ಮಂಗಳೂರಿನ ಆಶಿಶ್ ಡಿಸೋಜಾ ಎಂಬ 13 ವರ್ಷದ ಬಾಲಕ ಡೆಂಘಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರು ಆತನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.
ಬಾಲಕ ಆಶಿಶ್‌ನ ತಂದೆ ಅಲ್ಫೋನ್ಸ್, ತಾಯಿ ಸೋನಿಯಾ ಡಿಸೋಜಾ ತಮ್ಮ ಮಗನ ಅಂಗಾಂಗಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಅಂಗಾಂಗಗಳ ಅಗತ್ಯವಿದ್ದ ರೋಗಿಗಳ ಬಾಳಿಗೆ ಬೆಳಕಾಗಿದ್ದಾರೆ.
ಆಶಿಶ್ ಡೆಂಘಿ ಜ್ವರಕ್ಕೆ ತುತ್ತಾಗಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿದ್ದ ಆಶಿಶ್ ಅವರನ್ನು ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ತಯಾರಿ ನಡೆಸಿತ್ತು. ಆದರೆ, ಆಶಿಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಆತನ ಅಂಗಾಂಗಗಳನ್ನು ಪೋಷಕರು ದಾನ ಮಾಡಲು ನಿರ್ಧಿಸಿ, ಆಶಿಶ್‌ನ ಎರಡು ಕಣ್ಣುಗಳನ್ನು ಮಾಡಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ದೇಹವನ್ನೂ ಕೂಡ ದಾನ ಮಾಡಿದ್ದಾರೆ.
ಮಂಗಳೂರಿನಲ್ಲಿ ದಂಪತಿಗಳ ಮನೆಗೆ ಭೇಟಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದಂಪತಿಗೆ ಸಾಂತ್ವನ ಹೇಳಿದ್ದಾರೆ. ಅವರ ದಾನದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. “ದಂಪತಿಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ. ಇತರರಿಗೆ ಪ್ರೇರಣೆಯಾಗಲಿದೆ” ಎಂದು ಹೇಳಿದ್ದಾರೆ.