ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಷ್ಟ್ರೀಯ ಹೆದ್ದಾರಿ 37ರ ಬಿಳಿನೆಲೆ ಸೇತುವೆ ಬಳಿ ನಿರ್ಮಿಸಲಾಗಿದ್ದ ಹಳೆಯ ತಡೆಬೇಲಿಯನ್ನು ಕಳವು ಮಾಡಲು ಯತ್ನಿಸಿದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದೆ.
ಕಡಬದ ಕೊಡಿಂಬಾಳದ ಕಾಶಿಂ ಎಂಬಾತ ಬಂಧಿತ ಆರೋಪಿ. ಲೋಕೋಪಯೋಗಿ ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆರೋಪಿ ರಸ್ತೆಯ ತಡೆಬೇಲಿಯನ್ನೇ ಕಳವು ಮಾಡಲು ಯತ್ನಿಸಿದ್ದ. ಪ್ರಸ್ತುತ ಟೆಂಡರ್ ಪ್ರಕ್ರಿಯೆಯಲ್ಲಿದ್ದ ತಡೆಬೇಲಿಯು ಹಳೆಯದಾಗಿದ್ದು, ಅದನ್ನು ವಾಹನದಲ್ಲಿ ಸಾಗಿಸಲು ಪ್ರಯತ್ನಿಸಿದ್ದ. ಈ ಸಮಯದಲ್ಲಿ ಸ್ಥಳೀಯ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಗಣೇಶ್ ಅನಿಲ ಎಂಬುವವರು ಸ್ಥಳಕ್ಕೆ ಧಾವಿಸಿ, ಶಂಕಿತ ಚಾಲಕನನ್ನು ವಿಚಾರಣೆ ನಡೆಸಿದಾಗ, ಆತ ಕಳವು ಮಾಡುವ ವಿಚಾರ ತಿಳಿದುಬಂದಿದೆ. ನಂತರ ಆತನನ್ನು ಕಡಬ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಅಕ್ರಮವಾಗಿ ಮರ ಕಡಿದು ಸಾಗಾಟಕ್ಕೆ ಯತ್ನ; ಮೂವರ ಬಂಧನ
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತೀವ್ರತೆಗೆ ಅನುಗುಣವಾಗಿ, ಪೊಲೀಸರು ಸ್ಥಳಕ್ಕೆ ಧಾವಿಸದಿದ್ದಲ್ಲಿ ಅಥವಾ ತನಿಖೆಗೆ ನಿರಾಕರಿಸಿದರೆ, ಇದನ್ನು ಕ್ರಿಮಿನಲ್ ಪ್ರೊಸೀಸರ್ ಕೋಡ್(ಸಿಆರ್ಪಿಸಿ) ಸೆಕ್ಷನ್ 157 (ಎ) ಅಥವಾ (ಬಿ) ಅಥವಾ 176 ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್ಎಸ್) ಅಡಿಯಲ್ಲಿ ದಾಖಲಿಸಬಹುದೆಂದು ಕಾನೂನು ತಜ್ಞರು ಸೂಚಿಸಿದ್ದಾರೆ.