ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿನ ಜನರು ಮಾತನಾಡುವ ಭಾಷೆಗಳ ಆರು ಅಕಾಡೆಮಿಗಳು (ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ, ಕೊಡವ ಮತ್ತು ಯಕ್ಷಗಾನ) ಒಗ್ಗೂಡಿ ಸೆಪ್ಟೆಂಬರ್‌ನಲ್ಲಿ ‘ಬಹುಸಂಸ್ಕೃತಿ ಉತ್ಸವ’ ನಡೆಸಲು ನಿರ್ಧರಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಆರು ಆಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು ಗುರುವಾರ ಸಭೆ ನಡೆಸಿದ್ದಾರೆ. ಸೆಪ್ಟೆಂಬರ್ 24 ಮತ್ತು 25ರಂದು ಮಂಗಳೂರಿನಲ್ಲಿ ಸುವರ್ಣ ಕರ್ನಾಟಕ ‘ಬಹುಸಂಸ್ಕೃತಿ ಉತ್ಸವ’ ನಡೆಸಲು ನಿರ್ಧರಿಸಿದ್ದಾರೆ. ಉತ್ಸವಕ್ಕಾಗಿ ಹಲವಾರು ರೂಪುರೇಷೆಗಳನ್ನು ಸಭೆಯಲ್ಲಿ ಚರ್ಚಿಸಿದ್ದಾರೆ.
ಸಭೆಯಲ್ಲಿ ಆರೂ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು, ರಿಜಿಸ್ಟ್ರಾರ್‌ಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಭಾಗವಹಿಸಿದ್ದರು.