ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಬೆಂಬಲ ನೀಡುವಂತೆ ಬಂಟ ಬ್ರಿಗೇಡ್ ಹೆಸರಿನಲ್ಲಿ ನಕಲಿ ಪತ್ರ ಹರಿಯಬಿಡಲಾಗಿದೆ ಎಂದು ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬಿಜೆಪಿ ಕಾನೂನು ಪ್ರಕೋಷ್ಠದ ಸಹ ಸಂಚಾಲಕ ದೇವಿ ಪ್ರಸಾದ್ ಎ ಸಾಮಾನಿ ಅವರು ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಬಂಟ ಬ್ರಿಗೇಡ್ ಎಂಬ ಹೆಸರಿನ ಯಾವುದೇ ಸಂಘಟನೆ ಇರುವುದಿಲ್ಲ ಹಾಗೂ ಅಂತಹ ಸಂಘಟನೆಯ ಯಾವುದೇ ಕಾರ್ಯಚಟುವಟಿಕೆಗಳು ನಡೆದಿರುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ನಕಲಿ ಪತ್ರದ ಮೂಲಕ ಕಾಂಗ್ರೆಸ್ ಅಭ್ಯರ್ಥಿಯು ದುರ್ಲಾಭ ಪಡೆಯುತ್ತಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | 2,326 ಮತಗಟ್ಟೆಗಳು, 14,880 ಸಿಬ್ಬಂದಿಗಳೊಂದಿಗೆ ಮತದಾನಕ್ಕೆ ಸಕಲ ಸಿದ್ಧತೆ
“ಜಾತಿ ಜಾತಿಗಳ ನಡುವೆ ದ್ವೇಷ ಉಂಟು ಮಾಡಲು ಈ ರೀತಿಯ ಪತ್ರ ಸೃಷ್ಟಿಸಲಾಗಿದೆ” ಎಂದು ದೂರಿನಲ್ಲಿ ತಿಳಿಸಿದೆ.
ಈ ನಕಲಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟವರ ಬಗ್ಗೆ ಕೂಡಲೇ ಸೂಕ್ತ ಕ್ರಮ ಜರಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
