ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಭಾರೀ ಮಳೆ ಸುರಿಯಿತು. ಹೀಗಾಗಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಂತಹ ಕಲ್ಲಡ್ಕದಲ್ಲಿ ರಸ್ತೆಯೇ ಮಾಯವಾದ ದೃಶ್ಯ ಕಂಡುಬಂದಿದೆ.
ಸತತ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಕೆಸರು ತುಂಬಿದ ನೀರು ಹರಿದ ಪರಿಣಾಮ ರಸ್ತೆಯೇ ಮಾಯವಾದ ದೃಶ್ಯ ಕಂಡುಬಂತು. ಹೀಗಾಗಿ ವಾಹನ ಸವಾರರು ಕೆಸರು ನೀರು ತುಂಬಿದ ರಸ್ತೆಯಲ್ಲಿ ಹೋಗೋಕೆ ಪರದಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ಹಬ್ಬ; ರಾಜ್ಯ ಮತ್ತು ತೆಲಂಗಾಣ ಸಿಎಂಗಳ ಆಹ್ವಾನಕ್ಕೆ ನಿರ್ಧಾರ
ಕಲ್ಲಡ್ಕದಲ್ಲಿ ಸದ್ಯ ಅಡ್ಡ ಹೊಳೆ-ಬಿಸಿರೋಡ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇದೀಗ ಸತತ ಮಳೆಯಿಂದ ಕಲ್ಲಡ್ಕದಲ್ಲಿ ರಸ್ತೆಯ ಅವ್ಯವಸ್ಥೆ ಮತ್ತಷ್ಟು ಹೆಚ್ಚಾಗಿದೆ. ಕೆಸರು ನೀರು ತುಂಬಿದ ರಸ್ತೆಯಲ್ಲಿ ಸಂಚರಿಸಲು ಪರದಾಡಿದ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
