿದ್ಯಾರ್ಥಿ ಜೀವನದಲ್ಲಿಯೇ, ತಾರುಣ್ಯದಲ್ಲಿಯೇ ನಿಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಯಾರೋ ವಿಜ್ಞಾನಿಗಳಿಂದ, ಲೇಖಕರಿಂದಲೋ ಪ್ರಭಾವಿತರಾಗುತ್ತೇವೆ” ಎಂದರು.

Advertisements

“ಎಲ್ಲದರಲ್ಲಿ ಗುಣಾತ್ಮಕತೆಯನ್ನು ಕಾಣುವ ಮನಸ್ಥಿತಿ ಬಂದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬಂದು ಬಿಡುತ್ತದೆ. ಯಾವುದರಲ್ಲಿಯು ಬಹಳ ಸಮಸ್ಯೆ ಮತ್ತು ನಕಾರಾತ್ಮಕತೆಯನ್ನು ಕಾಣಬಾರದು. ನಮ್ಮ ಸರಿಯಾದ ಓದಿನಿಂದ ಸಮಸ್ಯೆಗಳು ಬಗೆಹರಿಯುತ್ತವೆ. ಹೊಸ ಕಾಲದಲ್ಲಿ ಸ್ವಪ್ರಾಶಸ್ತ್ಯ ಮತ್ತು ಪರನಿಂದೆ ಹೆಚ್ಚು ಕಾಣುತ್ತಿದ್ದೆವೆ.ಇದು ನಕಾರಾತ್ಮಕತೆಯ ಸೂಚಕ.ನಮ್ಮ ಓದು, ಬರಹ, ಕೆಲಸಗಳ ಕಡೆಗೆ ಮುಳುಗುವುದು ಇದಕ್ಕೆ ಪರ್ಯಾಯ ದಾರಿ.ನಮ್ಮ ಕೆಲಸದ ಬದ್ಧತೆಗಿಂತ ತಲ್ಲಿನತೆ ಮುಖ್ಯ ತಲ್ಲಿನತೆಯಲ್ಲಿಯೇ ಅರ್ಥವಂತಿಕೆ ಕಂಡು ಕೊಳ್ಳಲು ಸಾಧ್ಯ” ಎಂದು ಹೇಳಿದರು.

ಡಾ.ಟಿ.ಡಿ. ರಾಜಣ್ಣ ಮಾತನಾಡಿ, “ಬಹುತ್ವದ ತಿಳುವಳಿಕೆಗಾಗಿ, ಸೃಜನಶೀಲ ಬರಹಕ್ಕಾಗಿ ಉಪಯುಕ್ತವಾಗುವ ಜ್ಞಾನವನ್ನು ವಿದ್ಯಾರ್ಥಿಗಳು ಪಡೆಯಬೇಕು. ಹೊರಗಿನ ಜಗತ್ತನ್ನು ಅರಿಯುವ ಮೂಲಕವೇ ಜ್ಞಾನದ ವಿಸ್ತಾರವಾಗುತ್ತದೆ. ಹಲವು ಜ್ಞಾನ ಶಿಸ್ತುಗಳನ್ನು ಓದುವ, ತಿಳಿದುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಭಾರತದಲ್ಲಿ ಕೇರಳ ಶಿಕ್ಷಣ ಕ್ಷೇತ್ರದಲ್ಲಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕಕ್ಕಿಂತ ಮುಂದಿದೆ. ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ತೆಗೆದು ಹಾಕುವುದಕ್ಕಾಗಿ ಇಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಬೇಕಿದೆ. ಉತ್ತಮವಾದ ವಿಶ್ವವಿದ್ಯಾಲಯಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಿದೆ” ಎಂದರು

ಡಾ. ವಿಜಯಕುಮಾರ ಎಚ್. ವಿಶ್ವಮಾನವ ಅವರು ಮಾತನಾಡಿ, “ವ್ಯಕ್ತಿಗಳು ಮನುಷ್ಯರಾಗಿ ರೂಪುಗೊಳ್ಳಲು ಅಕ್ಷರ ಮತ್ತು ಅರಿವಿನ ಪರಂಪರೆಯಿಂದ ಸಾಧ್ಯ. ಜ್ಞಾನ ಮತ್ತು ಅರಿವು ಯಾರ ಸ್ವತ್ತು ಇಲ್ಲ. ಅವು ಪರಿಶ್ರಮ ಮತ್ತು ಅಧ್ಯಯನದಿಂದ ಸಾಧಿಸಬಹುದು. ಸಾಹಿತ್ಯ ಎನ್ನುವುದು ಬದುಕಿನಲ್ಲಿ ಬೆಳಕಾಗಿದೆ. ದೇಶದ ಹಲವು ವಿಶ್ವವಿದ್ಯಾಲಯಗಳು ಹುಟ್ಟಿಸುವ ಜ್ಞಾನ ಪರಂಪರೆಯನ್ನು ತಿಳಿದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಬೆಳೆಯಬೇಕು. ಬದುಕಿನಲ್ಲಿ ಒದಗುವ ಹಲವು ಅವಕಾಶಗಳ ಆಯ್ಕೆ ನಿಮ್ಮ ಕೈಯಲ್ಲಿಯೇ ಇರುತ್ತವೆ. ಮಹತ್ವದ ಆಯ್ಕೆಗಳು ನಿಮ್ಮದಾಗಲಿ “ಎಂದರು.

ಶಾಸ್ತ್ರೀಯ ಕನ್ನಡ ವಿಭಾಗದ ನಿರ್ದೇಶಕ ಪ್ರೊ. ಬಿ.ವಿ. ಪೂಜಾರಿ ಅವರು ಮಾತನಾಡಿ, “ಚೆನ್ನಾಗಿ ಮಾತನಾಡಲು, ಆಲೋಚಿಸಲು, ಬರೆಯಲು ಬಂದರು ಬದುಕಿನಲ್ಲಿ ಹಲವುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡ ಸಾಹಿತ್ಯವೆಂಬುದು ನಿತ್ಯ ಚಲನಶೀಲತೆಯನ್ನು ಕೊಡುವ ಶಕ್ತಿ ಪಡೆದುಕೊಂಡಿದೆ ಕನ್ನಡ ಅಧ್ಯಯನ ಮಾಡುವುದೆಂದರೆ ಈ ನೆಲ, ಜನ, ಸಂಸ್ಕೃತಿಯ ಕುರಿತು ಅರಿಯುವುದಾಗುದು” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕಿಯರು ಸಾವು

ಅಧ್ಯಯನಾಂಗದ ನಿರ್ದೇಶಕ ಪ್ರೊ. ಬಸವರಾಜ ಡೋಣೂರ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಕೋಡಗುಂಟಿ, ಅಭಿನವ ಪ್ರಕಾಶನದ ನ. ರವಿಕುಮಾರ, ಡಾ.ಅಪ್ಪಗೆರೆ ಸೋಮಶೇಖರ, ಡಾ.ವೀರೇಶ ಕಸಬೇಗೌಡರು, ಪರೀಕ್ಷಾ ವಿಭಾಗದ ಸಿದ್ದಲಿಂಗಯ್ಯ ಬಸವರಾಜ, ಕವಿ ಲಕ್ಕೂರ ಆನಂದ, ಡಾ. ಕಿರಣ ಗಾಜನೂರ, ಡಾ.ಅಬ್ದುಲ್ ಮಾಜಿದ್ ಮಣಿಯಾರ, ಸಹಾಯಕ ಗ್ರಂಥ ಪಾಲಕ ಗೋಕುಲ ಪ್ರಸಾದ್ ದೀಕ್ಷಿತ್, ಕವಿ ಪಿ ನಂದಕುಮಾರ್ ಮೊದಲಾದವರೊಂದಿಗೆ ಬಸವೇಶ್ವರ ಪದವಿ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಮಾತುಕತೆ, ಸಂವಾದ ನಡೆಸಿದರು.

ಬಸವೇಶ್ವರ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಪ್ರಸ್ತಾವಿಕ ಮಾತನಾಡಿದರು. ಬಸವರಾಜ ಖಂಡಾಳೆ ನಿರೂಪಿಸಿದರು. ಶ್ರೀನಿವಾಸ ಉಮಾಪುರೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X