ದ‌.ಕನ್ನಡ | ಗಣೇಶೋತ್ಸವ ಶೋಭಾಯಾತ್ರೆಯ ವೇಳೆ ತಿಂಡಿ-ತಿನಿಸು ನೀಡಬೇಡಿ: ಮಸೀದಿಗೆ ಭಜನಾ ಮಂದಿರದಿಂದ ಪತ್ರ!

Date:

Advertisements

ಹಿಂದೂಗಳ ಗಣೇಶ ಚೌತಿ ಹಬ್ಬ ಹಾಗೂ ಪ್ರವಾದಿ ಮುಹಮ್ಮದರ ಜನ್ಮದಿನದ ಅಂಗವಾಗಿ ಮುಸ್ಲಿಮರು ಆಚರಿಸುವ ಮೀಲಾದುನ್ನಬಿ ಸಾಧಾರಣವಾಗಿ ಎಲ್ಲ ವರ್ಷ ಆಸುಪಾಸಿನ ದಿನಗಳಲ್ಲಿ ನಡೆಯುತ್ತಾ ಬಂದಿದೆ. ಈ ಎರಡೂ ಸಂಭ್ರಮಾಚರಣೆಯ ವೇಳೆ ಶೋಭಾಯಾತ್ರೆ ಅಥವಾ ರ‌್ಯಾಲಿ ನಡೆಯುವುದು ಸಾಮಾನ್ಯ ಸಂಗತಿ.

ಈ ರ‌್ಯಾಲಿಗಳ ವೇಳೆ ಹಲವಾರು ಕಡೆಗಳಲ್ಲಿ ಹಿಂದೂ-ಮುಸ್ಲಿಮರ ಸೌಹಾರ್ದತೆಯ ದ್ಯೋತಕವಾಗಿ ಪರಸ್ಪರರು ಸಿಹಿ ತಿಂಡಿ-ಪಾನೀಯ ಹಂಚುವುದು ಸಾಮಾನ್ಯವಾಗಿದೆ. ‌ಅದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಕೂಡ ಹೊರತಾಗಿಲ್ಲ. ಆದರೆ, ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ವಿಚಿತ್ರ ರೀತಿಯ ಬೆಳವಣಿಗೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿರುವ ಭಜನಾ ಮಂದಿರವೊಂದರ ಆಡಳಿತ ಮಂಡಳಿಯವರು, ಸ್ಥಳೀಯ ಮಸೀದಿಗೆ ಪತ್ರ ಬರೆದಿದ್ದಾರೆ. ‌ಈ ಪತ್ರದಲ್ಲಿ ಗಣೇಶೋತ್ಸವದ ಶೋಭಾಯಾತ್ರೆಯ ವೇಳೆ ನಿಮ್ಮ ಸಮುದಾಯ(ಮುಸ್ಲಿಮರು)ದವರು ತಿಂಡಿ-ತಿನಿಸು ನೀಡಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ, ಕಳೆದ ವರ್ಷ ನೀವು ನೀಡಿದ್ದ ಸಿಹಿ ತಿಂಡಿಯನ್ನು ಸೇವಿಸಿದ್ದ ಹಿಂದೂ ಮಕ್ಕಳು ಅಸ್ವಸ್ಥರಾಗಿದ್ದರು ಎಂಬ ಅಂಶವನ್ನೂ ಕೂಡ ಉಲ್ಲೇಖಿಸಿರುವುದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೂ ಕಾರಣವಾಗಿದೆ. ಸದ್ಯ ಭಜನಾ ಮಂದಿರದ ಆಡಳಿತ ಮಂಡಳಿಯವರು ಮಸೀದಿಗೆ ಬರೆದಿರುವ ಪತ್ರದ ಪ್ರತಿಯು ವೈರಲ್ ಆಗಿದೆ.

Advertisements
1001603903
ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಪತ್ರ

ಬಂಟ್ವಾಳ ತಾಲೂಕಿನ ಬೋಳಂತೂರಿನ ಸಮೀಪ ಇರುವ ತುಳಸೀವನ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರವು ಈ ಪತ್ರವನ್ನು ಸ್ಥಳೀಯ ಮಸೀದಿಯ ಆಡಳಿತ ಕಮಿಟಿಗೆ ಕಳೆದ ಗುರುವಾರ(ಸೆ.5)ರಂದು ತಲುಪಿಸಿರುವುದಾಗಿ ತಿಳಿದು ಬಂದಿದೆ.

ವೈರಲಾಗಿರುವ ಪತ್ರದಲ್ಲಿ, “ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗ್ರತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾ ಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ” ಎಂದು ಉಲ್ಲೇಖಿಸಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಈ ದಿನ.ಕಾಮ್ ಮಾಹಿತಿ ಸಂಗ್ರಹಿಸಲು ಯತ್ನಿಸಿತು. ಈ ಪತ್ರ ಬಂದಿರುವುದನ್ನು ದೃಢಪಡಿಸಿರುವ ಸ್ಥಳೀಯ ಮಸೀದಿ ಕಮಿಟಿಯ ಅಧ್ಯಕ್ಷರಾದ ಮುಹಮ್ಮದ್ ಅವರು, “ಪತ್ರ ಕಳೆದ ಗುರುವಾರ ನಮ್ಮ ಮಸೀದಿಗೆ ಬಂದಿದೆ. ನಾವು ಕಳೆದ ವರ್ಷ ಮಸೀದಿ ಕಮಿಟಿಯ ವತಿಯಿಂದ ಯಾವುದೇ ತಿಂಡಿಯಾಗಲೀ, ಪಾನೀಯವಾಗಲೀ ಶೋಭಾಯಾತ್ರೆಯ ವೇಳೆ ನೀಡಿರಲಿಲ್ಲ. ಊರಿನ ಕೆಲವು ಯುವಕರು ತಮ್ಮ ಕೈಯಿಂದ ಹಣ ಹಾಕಿ, ಐಸ್ ಕ್ರೀಂ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಕೊಪ್ಪ | ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಪಿಎಸ್ಐ ಬಸವರಾಜ್ ವಿರುದ್ಧ ಆರೋಪ

ಕಳೆದ ವರ್ಷ ನೀಡಿದ್ದ ತಿಂಡಿ ತಿನಿಸುಗಳು ತಿಂದ ಬಳಿಕ ಹಿಂದೂ ಸಮುದಾಯದ ಮಕ್ಕಳು ಅಸ್ವಸ್ಥರಾಗಿದ್ದ ವಿಚಾರ ಏನಾದರೂ ಮಸೀದಿಯವರ ಗಮನಕ್ಕೆ ತಂದಿದ್ದರೇ ಎಂದು ಕೇಳಿದಾಗ, “ಇಲ್ಲ. ನಮಗೆ ಯಾವುದೇ ಮಾಹಿತಿ ಭಜನಾ ಮಂದಿರದ ಕಡೆಯಿಂದಾಗಲೀ, ಅಸ್ವಸ್ಥರಾಗಿದ್ದರು ಎನ್ನಲಾಗಿರುವ ಮಕ್ಕಳ ಪೋಷಕರಾಗಲೀ ತಿಳಿಸಿಲ್ಲ. ಈಗ ಪತ್ರದ ಬಂದಿದೆ. ಅದಕ್ಕೆ ನಾವು ಯಾವುದೇ ಉತ್ತರ ನೀಡಿಲ್ಲ. ಅದರಲ್ಲಿ ನಮಗೆ ಆಸಕ್ತಿಯೂ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಭಜನಾ ಮಂದಿರದ ಈ ನಿರ್ಧಾರದ ಹಿಂದೆ ಸ್ಥಳೀಯ ಬಜರಂಗದಳ ಹಾಗೂ ಸಂಘಪರಿವಾರದ ನಾಯಕರ ಕೈವಾಡ ಇರುವ ಆರೋಪ ಕೂಡ ಕೇಳಿಬಂದಿದೆ. ಈ ಪತ್ರವು ಕರಾವಳಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ಸೌಹಾರ್ದ ವಾತಾವರಣ ಸೃಷ್ಟಿಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ಜನರು ಸಾಸಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X