ಕರಾವಳಿ | ಸಂಘಪರಿವಾರದ ವಿವಾದದ ನಡುವೆಯೂ ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂಗಳು

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ ಸಿ ರೋಡ್‌ನಲ್ಲಿ ಸಂಘಪರಿವಾರದ ವಿವಾದದ ನಡುವೆಯೂ ಹಿಂದೂ ಬಾಂಧವರು ಮೀಲಾದುನ್ನಬಿಯ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ, ಬೋಳಿಯಾರ್, ಅನಂತಾಡಿ, ಕಾಡುಮಠ, ಪೆರ್ಲದಬೈಲು ಇತ್ಯಾದಿ ಪ್ರದೇಶಗಳಲ್ಲಿ ಮೀಲಾದುನ್ನಬಿಯ ಮೆರವಣಿಗೆಯಲ್ಲಿದ್ದ ಮುಸ್ಲಿಮರಿಗೆ ಸಿಹಿ ತಿಂಡಿ, ಪಾನೀಯಗಳನ್ನು ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಹಿನ್ನೆಲೆಯಲ್ಲಿ ಸೋಮವಾರ ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಮೀಲಾದುನ್ನಬಿಯನ್ನು ಆಚರಿಸಿದ್ದಾರೆ.

Advertisements

ಬಂಟ್ವಾಳ ಕಾಂಗ್ರೆಸ್‌ ಮುಖಂಡನ ಪ್ರಚೋದನಕಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು, ವಿವಾದಾತ್ಮಕ ಹೇಳಿಕೆ ನೀಡುವ ಶರಣ್ ಪಂಪ್‌ವೆಲ್ ನೇತೃತ್ವದಲ್ಲಿ ಬಿಸಿ ರೋಡ್‌ನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಇದರಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು.

ಇದೆಲ್ಲದರ ನಡುವೆ ಮಾಣಿ, ಅನಂತಾಡಿ, ಕೊಡಾಜೆ, ಬೋಳಿಯಾರ್ ಸೇರಿದಂತೆ ಹಲವು ಕಡೆಯ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.

ಉಡುಪಿಯಲ್ಲೂ ಹಿಂದೂಗಳಿಂದ ಸಿಹಿ ತಿಂಡಿ ವಿತರಣೆ

ಹಬ್ಬಗಳ ಸಂದರ್ಭದಲ್ಲಿ ಪರಸ್ಪರ ವೈನಮಸ್ಸು ಉಂಟು ಮಾಡುವ ಪ್ರಸಂಗಗಳು ಕರಾವಳಿಯಲ್ಲಿ ನಡೆಯುತ್ತಿವೆ.ನಾಗಮಂಗಲದಲ್ಲಿ ನಡೆದ ಘಟನೆ ಮತ್ತು ಬಂಟ್ವಾಳದಲ್ಲಿ ಈಗ ನಡೆಯುತ್ತಿರುವ ಘಟನೆಗಳೇ ಇದಕ್ಕೆ ಸಾಕ್ಷಿ. ಆದರೆ ಸೌಹಾರ್ದ ಬಯಸುವ ಮನಸ್ಸುಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ ಎಂಬುದಕ್ಕೆ ಪದೇಪದೆ ಸಾಕ್ಷಿಗಳು ಸಿಗುತ್ತಿವೆ.

ಇಂದು ಉಡುಪಿಯ ನೇಜಾರಿನ ಜಾಮಿಯಾ ಮಸೀದಿಯಲ್ಲಿ ಮೀಲಾದ್ ಪ್ರಯುಕ್ತ ನಡೆದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೆಳಾರ್ಕಳಬೆಟ್ಟು -ನೇಜಾರಿನ ಹಿಂದೂ ಬಾಂಧವರು ಮುಸಲ್ಮಾನ ಬಾಂಧವರಿಗೆ ತಂಪು ಪಾನೀಯ ನೀಡುವ ಮೂಲಕ ಪರಸ್ಪರ ಧರ್ಮ ಸೌಹಾರ್ದತೆ ಮೆರೆದಿದ್ದು, ಕರಾವಳಿಯ ಜನರಿಗೆ ಸೌಹಾರ್ದದ ಸಂದೇಶ ರವಾನಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, “ಬಂಟ್ವಾಳದ ಬಿಸಿ ರೋಡ್ ನಲ್ಲಿ “ಈದ್ ಮಿಲಾದ್ ಮೆರವಣಿಗೆ ತಡೆಯುತ್ತೇವೆ” ಎಂದು ಬಜರಂಗದಳದ ಕಾರ್ಯಕರ್ತರು ಶರಣ್ ಪಂಪ್ ವೆಲ್ ನ ಸಿನಿಮಾ ಸ್ಟೈಲ್ ನಾಯಕತ್ವದಲ್ಲಿ ಆರ್ಭಟಿಸುತ್ತಿರುವಾಗ ಪಕ್ಕದ ಅನಂತಾಡಿ, ಕೊಡಾಜೆ, ಮಾಣಿಯಲ್ಲಿ ಹಿಂದೂ ಸಮುದಾಯದ ಸೌಹಾರ್ದ ಪ್ರಿಯ ಬಂಧುಗಳು ಮೀಲಾದ್ ಮೆರವಣಿಗೆಗೆ ಸಿಹಿ ಹಂಚಿ ಮನುಷ್ಯ ಧರ್ಮವನ್ನು ಎತ್ತಿಹಿಡಿದಿದ್ದಾರೆ. ಅವರಿಗೆ ನಾಡು ಋಣಿ” ಎಂದು ತಿಳಿಸಿದ್ದಾರೆ.

ಸೌಹಾರ್ದ 2

“ನಿನ್ನೆಯಿಂದ ಶುರುವಾಗಿರುವ ರಾಜಕೀಯ ಪ್ರೇರಿತ ಉದ್ವಿಗ್ನ ಸ್ಥಿತಿಯ ನಡುವೆಯೂ, ವಿಚಲಿತರಾಗದೆ ಸಿಹಿ ಹಂಚುವ ನಿರ್ಧಾರಕ್ಕೆ ಬದ್ದರಾದ ಈ ಯುವಕರಿಗೆ ಜನತೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ನಮ್ಮ ರಾಜಕಾರಣಿಗಳು, ಶಾಸಕರುಗಳು ಈ ಯುವಕರಿಂದ ಪಾಠ ಕಲಿಯಬೇಕು. ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ, ಶಾಸಕ ಭರತ್ ಶೆಟ್ಟಿ, ವೇದವ್ಯಾಸ್ ಕಾಮತರಿಗೆ ಈ ಯುವಕರು ತಮ್ಮ ಕೃತಿಯ ಮೂಲಕ ಸರಿಯಾದ ಉತ್ತರ ಕೊಟ್ಟಿದ್ದಾರೆ. ಇಷ್ಟು ಸಾಕು” ಎಂದು ತಿಳಿಸಿದ್ದಾರೆ.

ಸೌಹಾರ್ದ5
ಸೌಹಾರ್ದ3
ಸೌಹಾರ್ದ 3
ಮೀಲಾದ್
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X