ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿ.ಸಿ ರೋಡ್‌ಅನ್ನು ಅಗಲೀಕರಣ ಮಾಡಲು ಗಡಿಯಾರ ಪ್ರದೇಶದಲ್ಲಿ ರಸ್ತೆ ಬದಿಯ ಗುಡ್ಡ ಅಗೆಯಲಾಗಿದೆ. ಪರಿಣಾಮ, ರಸ್ತೆ ಪಕ್ಕದಲ್ಲೇ ಇದ್ದ ಸರ್ಕಾರಿ ಶಾಲೆ ಮತ್ತು ಹೈ-ವೋಲ್ಟೇಜ್ ವಿದ್ಯುತ್ ತಂತಿ ಹಾದು ಹೋಗಿರುವ ಕಂಬ ಕುಸಿದು ಬೀಳುವ ಆಂತಕ ಎದುರಾಗಿದೆ. ಅಗೆಯಲಾಗಿರುವ ಗುಡ್ಡಕ್ಕೆ ಶಾಲೆ ಮತ್ತು ವಿದ್ಯುತ್ ಕಂಬದ ಬಳಿ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಗುಡ್ಡ ಅಗೆದ ಬಳಿಕ ಶಾಲೆಗೆ ಗೋಡೆ ಮತ್ತು ವಿದ್ಯುತ್ ಕಂಬ ಕುಸಿದು ಬೀಳುತ್ತದೆ ಎಂದು ಸ್ಥಳೀಯರು ಆಂತಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸೋಮವಾರ ಶಾಲೆಗೆ ರಜೆ ನೀಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಬಂಟ್ವಾಳ ತಹಶೀಲ್ದಾರ್, ಮಂಗಳವಾರದಿಂದ (ಜುಲೈ 4) ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.